ಜನಪ್ರಿಯ ಇ-ಕಾಮರ್ಸ್ ಕಂಪನಿ ಫ್ಲಿಪ್​ಕಾರ್ಟ್​ ತನ್ನದೇ ಎಡವಟ್ಟಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಟ್ರೋಲ್​ ಆಗಿದೆ.  ಫ್ಲಿಪ್​ಕಾರ್ಟ್ ಸಿಬ್ಬಂದಿಯೋರ್ವ ಗ್ರಾಹಕರ ಕಾಮೆಂಟ್​ಗೆ ಬರೆದಿದ್ದ ಪ್ರತಿಕ್ರಿಯೆ ಎಲ್ಲರ ಹುಬ್ಬೇರಿಸಿದೆ. ಕೊನೆಗೆ ತಪ್ಪು ಅರ್ಥ ಮಾಡಿಕೊಂಡು ಅದಕ್ಕೆ ಕ್ಷಮೆಯನ್ನೂ ಕೇಳಿದ್ದಾರೆ.
ಫ್ಲಿಪ್​ಕಾರ್ಟ್​ ಫೇಸ್​​ಬುಕ್​ ಪೇಜ್​​ನಲ್ಲಿ ಗ್ರಾಹಕರೋರ್ವರು ಒಂದು ಪ್ರಶ್ನೆ ಕೇಳಿದ್ದರು. ನಿಮ್ಮ ಕಂಪನಿಯ ಸೇವೆ ನಾಗಾಲ್ಯಾಂಡ್​​ನಲ್ಲಿ ಏಕಿಲ್ಲ? ಇಲ್ಲಿ ಯಾವುದೇ ಡೆಲಿವರಿಯನ್ನೂ ಯಾಕೆ ನೀವು ನೀಡುವುದಿಲ್ಲ? ನಾವಿನ್ನೂ ಭಾರತದ ಅಂಗವಾಗಿಯೇ ಇದ್ದೇವೆ..ನಮಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಹೇಳಿದ್ದರು.ಇದನ್ನೂ ಓದಿ:ಪತ್ನಿಯ ರಕ್ತಸಿಕ್ತ ರುಂಡ ಹಿಡಿದು ಪೊಲೀಸ್​ ಠಾಣೆಗೆ ಹೋಗಿ ಶರಣಾದ ಭೂಪ…
ಅದಕ್ಕೆ ಫ್ಲಿಪ್​ಕಾರ್ಟ್ ಅಕೌಂಟ್​ನಿಂದ ಬಂದ ಪ್ರತಿಕ್ರಿಯೆ ಹೀಗಿತ್ತು…’ ಕ್ಷಮಿಸಿ..ನಮ್ಮೊಂದಿಗೆ ಶಾಪಿಂಗ್ ಮಾಡಬೇಕು ಎಂಬ ನಿಮ್ಮ ಆಸಕ್ತಿಯನ್ನು ನಾವು ಪ್ರಶಂಸಿಸುತ್ತೇವೆ. ಆದರೆ ಮಾರಾಟಗಾರರು ಭಾರತದ ಹೊರಗಿನ ಪ್ರದೇಶಗಳಿಗೆ ಸೇವೆ ಒದಗಿಸುವುದಿಲ್ಲ’.
ನಾಗಾಲ್ಯಾಂಡ್ ಭಾರತದಲ್ಲಿಲ್ಲ ಎಂದು ಭಾವಿಸಿದ ಫ್ಲಿಪ್​ಕಾರ್ಟ್​ನ್ನು ನೆಟ್ಟಿಗರು ಸಿಕ್ಕಾಪಟೆ ಟ್ರೋಲ್​ ಮಾಡಿದ್ದಾರೆ. ನಂತರ ತಮ್ಮ ತಪ್ಪನ್ನು ಸರಿಪಡಿಸಿಕೊಂಡ ಫ್ಲಿಪ್​ಕಾರ್ಟ್​, ಅಜಾಗರೂಕತೆಯಿಂದ ತಪ್ಪಾಗಿದೆ. ನಾಗಾಲ್ಯಾಂಡ್​ ಸೇರಿ ರಾಷ್ಟ್ರದ ಎಲ್ಲ ಕಡೆಗಳಲ್ಲೂ ನಮ್ಮ ಸೇವೆಯನ್ನು ಸರಿಯಾಗಿ ಒದಗಿಸುತ್ತಿರುವ ಬಗ್ಗೆ ಇನ್ನೊಮ್ಮೆ ಖಚಿತಪಡಿಸಿಕೊಳ್ಳಲಾಗುವುದು ಎಂದು ಸ್ಪಷ್ಟನಾ ಕಾಮೆಂಟ್​ ಬರೆದಿದೆ. ಆದರೆ ಅಷ್ಟರಲ್ಲಾಗಲೇ ಫ್ಲಿಪ್​ಕಾರ್ಟ್​ನ್ನು ಅನೇಕರು ಆಡಿಕೊಂಡು ನಕ್ಕಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 7 =
Remember me
