ಬೆಂಗಳೂರು:ಪ್ರವಾಸಕ್ಕೆ ಹೋಗಬೇಕು ಎಂದರೆ ಯಾವ ಸ್ಥಳ, ಎಷ್ಟು ಬಜೆಟ್​ ಎಂದು ಮೊದಲೇ ನಿರ್ಧಾರ ಮಾಡುತ್ತೇವೆ. ನಂತರ ಬಸ್​, ಕಾರ್​, ಟ್ರೈನ್​, ಪ್ಲೈಟ್​ ಯಾವುದು ಸೂಕ್ತ? ಯಾವ ಸಮಯಕ್ಕೆ ಹೋಗಬೇಕು. ಊಟ- ತಿಂಡಿ ಹಾಗೂ ಎಲ್ಲಿ ವಾಸ್ತವ್ಯ ಹೂಡುವುದು ಎಂದು ಯೋಚನೆ ಮಾಡುತ್ತೇವೆ. ಆದರೆ ಇಲ್ಲೊಬ್ಬ ವಿದೇಶಿ ಪ್ರವಾಸಿಗ ಲಿಫ್ಟ್ ಕೇಳಿಕೊಂಡೇ 14 ದೇಶಗಳನ್ನು ಸುತ್ತಿದ್ದಾನೆ ಎಂದರೆ ಖಂಡಿತಾ ಆಶ್ಚರ್ಯವಾಗುತ್ತದೆ ಅಲ್ವಾ? ಬನ್ನಿ ಈತನ ಅಸಲಿ ಕಹಾನಿ ಏನು ಅಂತಾ ನೋಡೋಣ….
ಲುಕಾಸ್ ವೆನ್ನಾರ್ ಎನ್ನುವ ವಿದೇಶಿ ಪ್ರವಾಸಿಗ, ಫ್ರಾನ್ಸ್ ದೇಶದ ಪ್ರಜೆ. 23 ವರ್ಷದ ಲುಕಾಸ್ ವೆನ್ನಾರ್ ಕಳೆದ 7 ತಿಂಗಳಿನಿಂದ ವಿಶ್ವ ಪರ್ಯಟನೆ ಮಾಡುತ್ತಿದ್ದು ,ಇದಕ್ಕಾಗಿ ಅವನು ಒಂದೇ ಒಂದು ರೂಪಾಯಿ ಸಂಚಾರಿ ವೆಚ್ಚ ಖರ್ಚು ಮಾಡಿಲ್ಲ.
ಲುಕಾಸ್ ವೆನ್ನಾರ್‌ 2023 ಫೆಬ್ರವರಿ 4 ರಂದು ಫ್ರಾನ್ಸ್ ನಿಂದ ತನ್ನ ವಿಶೇಷ ಪ್ರಯಾಣ ಆರಂಭಿಸಿದ್ದಾನೆ. ಎಲ್ಲಿಯೂ ಟಿಕೇಟ್ ಖರೀದಿಸದೆ ಕೇವಲ ಲಿಫ್ಟ್ ಕೋಡಿ ಎಂದು ಕೇಳುವ ಮೂಲಕ ಪ್ರಯಾಣ ಮಾಡುತ್ತಿರುವ ಇವನು ಹಡಗು, ಕಾರು, ಬೈಕ್, ಟ್ರಕ್‌ ಗಳ ಮೂಲಕ ಸಂಚಾರ ಮಾಡಿಕೊಂಡು ಫ್ರಾನ್ಸ್‌ನಿಂದ ಆರಂಭಿಸಿ ಆಫ್ರಿಕಾ, ಚೈನಾ, ಟಿಬೇಟ್, ಖಜಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶ ಸೇರಿ 14 ಕ್ಕೂ ಹೆಚ್ಚು ದೇಶಗಳಲ್ಲಿ ಸುತ್ತಾಡಿದ್ದಾನೆ.
ಇದೀಗ ಭಾರತಕ್ಕೆ ಬಂದಿಳಿದಿದ್ದಾನೆ. ಉತ್ತರ ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಂಚಾರ ಮಾಡುತ್ತಿರುವ ಈತ ಮೈಸೂರಿಗೆ ಬಂದಿದ್ದಾನೆ. ಶ್ರೀರಂಗಪಟ್ಟಣದ ಭರತ್ ಎಂಬುವರು ಮೈಸೂರು ವರೆಗೆ ಲಿಫ್ಟ್ ಕೊಟ್ಟಿದ್ದಾರೆ.
ಮೈಸೂರು ಪ್ರವಾಸ ಮುಗಿಸಿ, ಶ್ರೀಲಂಕಾ ಕಡೆಗೆ ಸಂಚಾರ ಆರಂಬಿಸಿರುವ ಈತನಿಗೆ ಸ್ವಿಟ್ಜರ್ಲೆಂಡ್‌‌ ವರೆಗೆ ಲಿಫ್ಟ್ ಮೂಲಕವೇ ಸಂಚಾರ ಮಾಡುವ ಗುರಿ ಇದೆ ಎಂದು ತಿಳಿದು ಬಂದಿದೆ.
VIDEO | ಐಸ್​ ವಾಟರ್​ ಬ್ಯೂಟಿ ಟಿಪ್ಸ್​ ನೀಡಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − four =
Remember me
