ಪಟನಾ:ನಟ ಸುಶಾಂತ್‌ಸಿಂಗ್ ರಜಪೂತ್ ಸಾವಿನ ಪ್ರಕರಣ ತನಿಖೆಗೆ ನಿಯುಕ್ತಿಗೊಂಡಿರುವ ಬಿಹಾರದ ಪೊಲೀಸ್ ಅಧಿಕಾರಿ ವಿನಯ್ ತಿವಾರಿ ಕವಿಯೂ ಹೌದು. ಅವರು ರಚಿಸಿ, ತನ್ಮಯತೆಯಿಂದ ವಾಚಿಸಿರುವ/ಹಾಡಿರುವ ಕವನವನ್ನು ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಮೂಲತಃ ಉತ್ತರಪ್ರದೇಶದ ಲಲಿತ್‌ಪುರದವರಾದ ವಿನಯ್ ತಿವಾರಿ, 2015ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಅವರ ತಂದೆ ಕೃಷಿಕ. ಬಡತನದಲ್ಲೇ ಮಗನನ್ನು ಓದಿಸಿದರು. ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ವಿನಯ್, ಓದು ಮುಂದುವರಿಸಲು ರಾಜಸ್ಥಾನದ ಕೋಟಾಕ್ಕೆ ಹೋದರು. ನಂತರ ಐಐಟಿ- ಭುವನೇಶ್ವರದಲ್ಲಿ ಪ್ರವೇಶ ಪಡೆಯುವಲ್ಲಿಯೂ ಯಶಸ್ವಿಯಾದರು. ಪದವಿ ಓದುತ್ತಲೇ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಗೂ ತಯಾರಿ ಮಾಡಿಕೊಂಡರು. ನಾಗರಿಕ ಸೇವಾ ಪರೀಕ್ಷೆ ಪಾಸು ಮಾಡಲೆಂದು ದೆಹಲಿಗೆ ಹೋದರು.
ಈ ಎಲ್ಲವನ್ನೂ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ವಿನಯ್ ತಿವಾರಿ, ‘‘ನನ್ನ ವಿದ್ಯಾಭ್ಯಾಸಕ್ಕಾಗಿ ತಂದೆ ಸಾಲ ಮಾಡಿದರು. ಅವರ ಕಷ್ಟ ನೋಡಲಾಗದೆ ನಾನು ವಿದ್ಯಾಭ್ಯಾಸದಲ್ಲಿ ಉನ್ನತ ಸ್ಥಾನಕ್ಕೇರಲು ಶಕ್ತಿ ಮೀರಿ ಪ್ರಯತ್ನಿಸಿದೆ. ಅದರಲ್ಲಿ ಯಶಸ್ವಿಯೂ ಆದೆ. ಆದರೆ ಅದೆಲ್ಲವೂ ಆರ್ಥಿಕವಾಗಿ ಸಬಲರಾಗುವುದಕ್ಕಾಗಿ ಮಾಡಿದ ಪ್ರಯತ್ನ ಮಾತ್ರ ಆಗಿತ್ತು. ನಿಜ ಹೇಳಬೇಕೆಂದರೆ ನನ್ನ ಆಸಕ್ತಿ ಇದ್ದುದೇ ಬೇರೆಯದರಲ್ಲಿ. ಅದು, ಕಾವ್ಯ’’ ಎಂದು ವಿವರಿಸಿದ್ದಾರೆ.
‘‘ಆದರೆ ಆರ್ಥಿಕ ಅನಿವಾರ್ಯತೆಯೇ ವೃತ್ತಿಯೂ ಆಗಿ ಮಾರ್ಪಾಟಾಯಿತು. ಯುಪಿಎಸ್‌ಸಿಯಲ್ಲಿ ಎರಡನೇ ಪ್ರಯತ್ನದಲ್ಲೇ (2019) ಪಾಸಾದೆ. ಪಟನಾ ಕೇಂದ್ರ ವಿಭಾಗದ ಎಸ್ಪಿಯಾಗಿ ನಿಯುಕ್ತಿಗೊಂಡೆ’’ ಎಂದು ವಿವರಿಸಿದ್ದಾರೆ. ಕರೊನಾ ವೈರಸ್ ಎದುರಿಸುವಲ್ಲಿ ಹೇಗೆ ನಮ್ಮ ಅತ್ಮಸ್ಥೈರ್ಯವನ್ನು ಬಳಸಿಕೊಳ್ಳಬೇಕು ಎಂಬುದರ ಕುರಿತು ತಾವೇ ಬರೆದಿದ್ದ ಪದ್ಯವೊಂದನ್ನು ಹಾಡಿ ಅದರ ವಿಡಿಯೋವನ್ನು ಅವರು ಇತ್ತೀಚೆಗೆ ಹಾಕಿದ್ದರು. ಅದು ವೈರಲ್ ಆಗಿತ್ತು. ಆಗಾಗ ಅವರು ತಮ್ಮ ಪದ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
https://www.facebook.com/VVani4U/videos/336282850877214/?t=0
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 18 =
Remember me
