ಹೈದರಾಬಾದ್: ಮಾಲ್​ಗಳಲ್ಲಿ, ಸೂಪರ್​ ಮಾರ್ಕೆಟ್​ಗಳಲ್ಲಿ ಮಕ್ಕಳು ಎಸ್ಕಲೇಟರ್​​ಗಳಲ್ಲಿ ಸಿಲುಕಿಕೊಳ್ಳುವುದು, ಮಹಡಿಯಿಂದ ಬೀಳುವುದು ಮುಂತಾದ ಪ್ರಕರಣಗಳು ನಡೆಯುತ್ತಿರುತ್ತವೆ. ಆದರೆ ಇಲ್ಲೊಂದು ಕಡೆ ಬಾಲಕಿಯೊಬ್ಬಳು ಫ್ರಿಡ್ಜ್​ ಡೋರ್ ತೆರೆದು ಸಾವಿಗೀಡಾಗಿದ್ದಾಳೆ.
ಹೈದರಾಬಾದ್​ನ ನಿಜಾಮಾಬಾದ್​ ಜಿಲ್ಲೆಯ ನವಿಪೇಟೆ ಮಂಡಲದ ಸೂಪರ್ ​ಮಾರ್ಕೆಟ್​ವೊಂದರಲ್ಲಿ ಈ ಪ್ರಕರಣ ನಡೆದಿದೆ. ರಿಷಿತಾ ಎಂಬ ನಾಲ್ಕು ವರ್ಷದ ಬಾಲಕಿ ಪ್ರಾಣ ಕಳೆದುಕೊಂಡವಳು. ಈಕೆ ತನ್ನ ತಂದೆ ರಾಜಶೇಖರ್ ಜೊತೆ ಸೂಪರ್​ಮಾರ್ಕೆಟ್​ಗೆ ಹೋಗಿದ್ದಳು.
ರಾಜಶೇಖರ್ ಫ್ರಿಡ್ಜ್​ವೊಂದರಲ್ಲಿ ಇರುವ ಐಸ್​ಕ್ರೀಮ್​ಗಳನ್ನು ನೋಡುತ್ತಿದ್ದರು. ಆಗ ಪುತ್ರಿ ರಿಷಿತಾ ಪಕ್ಕದಲ್ಲಿ ಇನ್ನೊಂದು ಫ್ರಿಡ್ಜ್​ನಲ್ಲಿರುವ ಚಾಕೊಲೇಟ್​​ಗಳಿಂದ ಆಕರ್ಷಿತಳಾಗಿದ್ದಳು. ಆ ಫ್ರಿಡ್ಜ್​ನ ಬಳಿಗೆ ಹೋದ ಆಕೆ ಬಾಗಿಲು ತೆರೆಯುತ್ತಿದ್ದಂತೆ ವಿದ್ಯುತ್​ ಶಾಕ್​ ತಗುಲಿದೆ. ತೀವ್ರ ಅಸ್ವಸ್ಥಗೊಂಡ ಬಾಲಕಿ ಸಾವಿಗೀಡಾಗಿದ್ದಾಳೆ. ಈ ಘಟನೆ ಸೂಪರ್​​ ಮಾರ್ಕೆಟ್​ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಎಮ್ಮೆಗೆ ನೀರು ಕುಡಿಸಲು ಹೋದ ಪತ್ನಿಗೆ ಶಾಕ್; ಹೆಂಡತಿಯನ್ನು ರಕ್ಷಿಸಲು ಧಾವಿಸಿದ ಗಂಡ; ಕೊನೆಗೆ ಇಬ್ಬರ ಸಾವು!
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:13 − four =
Remember me
