ಪ್ಯಾರಿಸ್​:ಫ್ರಾನ್ಸ್​ ಅಧ್ಯಕ್ಷರಾಗಿ 44 ವರ್ಷದ ಇಮ್ಯಾನುವೆಲ್​ ಮಾಕ್ರನ್​ ಅವರು ಪುನರ್​ ಆಯ್ಕೆಯಾಗಿದ್ದಾರೆ. ಎದುರಾಳಿಯಾಗಿದ್ದ ಕಟ್ಟರ್​ ಬಲಪಂಥೀಯ ನಾಯಕಿ ಮರೀನ್ ಲೆ ಪೆನ್​ ಅವರು ಸೋಲುಂಡಿದ್ದಾರೆ. ಚಲಾವಣೆಯಾಗಿದ್ದ ಒಟ್ಟು ಮತಗಳ ಪೈಕಿ ಶೇ.58 ರಷ್ಟು ಮಾಕ್ರನ್​ ಪರವಾಗಿ ಬಂದಿದೆ.
ಫ್ಯಾರಿಸ್​ನ ವಿಶ್ವಪ್ರಸಿದ್ಧ ಐಫೆಲ್​ ಟವರ್​ ಬಳಿ ಅಭಿಮಾನಿಗಳ ಜತೆ ವಿಜಯೋತ್ಸವ ಆಚರಿಸಿದ ಮ್ಯಾಕ್ರನ್, ಶೀಘ್ರವೇ ಬದಲಾವಣೆ ಆಗುತ್ತೆ. ಭರವಸೆ ಇರಲಿ ಎಂದಿದ್ದಾರೆ. ಅತ್ತ ಮರೀನ್​ ಲೆ ಪೆನ್​ ಅಭಿಮಾನಿಗಳು ಕೂಡ ಲೆ ಪೆನ್​ ಪರ ಘೋಷಣೆ ಕೂಗಿದ್ದಾರೆ. ಯಾವುದೇ ಕಾರಣಕ್ಕೂ ರಾಜಕೀಯದಿಂದ ಹೊರಹೋಗುವುದಿಲ್ಲ. ನನ್ನ ಹೋರಾಟ ಮುಂದುವರಿಯಲಿದೆ. ಮುಂಬರುವ ಜೂನ್​ನಲ್ಲಿ ನಡೆಯಲಿರುವ ಶಾಸಕಾಂಗ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವೆ ಎಂದು ಸವಾಲು ಹಾಕಿದ್ದಾರೆ.

ಭಾನುವಾರ ನಡೆದ ಫ್ರಾನ್ಸ್​ ಅಧ್ಯಕ್ಷೀಯ ಚುನಾವಣೆ ಇಡೀ ಜಗತ್ತಿನ ಗಮನ ಸೆಳೆದಿತ್ತು. ಯೂಕ್ರೇನ್​ ಮೇಲೆ ರಷ್ಯಾ ದಾಳಿ ಮುಂದುವರಿಸಿದ್ದು, ಯುದ್ಧದ ಮೇಲೆ ನ್ಯಾಟೋ ಪಾತ್ರ, ಐರೋಪ್ಯ ಒಕ್ಕೂಟದ ನಾಯಕತ್ವ ವಿಚಾರದಲ್ಲೂ ಫ್ರಾನ್ಸ್​ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಪ್ರಭಾವ ಬೀರಲಿದೆ.
ಬೆಡ್​ ರೂಮಲ್ಲಿ ಎಲೆಕ್ಟ್ರಿಕ್​​ ಸ್ಕೂಟರ್​ನ ಬ್ಯಾಟರಿ ಸ್ಫೋಟ: ಪತಿ ಸಾವು, ಪತ್ನಿ ಸ್ಥಿತಿ ಚಿಂತಾಜನಕ… ಸ್ಕೂಟರ್​ ಖರೀದಿಸಿದ ಮರುದಿನವೇ ದುರಂತ

ಪಕ್ಕದ ರೂಮಲ್ಲಿ ಗಂಡ ಮಲಗಿದ್ರೂ ನಡೆದೇ ಹೋಯ್ತು ಘೋರ ದುರಂತ! ಬೆಳಗ್ಗೆ ಪತ್ನಿಯ ಕೋಣೆಗೆ ಹೋದವನಿಗೆ ಕಾದಿತ್ತು ಶಾಕ್​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen + two =
Remember me
