ಆಂಧ್ರಪ್ರದೇಶ​​:ಸ್ನೇಹಕ್ಕಾಗಿ ಸಾಯುತ್ತೇವೆ ಎನ್ನುವವರು ನಮ್ಮ ಸುತ್ತಮುತ್ತ ಅನೇಕರಿದ್ದಾರೆ. ಗೆಳೆಯರು ಮೋಜಿಗಾಗಿ ಹೀಗೆ ಹೇಳಿಕೊಳ್ಳುತ್ತಾರೆ. ಆದರೆ ಕಡಪ ಜಿಲ್ಲೆಯ ಯುವಕನೊಬ್ಬ ತನ್ನ ಸ್ನೇಹಿತರಿಗಾಗಿ ಪ್ರಾಣ ಕೊಡುತ್ತೇನೆ ಎಂದು ಕುಡಿದ ಅಮಲಿನಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ:ಮಗ ಸಿಎ ಪರೀಕ್ಷೆಯಲ್ಲಿ ಫೇಲ್ ಆದ ಎಂದು ಪ್ರಾಣ ಬಿಟ್ಟ ತಾಯಿ
ಇಬ್ರಾಹಿಂ ಮೃತ ವ್ಯಕ್ತಿ. ಈತ ಮದ್ಯದ ಅಮಲಿನಲ್ಲಿ ತನ್ನ ಸ್ನೇಹಿತರಿಗಾಗಿ ಪ್ರಾಣ ಕೊಡುತ್ತೇನೆ ಎಂದು ಚಾಕುವಿನಿಂದ ಕಾಲು ಕತ್ತರಿಸಿಕೊಂಡಿದ್ದಾನೆ. ಆದರೆ ಚಾಕುವಿನ ಗಾಯದಿಂದ ಕಾಲಿನಿಂದ ಭಾರೀ ರಕ್ತಸ್ರಾವವಾಗಿ ಇಬ್ರಾಹಿಂ ಪ್ರಾಣ ಕಳೆದುಕೊಂಡಿದ್ದಾನೆ. ಕಡಪ ನಗರದ ಹಳೆ ಪುರಸಭೆ ಕಚೇರಿಯಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಅವಳಿ ಮಕ್ಕಳ ಶಾಲೆ; ಒಂದೇ ಸ್ಕೂಲ್​​​ನಲ್ಲಿದ್ದಾರೆ 17 ಸೆಟ್ ಅವಳಿ ವಿದ್ಯಾರ್ಥಿಗಳು
ಮೃತಪಟ್ಟ ಇಬ್ರಾಹಿಂ ವಿರುದ್ಧ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿದ್ದವು. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಇಬ್ರಾಹಿಂ ಸಾವಿನ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಡಪ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:ಟೈಟಾನಿಕ್ ಸಿನಿಮಾದಲ್ಲಿ ಕೇಟ್ ವಿನ್ಸ್ಲೆಟ್ ಧರಿಸಿದ್ದ ಓವರ್ ಕೋಟ್ ಬೆಲೆ ಎಷ್ಟು ಗೊತ್ತಾ?
ಕುಡಿದ ಅಮಲಿನಲ್ಲಿದ್ದ ಇಬ್ರಾಹಿಂ ಸ್ನೇಹಕ್ಕೆ ಬೆಲೆಕೊಟ್ಟು ಗೆಳೆಯರಿಗಾಗಿ ಪ್ರಾಣ ಕೊಡುತ್ತೇನೆಂದು ಕೋಪದ ಭರದಲ್ಲಿ ಚಾಕುವಿನಿಂದ ತನ್ನ ಕಾಲಿಗೆ ಚಾಕು ಹಾಕಿದ್ದು, ತೀವ್ರ ರಕ್ತಸ್ರಾವವಾಗಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಮಧ್ಯರಾತ್ರಿ ಈ ಘಟನೆ ನಡೆದಿರುವುದರಿಂದ ಇದು ಆತ್ಮಹತ್ಯೆಯೇ ಅಥವಾ ಸ್ನೇಹಿತರ ಜತೆ ಬೇರೆ ವಿಚಾರವಾಗಿ ಇಬ್ರಾಹಿಂ ಸ್ನೇಹಿತರ ಮಧ್ಯೆ ಗಲಾಟೆ ಆಗಿದ್ಯಾ? ಎಂದು ಕಡಪಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಲ್ಲೊಂದು ಅಮಾನವೀಯ ಘಟನೆ; 18 ನಾಯಿಗಳಿಗೆ ವಿಷ ಪ್ರಾಷಣ ಮಾಡ್ಸಿ ಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
