ವಿಜಯವಾಡ:ಬೀಡಿ ಹಚ್ಚಿಕೊಳ್ಳಲು ಬೆಂಕಿ ಕಡ್ಡಿ ಕೊಡಲಿಲ್ಲ ಅಂತಾ ವ್ಯಕ್ತಿಯೊಬ್ಬ ವೃದ್ಧನನ್ನು ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ತಿರುಪತಿಯಲ್ಲಿ ನಡೆದಿದೆ.
ತಿರುಪತಿಯ ಮಹಿಳಾ ಬಸ್​ ನಿಲ್ದಾಣದಲ್ಲಿ ಇದೇ ತಿಂಗಳು 15ರಂದು ವೃದ್ಧನೊಬ್ಬನ ಕೊಲೆ ನಡೆದಿತ್ತು. ಪೊಲೀಸರು ಮಾಹಿತಿ ಕಲೆ ಹಾಕಿದಾಗ ಮೃತ ವ್ಯಕ್ತಿ ವಿಜಯವಾಡ ಜಿಲ್ಲೆಯ ಗ್ರಾಮವೊಂದರ ನಿವಾಸಿ ರೇಪಕುಲಾ ಲಕ್ಷ್ಮಣ ರಾವ್​ ಎಂಬುದು ಗೊತ್ತಾಯಿತು. ತಿರುಪತಿಯಲ್ಲಿ ಭಿಕ್ಷೆ ಬೇಡಲೆಂದು ಗ್ರಾಮವನ್ನು ತೊರೆದಿದ್ದ.
ಗುಂತಕಲ್ಲು ಮೂಲದ ಮಣಿರತ್ನಂ ಎಂಬ ಹಳೆಯ ಕ್ರಿಮಿನಲ್, ತಿರುಪತಿಯಲ್ಲಿ ರದ್ದಿ ಕಾಗದ ಸಂಗ್ರಹಿಸುತ್ತಿದ್ದ. ಇದೇ ತಿಂಗಳ 15ರಂದು ಲಕ್ಷ್ಮಣರಾವ್ ಬಸ್ ನಿಲ್ದಾಣದಲ್ಲಿ ಮಲಗಿದ್ದಾಗ ಮಣಿರತ್ನಂ ಅವರ ಬಳಿ ಹೋಗಿ ಬೆಂಕಿ ಕಡ್ಡಿ ಕೇಳಿದ್ದರು. ಈ ವೇಳೆ ವೃದ್ಧ ಬೆಂಕಿ ಕಡ್ಡಿ ಕೊಟ್ಟಿಲ್ಲ. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ತಾಳ್ಮೆ ಕಳೆದುಕೊಂಡ ಮಣಿರತ್ನಂ ಪಕ್ಕದಲ್ಲೇ ಬಿದ್ದಿದ್ದ ಕಲ್ಲುಬಂಡೆ ತೆಗೆದುಕೊಂಡು ಲಕ್ಷ್ಮಣರಾವ್ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾನೆ.
ಸಾಕ್ಷಿ ಸಿಗದಿರಲಿ ಎಂದು ರಕ್ತಸಿಕ್ತ ವಸ್ತ್ರವನ್ನು ಬದಲಿಸಿ ಸುಟ್ಟು ಮಣಿರತ್ನಂ ಪರಾರಿಯಾಗಿದ್ದ. ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಇದೇ 24ರಂದು ರೈಲ್ವೆ ನಿಲ್ದಾಣದ ಬಳಿ ಬಂದಿಸಿದ್ದಾರೆ. ಆರೋಪಿ ವಿರುದ್ಧ 2017ರಲ್ಲಿ ಮಸೀದಿಯೊಂದರಲ್ಲಿ ಕೊಲೆ ಮಾಡಿ ಸಾಕ್ಷ್ಯ ಅಳಿಸಿದ ಪ್ರಕರಣ ಇರುವುದು ಪತ್ತೆಯಾಗಿದೆ. ಈತನ ವಿರುದ್ಧ ಹಲವು ಕೊಲೆ, ಕಳ್ಳತನ ಪ್ರಕರಣಗಳಿವೆ.(ಏಜೆನ್ಸೀಸ್​)
ಇವನೇ ನೋಡಿ ನಿಜವಾದ ಬಾಹುಬಲಿ! ತಲೆ ಮೇಲೆ ಬೈಕ್​ ಹೊತ್ತು ಬಸ್​ ಏರಿದ ಈತನ ಶಕ್ತಿಗೆ ನೆಟ್ಟಿಗರು ಫಿದಾ

ನನಗೂ ವೈಷ್ಣವಿ ಗೌಡಗೂ ಎಂಗೇಜ್ಮೆಂಟ್ ಆಗಿಲ್ಲ, ಅದೊಂದು ಬೊಟ್ಟು ಇಡುವ ಶಾಸ್ತ್ರ: ವಿದ್ಯಾಭರಣ್

ಆಡಿಯೋ ವೈರಲ್​ ಆದ ಬೆನ್ನಲ್ಲೇ ಆ ಇಬ್ಬರು ಹುಡುಗಿಯರಿಗೆ ಖಡಕ್​ ಎಚ್ಚರಿಕೆ ಕೊಟ್ಟ ನಟ ವಿದ್ಯಾಭರಣ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eleven =
Remember me
