ನವದೆಹಲಿ:ಸರ್ವರೋಗಕ್ಕೂ ಒಂದೇ ಮದ್ದು ಎಂದಾದರೆ ಅಂಥ ವಸ್ತು ಯಾರಿಗೆ ಬೇಡ? ಖಂಡಿತ.. ಎಲ್ಲರೂ ಅದು ಸಿಗಲಿ ಎಂದು ಬಯಸುವುದು ಸಹಜ. ಅಂಥ ಒಂದು ವಸ್ತು ಭಾರತದಲ್ಲೇ ಇದೆ ಮತ್ತು ಅದಕ್ಕಾಗಿಯೇ ಚೀನಾದವರು ಹಲವು ಸಲ ಭಾರತದೊಳಕ್ಕೆ ನುಗ್ಗಿದ್ದಾರೆ ಎಂಬ ವಿಷಯ ಬಹಿರಂಗಗೊಂಡಿದೆ.
ಕಾರ್ಡಿಸೆಪ್ಸ್​ (Cordyceps) ಎಂಬ ಈ ಬೂಸ್ಟ್ ಚಿನ್ನಕ್ಕಿಂತಲೂ ಬೆಲೆಬಾಳುವುದಾಗಿದ್ದು, ಇದನ್ನು ಪಡೆಯಲೆಂದೇ ಚೀನಾದವರು ಬಹಳಷ್ಟು ಸಲ ಭಾರತದೊಳಕ್ಕೆ ಹೊಕ್ಕಿದ್ದರು ಎಂಬುದು ಕೂಡ ಬಹಿರಂಗಗೊಂಡಿದೆ. ಇಂಡೋ-ಫೆಸಿಪಿಕ್ ಸೆಂಟರ್ ಫಾರ್​ ಸ್ಟ್ರ್ಯಾಟೆಜಿಕ್​ ಕಮ್ಯುನಿಕೇಷನ್ಸ್​ (ಐಪಿಸಿಎಸ್​ಸಿ) ವರದಿ ಈ ಅಂಶವನ್ನು ಬಯಲಾಗಿಸಿದೆ.
ಈ ಬೂಸ್ಟ್​ ಭಾರತದ ಹಿಮಾಲಯ ಮತ್ತು ನೈಋತ್ಯ ಚೀನಾದ ಖಿಂಘಾಯ್-ಟಿಬೇಟಿಯನ್ ಪ್ರಾಂತ್ಯದಲ್ಲಿ ಸಿಗುತ್ತದೆ. ಪೀಪಲ್ಸ್ ಆಫ್ ಲಿಬರೇಷನ್​ ಆರ್ಮಿಯ ಸೈನಿಕರು ಅರುಣಾಚಲ ಪ್ರದೇಶ ಭಾಗದಲ್ಲಿ ಇದಕ್ಕಾಗಿ ಭಾರತವನ್ನು ಹಲವು ಸಲ ಪ್ರವೇಶಿಸಿದ್ದರು. ಏಕೆಂದರೆ ಚೀನಾದಲ್ಲಿ ಇದನ್ನು ಸಾಂಪ್ರದಾಯಿಕ ಔಷಧದಲ್ಲಿ ಬಳಕೆ ಮಾಡುತ್ತಿದ್ದು, ಅಲ್ಲಿನ ಜನರು ಯಾವುದೇ ವೈಜ್ನಾನಿಕ ಸಾಕ್ಷ್ಯ ಇರದಿದ್ದರೂ ಇದನ್ನು ನಪುಂಸಕತೆಯಿಂದ ಹಿಡಿದು ಅಜೀರ್ಣದವರೆಗೆ ಬಹುತೇಕ ಎಲ್ಲ ರೋಗಗಳಿಗೆ ಮದ್ದು ಎಂದು ಪರಿಗಣಿಸುತ್ತಿದ್ದಾರೆ ಎಂದು ಈ ವರದಿ ಹೇಳಿದೆ.
ಮಾತ್ರವಲ್ಲ, ಕಾರ್ಡಿಸೆಪ್ಸ್​ ಬೂಸ್ಟ್​ ಅತ್ಯಧಿಕವಾಗಿ ಉತ್ಪಾದಿಸುವುದು ಮತ್ತು ರಫ್ತು ಮಾಡುವುದು ಕೂಡ ಚೀನಾವೇ. ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಲಿ ಇದರ ಇಳುವರಿ ಇಳಿದಿದ್ದು, ಆ ಕೊರತೆಯ ನಡುವೆಯೂ ಬೇಡಿಕೆಯನ್ನು ಪೂರೈಸಿಕೊಳ್ಳಲು ಚೀನಾ ಇದಕ್ಕಾಗಿ ಭಾರತದೊಳಕ್ಕೆ ನುಗ್ಗುತ್ತಿದೆ ಎಂದು ಈ ವರದಿ ವಿವರಿಸಿದೆ.
ಕಾರ್ಡಿಸೆಪ್ಸ್ ಕೀಟಗಳ ಲಾರ್ವಾದ ಮೇಲೆ ಬೆಳೆಯುತ್ತದೆ. ಕೀಟದ ದೇಹಕ್ಕೆ ಕಾರ್ಡಿಸೆಪ್ಸ್​ ತಗುಲಿದ ಬಳಿಕ ಅಂಥ ಕೀಟವನ್ನು ತೆಗೆದುಕೊಂಡು ಅದನ್ನು ಸಾಯಿಸಿ ಈ ಬೂಸ್ಟ್ ಪಡೆಯಲಾಗುತ್ತದೆ. ಹಿಮಾಲಯದ ದೈತ್ಯಪತಂಗಗಳ ಮೇಲೆ ಕಾರ್ಡಿಸೆಪ್ಸ್​ ಸೈನೆನ್ಸಿಸ್ ಕಾಣಸಿಗುತ್ತಿದ್ದು, ಅವುಗಳ ಮೂಲಕ ಕಾರ್ಡಿಸೆಪ್ಸ್ ಪಡೆಯಲಾಗುತ್ತದೆ ಎಂಬೆಲ್ಲ ವಿವರಗಳು ಈ ವರದಿಯಲ್ಲಿವೆ.
ಹತ್ತು ಗ್ರಾಮ್​ ಚಿನ್ನದ ಬೆಲೆ 500 ಅಮೆರಿಕನ್ ಡಾಲರ್ ಆಗಿದ್ದು, ಅದೇ ಹತ್ತು ಗ್ರಾಮ್​ಗಳಷ್ಟು ಕಾರ್ಡಿಸೆಪ್ಸ್​ ಚಿಲ್ಲರೆ ಮಾರಾಟದಲ್ಲಿ 700 ಅಮೆರಿಕನ್ ಡಾಲರ್​​ಗೆ ಮಾರಾಟವಾಗುತ್ತದೆ. ಪ್ರಯೋಗಾಲಯದಲ್ಲಿ ಕಾರ್ಡಿಸೆಪ್ಸ್ ಪಡೆಯುವ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಹೀಗೆ ಸಹಜವಾಗಿ ಸಿಗುವ ಕಾರ್ಡಿಸೆಪ್ಸ್ ಪಡೆಯಲಾಗುತ್ತಿದ್ದು, ಇದಕ್ಕೆ ಬೇಡಿಕೆ ಹೆಚ್ಚಾಗಿದೆ ಎನ್ನುವುದೂ ವರದಿಯಲ್ಲಿದೆ.
ಮೈದಾನದಲ್ಲೇ ಕುಸಿದು ಬಿದ್ದು ಸಾವಿಗೀಡಾದ ಕ್ರಿಕೆಟಿಗ; ರನ್​ಗಾಗಿ ಓಡುತ್ತಿದ್ದಾಗ ಹೃದಯಾಘಾತ..
ನಾನು ಮೂರ್ಖನಾಗಲೂ ಸಿದ್ಧ ಎಂದ ಇಮೇಲ್ ಕಂಡುಹಿಡಿದಾತ!; ಮಸ್ಕ್​ ಹೊಸ ಟಾಸ್ಕ್​ಗೆ ಹೀಗೊಂದು ಟಾಂಗ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − three =
Remember me
