ನವದೆಹಲಿ:ಕೊಡಗು ಮೂಲದ ಹಿರಿಯ ಐಪಿಎಸ್ ಅಧಿಕಾರಿ ಮನೆಯಪಂಡ ಎ. ಗಣಪತಿ ನಾಗರಿಕ ವಿಮಾನಯಾನ ಭದ್ರತಾ (ಬಿಸಿಎಎಸ್) ವಿಭಾಗ ಮಹಾನಿರ್ದೇಶಕ (ಡಿಜಿ)ರಾಗಿ ನೇಮಕಗೊಂಡಿದ್ದಾರೆ. ಗಣಪತಿ ಅವರು 1986ರ ಉತ್ತರಪ್ರದೇಶ ಕೇಡರ್ ಐಪಿಎಸ್ ಅಧಿಕಾರಿಯಾಗಿ ಪೊಲೀಸ್ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿದ್ದರು.
1999ರಲ್ಲಿ ಸಿಬಿಐನಲ್ಲಿ ಸೇವೆ ಸಲ್ಲಿಸಿದ್ದರು. ಮೊರಾದಾಬಾದ್​ನಗರ, ಬಾಂದ್ರಾ, ಹಾರ್ದೊಯ್ ಎಸ್ಪಿ, ಮೇರಠ್, ಕಾನ್ಪುರದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ದೆಹಲಿ ಭ್ರಷ್ಟಾಚಾರ ನಿಗ್ರಹದಳ ಡಿಐಜಿ ಆಗಿದ್ದರು. ಹರಿದ್ವಾರ ಐಜಿಪಿ, ಉತ್ತರಾಖಂಡ ಎಡಿಜಿಪಿ, ಕೇಂದ್ರ ಗೃಹ ಸಚಿವಾಲಯ ಜಂಟಿ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿದ್ದಾರೆ. 2002 ರಲ್ಲಿ ಪೊಲೀಸ್ ಪದಕ, 2010ರಲ್ಲಿ ರಾಷ್ಟ್ರಪತಿ ಪೊಲೀಸ್ ಪದಕವನ್ನು ಪಡೆದಿದ್ದಾರೆ. ಅವರು 2024, ಫೆಬ್ರವರಿ 29 ರಂದು ನಿವೃತ್ತಿಹೊಂದಲಿದ್ದು, ಅಲ್ಲಿಯವರೆಗೂ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ಯಾವುದು ಇದು ದೈತ್ಯ ಕೈ?ಎಲ್ಲಿಯದು ಈ ಅಪರೂಪ ಫೋಟೋ..: ಒಂದು ಕುತೂಹಲಕಾರಿ ವಿಚಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − three =
Remember me
