| ಶರಣಬಸವ ಹುಲಿಹೈದರ್ಕೊಪ್ಪಳಬೆಂಗಳೂರಿನಲ್ಲಿ ಪೊಲೀಸರ ಮೇಲೆ ಆಫ್ರಿಕಾ ಮೂಲದ ವಿದ್ಯಾರ್ಥಿಗಳು ಹಲ್ಲೆ-ರಂಪಾಟ ಪ್ರಕರಣ ಇನ್ನೂ ಮಾಸಿಲ್ಲ. ಇದರ ಬೆನ್ನಲ್ಲೇ ಆಫ್ರಿಕಾದಲ್ಲಿ ಕನ್ನಡಿಗನೊಬ್ಬ ಸಂಕಷ್ಟಕ್ಕೆ ಸಿಲುಕಿದ್ದಾನೆ. ಉದ್ಯೋಗ ಅರಸಿ ವಿದೇಶಕ್ಕೆ ಹೋಗಿರುವ ಈತನು, ತಾಯ್ನಾಡಿಗೆ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾನೆ.
ಗಂಗಾವತಿಯ ಮೆಹಬೂಬ್ ಸಾಬ್ ಎಂಬಾತ ಆಫ್ರಿಕಾ ಖಂಡದ ಲೈಬೀರಿಯಾ ದೇಶದಲ್ಲಿ ತೊಂದರೆಗೆ ಒಳಗಾಗಿದ್ದಾರೆ. ಹೈಡ್ರಾಲಿಕ್ ಮೆಕಾನಿಕ್ ಆಗಿರುವ ಇವರು, ನಾಲ್ಕು ತಿಂಗಳ ಹಿಂದೆಯಷ್ಟೇ ಮುಂಬೈ ಮೂಲಕ ಲೈಬೀರಿಯಾಕ್ಕೆ ಹೋಗಿದ್ದಾರೆ. ಅಲ್ಲಿನ ಜಿವಿಎಲ್-ಸೆನೋ ಹೆಸರಿನ ಕಂಪನಿಯು ಇವರನ್ನು ಜೆಸಿಬಿ, ಲೋಡರ್, ಇಟಾಚಿಗಳ ಮೇಲುಸ್ತುವಾರಿಯನ್ನಾಗಿ ನೇಮಿಸಿದ್ದರು. ಕೆಲಸ ನೀಡಿರುವ ಕಂಪನಿಯೇ ಇವರಿಗೆ ವೀಸಾ ನೀಡಿ, ವಿಮಾನದ ವೆಚ್ಚ ಭರಿಸಿತ್ತು. ಆದರೆ, ನಾಲ್ಕು ತಿಂಗಳಿಂದ ರಜೆಯನ್ನೂ ನೀಡದೆ, ಕೆಲಸ ಮಾಡಿಸಿಕೊಳ್ಳುತ್ತಿದ್ದು, ವೇತನ ಸಹ ನೀಡಿಲ್ಲ. ಅಷ್ಟೇ ಅಲ್ಲ, ಗುಡ್ಡಗಾಡು ಪ್ರದೇಶದಲ್ಲಿ ಇವರನ್ನು ಕೆಲಸಕ್ಕೆ ಕಳುಹಿಸುತ್ತಿದ್ದಾರೆ. ಅಲ್ಲಿ ಸಕಾಲಕ್ಕೆ ಊಟ-ನೀರೂ ದೊರಕುತ್ತಿಲ್ಲ ಎಂದು ವಿಡಿಯೋ ಮೂಲಕ ಮೆಹಬೂಬ್ ನೋವು ತೋಡಿಕೊಂಡಿದ್ದಾರೆ.
ನಾಲ್ಕು ತಿಂಗಳಿನಿಂದ ವೇತನ ನೀಡಿಲ್ಲ. ಒಂದು ವರ್ಷದ ನಂತರವೇ ಸಂಬಳ ನೀಡುವುದಾಗಿ ಹೇಳುತ್ತಿದ್ದಾರೆ. ನಾನು ವಾಪಸು ಭಾರತಕ್ಕೆ ಹೋಗಬೇಕು ಎಂದು ಪದೇಪದೆ ಕೇಳಿದ್ದರಿಂದ ಕಳವು ಆರೋಪದಡಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಮನೆಯಲ್ಲಿ ವಿಷಯ ಹೇಳಿಲ್ಲ. ದಯವಿಟ್ಟು ನನ್ನನ್ನು ತಾಯಿ ನಾಡಿಗೆ ಕರೆಸಿಕೊಳ್ಳಿ ಎಂದು ಮೆಹಬೂಬ್ ಮನವಿ ಮಾಡಿದ್ದಾರೆ.
ಏಮ್ ಇಂಡಿಯಾ ಫೋರಂ ಸಂಸ್ಥೆ ನೆರವು:ಸಾಮಾಜಿಕ ಜಾಲತಾಣದ ಮೂಲಕ ಕನ್ನಡಿಗರೇ ಸ್ಥಾಪಿಸಿರುವ ಏಮ್ ಇಂಡಿಯಾ ಫೋರಂ ಸಂಸ್ಥೆಗೆ ಮೆಹಬೂಬ್ ಸಂಪರ್ಕ ಮಾಡಿದ್ದಾರೆ. ಕೂಡಲೇ ನೆರವಿಗೆ ಮುಂದಾಗಿರುವ ಈ ಸಂಸ್ಥೆಯು ಈಗಾಗಲೇ ಲೈಬೀರಿಯಾ ದೇಶದ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದೆ. ಅಲ್ಲಿನ ಭಾರತೀಯ ಅಧಿಕಾರಿ ಉಪಜೀತ್​ಸಿಂಗ್ ಸಚ್ಚದೇವ್​ಗೆ ಮಾಹಿತಿ ನೀಡಲಾಗಿದೆ. ಅವರನ್ನು ಸುರಕ್ಷಿತವಾಗಿ ತಾಯಿ ನಾಡಿಗೆ ಕರೆ ತರುವ ಕೆಲಸವನ್ನು ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಶಿರಾಲಿ ಶೇಖ್ ಮುಜಾಫರ್ ಮಾಡುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳೂ ಕೈಜೋಡಿಸಿದರೆ ಬೇಗ ಕರೆತರಬಹುದು ಎಂದು ಏಮ್ ಇಂಡಿಯಾ ಫೋರಂ ಪ್ರಧಾನ ಕಾರ್ಯದರ್ಶಿ ಯಾಸೀರ ಅರಾಫತ್ ಮಕಾನದಾರ ಹೇಳಿದರು.
ನನ್ನಣ್ಣ ನಾಲ್ಕು ತಿಂಗಳ ಹಿಂದೆ ಕೆಲಸ ಅರಸಿ ವಿದೇಶಕ್ಕೆ ಹೋಗಿದ್ದಾರೆ. ಆಗಾಗ ಕರೆ ಮಾಡಿ ಮಾತನಾಡುತ್ತಾರೆ. ಆದರೆ, ಎರಡು ದಿನದ ಹಿಂದೆ ಕರೆ ಮಾಡಿ ವೇತನ ನೀಡದ ಬಗ್ಗೆ ಹೇಳಿಕೊಂಡಿದ್ದಾರೆ. ವಾಪಸು ಮನೆಗೆ ಬರುವುದಾಗಿ ಹಂಬಲಿಸುತ್ತಿದ್ದಾರೆ. ಅವರಿಗೆ ಕಿರುಕುಳ ಇರುವುದು ನಿಮ್ಮಿಂದಲೇ ಗೊತ್ತಾಗಿದೆ.| ಅಯೂಬ್ ಶೇಕ್ಮೆಹಬೂಬ್ ಸಾಬ್ ಸಹೋದರ
ಮದ್ವೆಯಾದ 23 ದಿನಕ್ಕೇ ನವದಂಪತಿ ದುರಂತ ಸಾವು! ಅತ್ತಿಗೆಯ ಪ್ರಾಣವೂ ಹೋಯ್ತು…

ಮೈಸೂರು ವಿವಿ ಪ್ರಾಧ್ಯಾಪಕ ಕಾಮಪುರಾಣ ಕೇಸ್​ಗೆ ಸ್ಫೋಟಕ ತಿರುವು! ಮರುದಿನವೇ ಉಲ್ಟಾ ಹೊಡೆದ ಸಂತ್ರಸ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 1 =
Remember me
