ಅದ್ದೂರಿಯಾಗಿ ಮದ್ವೆಯಾದ ಸಲಿಂಗ ಪ್ರೇಮಿಗಳು! 8 ವರ್ಷದ ಹಿಂದೆ ಡೇಟಿಂಗ್​ ಆ್ಯಪ್​ ಮೂಲಕ ಪ್ರೀತಿಯ ಬಲೆಗೆ ಬಿದ್ದಿದ್ದರು…
ಹೈದರಾಬಾದ್​: ಸತತ 8 ವರ್ಷದಿಂದ ಒಟ್ಟಿಗೆ ವಾಸಿಸುತ್ತಿದ್ದ ಸಲಿಂಗ ಪ್ರೇಮಿಗಳಿಬ್ಬರ ಮದುವೆ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿದೆ.
31 ವರ್ಷದ ಸುಪ್ರಿಯೋ ಚಕ್ರವರ್ತಿ ಮತ್ತು 34 ವರ್ಷದ ಅಭಯ್‌ ದಂಗ್​ ದಾಂಪತ್ಯಕ್ಕೆ ಕಾಲಿಟ್ಟವರು. ಚಿಕ್ಕಂದಿನಲ್ಲೇ ತಾವಿಬ್ಬರೂ ‘ಗೇ’ ಎಂದು ಅರಿತಿದ್ದ ಸುಪ್ರಿಯೋ ಮತ್ತು ಅಭಯ್​, 8 ವರ್ಷಗಳ ಹಿಂದೆ ಡೇಟಿಂಗ್ ಆ್ಯಪ್ ಮೂಲಕ ಪರಸ್ಪರ ಭೇಟಿಯಾಗಿದ್ದರು. ಆ ಸ್ನೇಹ ಪ್ರೇಮಕ್ಕೆ ತಿರುಗಿ ಅಂದಿನಿಂದ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಇದೀಗ ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದು, ಇಬ್ಬರ ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿದ್ದಾರೆ.

ಹೈದರಾಬಾದ್‌ನಲ್ಲಿ ಸುಪ್ರಿಯೋ ಕೆಲಸ ಮಾಡುತ್ತಿದ್ದರೆ, ಪಂಜಾಬ್ ಮೂಲದ ಅಭಯ್ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆ ನಿಮಿತ್ತ ಹೈದರಾಬಾದ್​ನ ಖಾಸಗಿ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಮೆಹೆಂದಿ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಹಿರಿಯರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡ ಈ ಜೋಡಿ ಮುಖದಲ್ಲಿ ಸಂಭ್ರಮ ಮನೆ ಮಾಡಿತ್ತು. ಸಲಿಂಗಿಗಳ ಮದುವೆಯಲ್ಲಿ ಹೈದರಾಬಾದ್‌ನ ಕೆಲ ತೃತೀಯಲಿಂಗಿಗಳೂ ಪಾಲ್ಗೊಂಡು ನವ ಜೋಡಿಗೆ ಶುಭ ಕೋರಿದರು.

ಇನ್ನು ಮದುವೆ ಬಗ್ಗೆ ನೂರಾರು ಕನಸು ಕಂಡಿದ್ದ ಸುಪ್ರಿಯೋ ಮತ್ತು ಅಭಯ್ ಇಬ್ಬರೂ ಧರಿಸಿದ ಡ್ರೆಸ್​ಗಳ ಡಿಸೈನ್​ ಪಂಜಾಬ್ ಮತ್ತು ಕೋಲ್ಕತ್ತಾದಲ್ಲಿ ಮಾಡಿಸಿಕೊಂಡಿದ್ದಂತೆ.
ಇನ್ನು ಸಲಿಂಗಿಗಳ ಮದುವೆಗೆ ನಮ್ಮ ದೇಶದಲ್ಲಿ ಕಾನೂನಾತ್ಮವಾಗಿ ಸಿಂಧು ಆಗುವುದಿಲ್ಲ. ಸಲಿಂಗಿಗಳ ಪ್ರೀತಿಗೆ ಒಪ್ಪಿಗೆ ಇದೆ, ಆದರೆ ಮದುವೆಗೆ ಇಲ್ಲ. ಹಾಗಾಗಿ ಸುಪ್ರಿಯೋ ಮತ್ತು ಅಭಯ್​ರ ಮದುವೆ ಚರ್ಚೆಗೆ ಗ್ರಾಸವಾಗಿದೆ.
ಮನೆ ಮುಂದೆಯೇ ಅಡಗಿತ್ತು ಭಯಾನಕ ರಹಸ್ಯ! ಮಗನೆದುರು ಕಣ್ಣೀರಿಟ್ಟ ಅಪ್ಪನ ಅಸಲಿ ಮುಖವಾಡ ಬಯಲು

ಇಸ್ಟೀಟ್​ ಆಡುತ್ತಿದ್ದ ಎಎಸ್ಐ, ಹೆಡ್​​ಕಾನ್ಸ್‌ಟೇಬಲ್ ಬಂಧನ! ತಹಸೀಲ್ದಾರ್​ರ ಡ್ರೈವರ್​ ಕೂಡ ಅಂದರ್​

ಮಗಳೇ ನೀನಿನ್ನೂ ಚಿಕ್ಕವಳು, ಬೇಡ ಕಣವ್ವಾ ಅಂದ್ರೂ ಕೇಳಲಿಲ್ಲ… ಬಾಳಿ ಬದುಕಬೇಕಿದ್ದವರ ಬಾಳಲ್ಲಿ ನಡೆಯಿತು ಘೋರ ದುರಂತ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eight − 7 =
Remember me
