ಘಾಝಿಯಾಬಾದ್:ದೃಶ್ಯಂ ಸಿನಿಮಾ ಎಲ್ಲರೂ ನೋಡಿರುತ್ತೀರಿ. ಒಂದು ಕೊಲೆಯ ಸುತ್ತ ಸುತ್ತುವ ಚಿತ್ರಕಥೆ, ನೋಡುಗರನ್ನು ಕೊನೆಯ ತನಕ ಕೊಂಡು ಹೋಗಿದ್ದ ಸಿನಿಮಾ. ಅನಿರೀಕ್ಷಿತವಾಗಿ ನಡೆದ ಕೊಲೆಯಿಂದ, ಪಾರಾಗಲು ಹೂಡುವ ಉಪಾಯದ ಕಥಾ ಹಂದರ ಹೊಂದಿತ್ತು. ಈ ಸಿನಿಮಾ ಬಿಡುಗಡೆಯಾದ ನಂತರ, ಕೆಲವು ಅಪರಾಧಿಗಳು ಸಿನಿಮಾದ ಮಾದರಿಯಲ್ಲಿಯೇ ಆರೋಪದಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದರು. ಆದರೆ ಯಾರಿಗೂ ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ತಡವಾಗಿಯಾದರೂ ಪೊಲೀಸರ ಬಲೆಗೆ ಬೀಳಬೇಕಾಗಿ ಬಂದಿತ್ತು.
ಇದೀಗ ದೃಶ್ಯ ಸಿನಿಮಾದ ಕಥೆಯನ್ನೇ ಹೋಲುವಂತಹ ಪ್ರಕರಣವೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಿಕ್ರೋಡ್ ಗ್ರಾಮದ ಚಂದ್ರವೀರ್ ಎಂಬಾತ 2018ರ ಸೆಪ್ಟೆಂಬರ್​ನಲ್ಲಿ ನಾಪತ್ತೆಯಾಗಿದ್ದಾನೆ ಎಂದು, ಸಿಹಾನಿಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಪೊಲೀಸರು ಎಷ್ಟೇ ಹುಡುಕಾಟ ನಡೆಸಿದರೂ ನಾಪತ್ತೆಯಾದ ವ್ಯಕ್ತಿಯನ್ನು ಪತ್ತೆಹಚ್ಚಲು ಮಾತ್ರ ಸಾಧ್ಯವಾಗಿಲ್ಲ. ಅಂತಿಮವಾಗಿ ಪೊಲೀಸರು ಪ್ರಕರಣಕ್ಕೆ ಅಂತ್ಯಹಾಡಿ, ಸುಮ್ಮನಾಗುತ್ತಾರೆ.
ಇತ್ತೀಚೆಗೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದೊಂದು ಮಾಹಿತಿ ಲಭ್ಯವಾಗುತ್ತದೆ. ಕೂಡಲೇ ಪೊಲೀಸರು ಹಳೆ ಪ್ರಕರಣವನ್ನು ಮುನ್ನಲೆಗೆ ತಂದು ತನಿಖೆ ಚುರುಕುಗೊಳಿಸುತ್ತಾರೆ. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತಹ ಮಹತ್ವದ ಅಂಶಗಳು ಬೆಳಕಿಗೆ ಬರುತ್ತಿದ್ದಂತೆ, ಅಪಹರಣವಾದ ಚಂದ್ರವೀರ್ ಏನಾದ ಎಂಬ ಪೊಲೀಸರ ತನಿಖೆಗೆ ಉತ್ತರ ಲಭಿಸುತ್ತದೆ.
ತನಿಖೆ ನಡೆಸುತ್ತಿರುವ ಪೊಲೀಸರನ್ನೇ ಬೆಚ್ಚಿಬೀಳಿಸುತ್ತಿವೆ ಅಫ್ತಾಬ್​​ನ ಪೈಶಾಚಿಕ ಕೃತ್ಯಗಳು!
ಚಂದ್ರವೀರ್​ಗೆ ಮದುವೆಯಾಗಿತ್ತು. ಆದರೆ ಪತ್ನಿ ಸವಿತಾಳಿಗೆ ಮದುವೆಗೂ ಮೊದಲೇ ಅರುಣ್ ಅಲಿಯಾಸ್ ಅನಿಲ್ ಕುಮಾರ್ ಎಂಬಾತನ ಜತೆಗೆ ಸಂಬಂಧವಿತ್ತು. ಸವಿತಾ ಮದುವೆಯಾದ ನಂತರವೂ ಅಕ್ರಮ ಸಂಬಂಧ ಮುಂದುವರಿಸಿದ್ದಳು. ಇದು ಚಂದ್ರವೀರ್​ ಗಮನಕ್ಕೆ ಬರುತ್ತಿದ್ದಂತೆ, ಇಬ್ಬರ ನಡುವೆ ಮನಸ್ಥಾಪ ಆರಂಭವಾಗಿದೆ. ಅಲ್ಲದೇ, ರಾಜಿ ಮಾಡಿಕೊಳ್ಳುವ ವಿಚಾರವಾಗಿ ಚಂದ್ರವೀರ್ ಮತ್ತು ಅರುಣ್ ನಡುವೆ ಹೊಡೆದಾಟಗಳೂ ಆಗಿವೆ.
VIDEO: ಭಾರತೀಯ ಗೆಳೆಯನ ಮದುವೆಗೆ ಸೀರೆಯುಟ್ಟು ಬಂದ ವಿದೇಶಿ ಸ್ನೇಹಿತರು…
ಹೊಡೆದಾಟದ ಘಟನೆಗಳು ಆಗುತ್ತಿದ್ದಂತೆ, ಒಂದು ದಿನ ರಾತ್ರಿ ಚಂದ್ರವೀರ್ ನಿದ್ರಿಸುತ್ತಿದ್ದಾಗ ಪತ್ನಿ ಸವಿತಾ, ಅರುಣ್​ನನ್ನು ಮನೆಗೆ ಆಹ್ವಾನಿಸಿದ್ದಾಳೆ. ಈ ವೇಳೆ ಮನೆಗೆ ಬಂದ ಅರುಣ್, ತನ್ನಲ್ಲಿದ್ದ ಪಿಸ್ತೂಲ್ ಬಳಸಿ, ಚಂದ್ರವೀರ್​ನ ಹಣೆಗೆ ನೇರವಾಗಿ ಬುಲೆಟ್ ಹಾರಿಸಿದ್ದಾನೆ. ಪ್ರಾಣ ಹೋಗುತ್ತಿದ್ದಂತೆ, ಮೃತದೇಹವನ್ನು ಇಬ್ಬರೂ ಸೇರಿ, ಅರುಣ್ ಮನೆಗೆ ಸಾಗಿಸಿದ್ದಾರೆ. ನಂತರ ಬೆಳಗಾಗುವ ಮೊದಲೇ 6 ಅಡಿಯಷ್ಟು ಗುಂಡಿ ತೋಡಿ, ಮೃತದೇಹವನ್ನು ಮುಚ್ಚಿದ್ದಾರೆ.
ಇದೀಗ ಪೊಲೀಸರು ನಾಲ್ಕು ವರ್ಷಗಳ ನಂತರ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
