ಮಲಪ್ಪುರಂ:9ನೇ ತರಗತಿಯ ಬಾಲಕಿಯೋರ್ವಳು ತನಗೇ ತಾನು ಬೆಂಕಿ ಹಚ್ಚಿಕೊಂಡು ಭೀಕರವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ವಾಲಂಚೇರಿಯಲ್ಲಿ ನಡೆದಿದೆ.
14ವರ್ಷದ ಬಾಲಕಿ ದೇವಿಕಾ ಹೀಗೆ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ನಾನು ಹೋಗುತ್ತಿದ್ದೇನೆ ಎಂದು ಡೆತ್​ ನೋಟ್​ ಬರೆದಿಟ್ಟಿದ್ದಾಳೆ. ಈ ಬಾಲಕಿಯ ಸಾವಿಗೆ ಆನ್​ಲೈನ್​ ತರಗತಿಯೇ ಕಾರಣ ಎನ್ನಲಾಗಿದೆ.
ಲಾಕ್​ಡೌನ್​ನಿಂದಾಗಿ ಶಾಲೆಗಳು ತೆರೆಯುತ್ತಿಲ್ಲ. ಆದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು ಆನ್​ಲೈನ್​ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಬಾಲಕಿಯ ಮನೆಯಲ್ಲಿ ಕಂಪ್ಯೂಟರ್​ ಆಗಲಿ, ಸ್ಮಾರ್ಟ್​ ಫೋನ್​ ಆಗಲಿ ಇರಲಿಲ್ಲ. ಇದೇ ಕಾರಣಕ್ಕೆ ಆಕೆಗೆ ಆನ್​ಲೈನ್​ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿರಲಿಲ್ಲ. ತೀವ್ರವಾಗಿ ಮನನೊಂದ ಅವಳು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:VIDEO: ದೈಹಿಕವಾಗಿ ಬಳಸಿಕೊಂಡು, ಮದುವೆಯಾಗಲ್ಲ ಎಂದ ಪ್ರಿಯಕರ; ಸೆಲ್ಫಿ ವಿಡಿಯೋ ಮಾಡಿ ನಟಿ ಆತ್ಮಹತ್ಯೆ
ಬಾಲಕಿಯ ತಂದೆ ದಿನಗೂಲಿ ಕಾರ್ಮಿಕ. ಅವರಿಗೆ ತುಂಬ ದಿನಗಳಿಂದ ಆರೋಗ್ಯ ಸರಿಯಿಲ್ಲ. ಇದ್ದ ಒಂದು ಟಿವಿ ಕೂಡ ಹಾಳಾಗಿ, ಅದನ್ನು ದುರಸ್ತಿ ಮಾಡಿಸಲೂ ಆಗಲಿಲ್ಲ. ಸ್ಮಾರ್ಟ್​ಫೋನ್​, ಕಂಪ್ಯೂಟರ್​ ಕೊಳ್ಳುವಷ್ಟು ಶಕ್ತಿ ನಮಗಿಲ್ಲ. ಅವಳಿಗೆ ಆನ್​ಲೈನ್​ ತರಗತಿಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ತುಂಬ ಬೇಸರವಾಗಿತ್ತು. ನಿನ್ನೆ ಮಧ್ಯಾಹ್ನ 3.30ರಿಂದ ಬಾಲಕಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಹುಡುಕಿದಾಗ ಅವರ ಮನೆಯ ಪಕ್ಕದ ಮನೆಯೊಂದರ ಬಳಿ ಮೃತದೇಹ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೇರಳ ಶಿಕ್ಷಣ ಸಚಿವ ಪ್ರೊ. ಸಿ.ರವೀಂದ್ರನಾಥ್​ ಅವರು ದೇವಿಕಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಲು ಆದೇಶ ನೀಡಿದ್ದಾರೆ. ನಾವು ಆನ್​ಲೈನ್​ ಕ್ಲಾಸ್​ಗಳನ್ನು ಪ್ರಯೋಗಾತ್ಮಕವಾಗಿಯಷ್ಟೇ ನಡೆಸುತ್ತಿದ್ದೇವೆ. ಒಮ್ಮೆ ನಡೆದ ತರಗತಿ ಮತ್ತೆಮತ್ತೆ ಟೆಲಿಕಾಸ್ಟ್​ ಆಗುತ್ತದೆ. ಅಷ್ಟರಲ್ಲಿ ಈ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರವೀಂದ್ರನಾಥ್​ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಪ್ರಾರಂಭ ಮಾಡಿದ್ದಾರೆ. (ಏಜೆನ್ಸೀಸ್​)
ಇದನ್ನೂ ಓದಿ:ಕರೊನಾದೊಂದಿಗೆ ಬದುಕಲು ಕಲಿಯಿರಿ, ಇನ್ನೆರಡು ವರ್ಷ ಲಸಿಕೆ ಅನುಮಾನ…!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
