ಹೈದರಾಬಾದ್​:ಓದುವ ವಯಸ್ಸಿನಲ್ಲಿ ಚಕ್ಕಂದ ಬೇಡ ಎಂದು ಬುದ್ದಿವಾದ ಹೇಳಿದ ತಾಯಿಯನ್ನುಟೀನೇಜ್​ ಮಗಳು ತನ್ನ ಬಾಯ್ ಫ್ರೆಂಡ್ ಜೊತೆ ಸೇರಿ ಹತ್ಯೆಗೈದಿರುವ ದುಷ್ಕೃತ್ಯ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂನ ಕಂಬಳಪೇಟೆಯಲ್ಲಿ ನಡೆದಿದ್ದು, ಸಂಚಲನ ಮೂಡಿಸಿದೆ.
ಇದನ್ನೂ ಓದಿ:ಚೆಂದದ ನರ್ಸ್‌ಗಳು ನಂಗೆ ಅಜ್ಜಾ ಎನ್ನುವುದು ತ್ರಾಸ್​ ಆಗೇತಿ ಎಂದ ಕಾಂಗ್ರೆಸ್​ ಶಾಸಕ ರಾಜು ಕಾಗೆ!
ನಿವೃತ್ತ ಶಿಕ್ಷಕಿ ಮಾರ್ಗರೇಟ್ ಜೂಲಿಯಾನ(63) ಮಕ್ಕಳಿಲ್ಲದ ಕಾರಣ 13 ವರ್ಷದ ಹಿಂದೆ ಹೆಣ್ಣು ಮಗುವನ್ನು ದತ್ತು ಪಡೆದಿದ್ದರು. ಜೂಲಿಯಾನಾ ಅವರ ಪತಿ ನಾಗೇಶ್ವರ ರಾವ್ ಎಫ್‌ಸಿಐನಲ್ಲಿ ವ್ಯವಸ್ಥಾಪಕರಾಗಿದ್ದು, ನಿವೃತ್ತಿಯಾದ ಎರಡು ವರ್ಷದ ನಂತರ ಅನಾರೋಗ್ಯದಿಂದ ನಿಧನರಾದರು.
ಮಾರ್ಗರೇಟ್ ಜೂಲಿಯಾನ ತನ್ನ ದತ್ತು ಪುತ್ರಿಯೊಂದಿಗೆ ಕಂಬಳಪೇಟೆಯಲ್ಲಿ ವಾಸವಾಗಿದ್ದರು. ಪುತ್ರಿಯನ್ನು ತುಂಬಾ ಪ್ರೀತಿಯಿಂದ ಬೆಳೆಸಿದರು. ಕೋಟ್ಯಂತರ ಆಸ್ತಿಯ ವಾರಸುದಾರಳಾದ್ದರಿಂದ ಹುಡುಗಿ ಕೇಳಿದ್ದನ್ನೆಲ್ಲಾ ಕೊಡಿಸಿಕೊಡುತ್ತಿದ್ದರು. 13 ನೇ ವಯಸ್ಸಿನ ಹುಡುಗಿ 19 ವರ್ಷದ ಹುಡುಗನನ್ನು ಪ್ರೀತಿಸುತ್ತಿದ್ದಳು. ಸಾಕಿದ ತಾಯಿಗೆ ಗೊತ್ತಾಗಿ ಛೀಮಾರಿ ಹಾಕಿದರು. ಓದು ಬಿಟ್ಟು ಸರಸ, ಸಲ್ಲಾಪಕ್ಕಾಗಿ ಭವಿಷ್ಯ ಹಾಳು ಮಾಡಿಕೊಳ್ಳಬೇಡ ಎಂದು ಬುದ್ಧಿವಾದ ಹೇಳಿದ್ದರು. ಆದರೆ ಮಗಳಿಗೆ ಇದು ರುಚಿಸಲಿಲ್ಲ. ಕಡೆಗೆ ತನ್ನ ಗೆಳೆಯನೊಂದಿಗೆ ಸೇರಿ ಸಂಚು ರೂಪಿಸಿ ಇನ್ನಿಬ್ಬರು ಯುವಕರ ನೆರವಿನಿಂದ ಜೂಲಿಯಾನರನ್ನು ಕೊಂದಿದ್ದಾಳೆ.
ಹುಡುಗಿ ಕೆಟ್ಟ ಚಟಗಳಿಗೆ ಪ್ರಭಾವಿತಳಾಗಿದ್ದಳು. ಇದರಿಂದ ತಾಯಿ ಮತ್ತು ಮಗಳ ನಡುವೆ ಜಗಳ ಶುರುವಾಗಿದೆ. ಅಮ್ಮನ ಮಾತುಗಳನ್ನೆಲ್ಲ ತನ್ನ ಮೇಲೆ ದ್ವೇಷದಿಂದ ಹೇಳುತ್ತಿದ್ದಾರೆ ಎಂದು ಹುಡುಗಿಗೆ ಅನಿಸಿತು. ಪ್ರಿಯಕರ ಹಾಗೂ ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ; ಈ ದಿನದಂದು ಅಧಿಕೃತ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + eight =
Remember me
