ಭೋಪಾಲ್​​:ಇತ್ತೀಚೆಗೆ ಪಾನ್​ ಮಸಾಲ ತಂಬಾಕು ಜಾಹಿರಾತಿನಲ್ಲಿ ಕಾಣಿಸಿಕೊಂಡು ಭಾರೀ ಸುದ್ದಿಯಾಗಿದ್ದ ಬೆನ್ನಲ್ಲೇ ಬಾಲಿವುಡ್​ ನಟ ಅಕ್ಷಯ್​ ಕುಮಾರ್ ಈ​ ಜಾಹಿರಾತಿನಿಂದ ಹಿಂದೆ ಸರಿದಿದ್ದರು.
ಆದರೆ.. ಇದಕ್ಕೆ ತಲೆಕೆಡಿಸಿಕೊಳ್ಳದೇ ತಮಗೆ ಹಣವೇ ಮುಖ್ಯ ಎಂದು ಮತ್ತೊಮ್ಮೆ ಸಾಬೀತುಪಡಿಸಿ ತಂಬಾಕು ಜಾಹಿರಾತಿನಲ್ಲಿ ಕಾಣಿಸಿಕೊಂಡ ಬಾಲಿವುಡ್​​ ನಟರಾದ ಶಾರೂಕ್​​ ಖಾನ್​ ಹಾಗೂ ಅಜಯ್​ ದೇವಗನ್​ ಅವರಿಗೆ ವಿದ್ಯಾರ್ಥಿನಿಯೊಬ್ಬಳು ಛೀ ಮಾರಿ ಹಾಕಿದ್ದಾಳೆ.
ಮಧ್ಯಪ್ರದೇಶದ ಖರಗೋನ್ ಜಿಲ್ಲೆಯವಳಾದ ಈಕೆ ಬಿಎ ವ್ಯಾಸಂಗ ಮಾಡುತ್ತಿದ್ದು, ಸ್ಟಾರ್​ ನಟರನ್ನು ಈಗ ತರಾಟೆಗೆ ತೆಗೆದುಕೊಂಡಿದ್ದಾಳೆ
ಇದಕ್ಕೆ ಕಾರಣ.. ಖ್ಯಾತ ನಟರಿಬ್ಬರು ಆಕ್ಷೇಪದ ನಡುವೆಯೂ ತಂಬಾಕು ಜಾಹಿರಾತಿನಲ್ಲಿ ಕಾಣಿಸಿಕೊಂಡು ಯುವ ಜನತೆ ಮೇಲೆ ಪರಿಣಾಮ ಬೀರುವಂತೆ ಮಾಡಿದ್ದಾರೆ ಎಂದು ಈ ಬಾಲಕಿ ಆರೋಪಿಸಿದ್ದಾಳೆ. ಇದಕ್ಕಾಗಿ ಕೋಪಗೊಂಡು ಈ ಇಬ್ಬರು ನಟರ ಮನೆ ವಿಳಾಸಕ್ಕೆ 5 ರೂ. ಮನಿಆರ್ಡರ್​ ಮಾಡಿದ್ದಾಳೆ.
ಶಾರೂಕ್​ ಖಾನ್​ ಮತ್ತು ಅಜಯ್​ ದೇವಗನ್​ ಅವರನ್ನು ನಾನು ಸಹೋದರನಂತೆ ಭಾವಿಸುತ್ತೇನೆ. ಹಾಗಾಗಿ ಇಬ್ಬರು ನನ್ನ ಮನವಿಯನ್ನು ಪುರಸ್ಕರಿಸಲೇಬೇಕು. ದಯವಿಟ್ಟು ಪಾನ್​ ಮಸಾಲಾ ಜಾಹಿರಾತನ್ನು ಹಿಂಪಡೆದು ಯುವಜನತೆಯನ್ನು ರಕ್ಷಿಸಬೇಕೆಂದು ಕೇಳಿಕೊಂಡಿದ್ದಾಳೆ.
ನಾನು ನಿಮ್ಮಿಬ್ಬರ ಅಭಿಮಾನಿ ನಾನೂ ಕೂಡ ಪಾನ್ ಮಸಾಲಾ ತಿನ್ನಲು ಆರಂಭಿಸುತ್ತೇನೆ ಎಂದು ಈ ಇಬ್ಬರು ನಟರ ವಿರುದ್ಧ ಅಸಮಾಧಾನ ಹೊರಹಾಕಿದ್ದಾಳೆ. ಒಟ್ಟಾರೆ ಪಾನ್​ ಮಸಾಲಾ ಜಾಹಿರಾತಿನ ವಿರೋಧದ ನಡುವೆಯೂ ಈ ನಟರು ಮುಂದುವರಿಸಿದ್ದು, ಈಗ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.(ಏಜೆನ್ಸೀಸ್​)
1 ಗಂಟೆ ನಿರಂತರವಾಗಿ ಸುರಿದ ಭಾರೀ ಮಳೆಗೆ ಕೆರೆಯಂತಾದ ಬಸ್​ ನಿಲ್ದಾಣ!ಬಸ್ಸಿಗಾಗಿ ಪರದಾಡಿದ ಪ್ರಯಾಣಿಕರು

ಬಾಲಿವುಡ್​​ v/s ದಕ್ಷಿಣ ಭಾರತ ಸಿನಿಮಾ ಬಗ್ಗೆ ಕೆಜಿಎಫ್​​-2 ನಟಿ ಹೇಳಿದ್ದು ಹೀಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
