ನವದೆಹಲಿ:ಭಾರತೀಯ ಸಶಸ್ತ್ರ ಪಡೆಗಳ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ್ಥರಾಗಿ (ಸಿಡಿಎಸ್​) ಲೆ. ಜನರಲ್​ ಅನಿಲ್​ ಚೌಹಾಣ್​ ನೇಮಕಗೊಂಡಿದ್ದು, ಹೆಲಿಕಾಪ್ಟರ್​ ಅಪಘಾತದಲ್ಲಿ ಜನರಲ್​ ಬಿಪಿನ್​ ರಾವತ್​ ನಿಧನರಾದ ಬಳಿಕ 9 ತಿಂಗಳಿಂದ ಖಾಲಿ ಇದ್ದ ಸಿಡಿಎಸ್​ ಹುದ್ದೆಯನ್ನು ನಾಳೆ(ಸೆ.30) ಅಧಿಕೃತವಾಗಿ ಅಲಂಕರಿಸಲಿದ್ದಾರೆ. ಸಿಡಿಎಸ್​ ಜತೆಗೆ ರಕ್ಷಣಾ ವ್ಯವಹಾರಗಳ ಇಲಾಖೆಯ ಕಾರ್ಯದಶಿರ್ಯಾಗಿಯೂ ಅನಿಲ್​ ಚೌಹಾಣ್​ ಕಾರ್ಯ ನಿರ್ವಹಿಸಲಿದ್ದಾರೆ. 40 ವರ್ಷಗಳ ಸೇನಾ ವೃತ್ತಿ ಜೀವನದಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದು, ಅವರ ಕುರಿತು ಮಹತ್ತರ ಮಾಹಿತಿ ಇಲ್ಲಿದೆ.
1961ರ ಮೇ 18ರಂದು ಜನಿಸಿದ​ ಅನಿಲ್​ ಚೌಹಾಣ್ ಅವರು​ 1981ರಲ್ಲಿ ಭಾರತೀಯ ಸೇನೆಯ 11 ಗೂರ್ಖಾ ರೈಲ್ಸ್​ಗೆ ನಿಯುಕ್ತಿಗೊಂಡರು. ಇವರು ಖಡಕ್ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಡೆಹ್ರಾಡೂನ್​ನ ಇಂಡಿಯನ್​ ಮಿಲಿಟರಿ ಅಕಾಡೆಮಿಯ ಹಳೆಯ ವಿದ್ಯಾರ್ಥಿ. ಉತ್ತರ ಕಮಾಂಡ್​ನಲ್ಲಿ ಬಾರಾಮುಲ್ಲಾ ಸೆಕ್ಟರ್​ನಲ್ಲಿ ಪದಾತಿ ದಳವನ್ನು ಮೇಜರ್​ ಜನರಲ್​ ಶ್ರೇಣಿಯಲ್ಲಿ ಮುನ್ನಡೆಸಿದ್ದ ಅನಿಲ್​ ಚೌಹಾಣ್​, ನಂತರ ಲೆಫ್ಟಿನೆಂಟ್​ ಜನರಲ್​ ಆಗಿ ಈಶಾನ್ಯ ಕೋರ್​ಗೆ ನೇಮಕಗೊಂಡರು.
2019ರ ಸೆಪ್ಟೆಂಬರ್​ನಿಂದ ಪೂರ್ವ ಕಮಾಂಡ್​ನ ಜನರಲ್​ ಆಫೀಸರ್​ ಕಮಾಂಡಿಂಗ್​ ಇನ್​ ಚೀಫ್​​ ಆಗಿ ಸೇವೆ ಸಲ್ಲಿಸಿದರು. 2021ರ ಮೇ 31ರಂದು ನಿವೃತ್ತರಾದರು. ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕನ ಉಸ್ತುವಾರಿ ಸೇರಿದಂತೆ ಪ್ರಮುಖ ಸಿಬ್ಬಂದಿ ನೇಮಕಾತಿಗಳ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ಹೊಂದಿರುವ ಅನಿಲ್​ ಚೌಹಾಣ್​, ನಿವೃತ್ತರಾದ ಬಳಿಕವೂ ರಾಷ್ಟ್ರೀಯ ಭದ್ರತೆ ಮತ್ತು ಕಾರ್ಯತಂತ್ರದ ವಿಷಯಗಳಿಗೆ ತಮ್ಮ ಕೊಡುಗೆ ನೀಡುವುದನ್ನು ಮುಂದುವರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾರತದಲ್ಲಿ ಬಂಡುಕೋರ ಚಟುವಟಿಕೆ ನಿಗ್ರಹ ಕಾರ್ಯಾಚರಣೆಯಲ್ಲಿ ವ್ಯಾಪಕ ಅನುಭವ ಹೊಂದಿದ್ದಾರೆ.
ಸೇನೆಗೆ ಸಲ್ಲಿಸಿರುವ ವಿಶಿಷ್ಟ ಮತ್ತು ಶ್ರೇಷ್ಠ ಸೇವೆಗಾಗಿ ಅನಿಲ್​ ಚೌಹಾಣ್​ ಅವರಿಗೆ ‘ಪರಮ ವಿಶಿಷ್ಟ ಸೇವಾ ಪದಕ’, ‘ಉತ್ತಮ ಯುದ್ಧ ಸೇವಾ ಪದಕ’, ‘ಅತಿ ವಿಶಿಷ್ಟ ಸೇವಾ ಪದಕ’, ‘ಸೇನಾ ಪದಕ’ ಮತ್ತು ‘ವಿಶಿಷ್ಟ ಸೇವಾ ಪದಕ’ಗಳು ಒಲಿದಿವೆ.
ಜನರಲ್​ ಬಿಪಿನ್​ ರಾವತ್​ ಅವರನ್ನು 2020ರಲ್ಲಿ ದೇಶದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. 2021ರ ಡಿಸೆಂಬರ್​ 8ರಂದು ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್​ ಅಪಘಾತದಲ್ಲಿ ಬಿಪಿನ್​ ರಾವತ್​ ಅವರು ಹುತಾತ್ಮರಾಗಿದ್ದರು. ಆ ಬಳಿಕ ಸಿಡಿಎಸ್​ ಹುದ್ದೆ ತೆರವಾಗಿತ್ತು. ಇದೀಗ ಈ ಸ್ಥಾನಕ್ಕೆ ಅಂದರೆ 2ನೇ ಸಿಡಿಎಸ್​ ಆಗಿ ಲೆ. ಜನರಲ್​ ಅನಿಲ್​ ಚೌಹಾಣ್​ ಅವರನ್ನು ನೇಮಿಸಿ ರಕ್ಷಣಾ ಸಚಿವಾಲಯ ಆದೇಶಿಸಿದೆ. ಲೆ. ಜನರಲ್​ ಅನಿಲ್​ ಚೌಹಾಣ್​ ಅವರು ನಾಳೆ(ಶುಕ್ರವಾರ) ಅಧಿಕಾರ ಸ್ವೀಕರಿಸಲಿದ್ದಾರೆ.
ಯುವ ದಸರಾದಲ್ಲಿ ಅಪ್ಪು ಆರಾಧಾನೆ… ಭಾರವಾದ ಮನಸ್ಸಲ್ಲೇ ಟೀಸರ್​ ನೋಡಿ ಕಣ್ಣೀರಿಟ್ಟ ಅಶ್ವಿನಿ

ಖರ್ಗೆಗೆ ಸಿಗುತ್ತಾ ಎಐಸಿಸಿ ಪಟ್ಟ?; ಅಶೋಕ್ ಗೆಹ್ಲೋಟ್ ರಾಜಕೀಯ ಪ್ರಹಸನ ಬಳಿಕ ಹೊಸ ಚರ್ಚೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + thirteen =
Remember me
