ಲಖನೌ:ಮದುವೆಯೆಂದರೆ ಮೋಜು ಮಸ್ತಿ ಸರ್ವೇ ಸಾಮಾನ್ಯ. ಕೆಲವು ಸ್ಥಳಗಳಲ್ಲಂತೂ ಮದ್ಯದ ಪಾರ್ಟಿಯೂ ಸಾಮಾನ್ಯವೇ. ಆದರೆ ಅದೇ ಮದ್ಯದ ಪಾರ್ಟಿಗಾಗಿ ವರನನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ:ಚುನಾವಣೆಗೆ ಮೊದಲೇ ಮಮತಾ ಬ್ಯಾನರ್ಜಿಗೆ ಬಿಗ್​ ಶಾಕ್​! ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಯಕ! ಶೀಘ್ರವೇ ಬಿಜೆಪಿ ಸೇರ್ಪಡೆ?
ಉತ್ತರ ಪ್ರದೇಶದ ಪಾಲಿಮುಕಿಮ್​ಪುರ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಮದುವೆಯಾದ ಸಂತೋಷದಲ್ಲಿದ್ದ ಬಬ್ಲು (28) ತನ್ನ ಸ್ನೇಹಿತರಿಗೆ ಪಾರ್ಟಿ ಕೊಡಿಸಿದ್ದಾನೆ. ಸೋಮವಾರ ರಾತ್ರಿ ಪಾರ್ಟಿ ನಡೆಸಲಾಗಿದೆ. ಆದರೆ ಹೆಚ್ಚಿನ ಪ್ರಮಾಣದ ಮದ್ಯವನ್ನು ತರದೆ ಕಡಿಮೆ ಮದ್ಯದಲ್ಲೇ ಪಾರ್ಟಿ ಮುಗಿಸಲು ಬಬ್ಲು ನೋಡಿದ್ದಾನೆ. ನಮಗೆ ಇನ್ನೂ ಡ್ರಿಂಕ್ಸ್​ ಬೇಕು, ತೆಗೆದುಕೊಂಡು ಬಾ ಎಂದು ಆತನ ಸ್ನೇಹಿತರು ಕೇಳಿದ್ದಾರೆ. ಆದರೆ ಅದಾಗಲೇ ಸ್ನೇಹಿತರು ನಿಯಂತ್ರಣ ತಪ್ಪಿದ್ದರಿಂದಾಗಿ ಬಬ್ಲು ಮದ್ಯ ತರಲು ನಿರಾಕರಿಸಿದ್ದಾನೆ.
ಇದೇ ಕಾರಣದಿಂದಾಗಿ ಸ್ನೇಹಿತರ ನಡುವೆ ಜಗಳವಾಗಿದೆ. ಸಿಟ್ಟಿನಲ್ಲಿ ಬಬ್ಲುವಿನ ಮೇಲೆ ಹಲ್ಲೆ ನಡೆಸಲಾಗಿದೆ. ಚಾಕುವಿನಿಂದ ಇರಿಯಲಾಗಿದೆ. ಗಾಯಗೊಂಡಿದ್ದ ಬಬ್ಲುವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ:2020ರಲ್ಲಿ ವರ್ಷ ಅತಿ ಹೆಚ್ಚು ಗಳಿಸಿದ್ದು ಈ 23 ವರ್ಷದ ಯುವತಿಯೇ! ಅಷ್ಟಕ್ಕೂ ಈಕೆ ಮಾಡುವುದೇನು ಗೊತ್ತಾ?
ಈ ಕುರಿತಾಗಿ ಪೊಲೀಸ್​ ಪ್ರಕರಣ ದಾಖಲಾಗಿದೆ. ರಾಮ್​ ಖಿಲಾಡಿ ಹೆಸರಿನ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಉಳಿದ ಐವರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಕಿರಿ ಸೊಸೆ ಜತೆ ಮಾವನ ಅಕ್ರಮ ಸಂಬಂಧ; ವಿಚಾರ ತಿಳಿದ ಹಿರಿ ಸೊಸೆ, ಅತ್ತೆ ಮಾಡಿದ್ದೇನು ಗೊತ್ತಾ?

ಈ ಕೇಸ್​ ಸಾಲ್ವ್​ ಮಾಡೋಕೆ ಸಹಾಯ ಮಾಡಿದರೆ ನಿಮಗೆ ಸಿಗುತ್ತೆ 2.7 ಕೋಟಿ ರೂಪಾಯಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
