ಮಾರ್ಚ್ 2ರಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಗಾಂಧಿ ಅಸ್ಸಾಂನ ತೇಜ್​ಪುರದಲ್ಲಿರುವ ಚಹಾ ತೋಟಕ್ಕೆ (ಟೀ ಗಾರ್ಡನ್) ಭೇಟಿ ಕೊಟ್ಟು, ಕಾರ್ವಿುಕರ ಗುಡಿಸಲಲ್ಲೂ ಒಂದಿಷ್ಟು ಸಮಯ ಕಳೆದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಚಹಾ ತೋಟದ ಕಾರ್ವಿುಕರ ದಿನಗೂಲಿಯನ್ನು -ಠಿ; 365ಕ್ಕೆ ಏರಿಸಲಿದ್ದೇವೆ ಎಂದು ಪ್ರಿಯಾಂಕಾ ಭರವಸೆ ಕೊಟ್ಟು ಬಂದಿದ್ದಾರೆ. ಏತನ್ಮಧ್ಯೆ, ರ್ಯಾಲಿಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಸ್ಸಾಂ ಚಹಾ ಉದ್ಯಮದ ವಿರುದ್ಧ ಅಂತಾರಾಷ್ಟ್ರೀಯ ಪಿತೂರಿ ನಡೆದಿದೆ ಎಂದು ಗುಡುಗಿದ್ದಾರೆ. ರಾಜ್ಯದ 126ರಲ್ಲಿ ಸುಮಾರು 40 ವಿಧಾನಸಭೆ ಕ್ಷೇತ್ರಗಳ ಮತದಾನದಲ್ಲಿ ಮಹತ್ವದ ಪಾತ್ರವಹಿಸುವ ಈ ಕಾರ್ವಿುಕರು ಈ ಬಾರಿ ಯಾರಿಗೆ ವೋಟು ಹಾಕುತ್ತಾರೆ ಎಂಬುದು ಸದ್ಯ ಕಾಡುತ್ತಿರುವ ಪ್ರಶ್ನೆ.
ಪ್ರತಿ ಚುನಾವಣೆ ಬಂದಾಗಲೂ, ಇಲ್ಲಿನ ಕಾರ್ವಿುಕರ ಶೋಚನೀಯ ಬದುಕು ಚರ್ಚೆಯ ಮುನ್ನೆಲೆಗೆ ಬರುತ್ತದೆ ಮತ್ತು ಎಲ್ಲ ಪಕ್ಷಗಳು ನಾ ಮುಂದು ತಾ ಮುಂದು ಎಂಬಂತೆ ಕಾರ್ವಿುಕರತ್ತ ತೆರಳಿ, ಮಾಧ್ಯಮದ ಮುಂದೆ ಆಶ್ವಾಸನೆಗಳ ಸುರಿಮಳೆಯನ್ನೇ ಸುರಿಸುತ್ತಾರೆ. ಆದರೆ, ಈ ಕಾರ್ವಿುಕರ ಬದುಕು ಮಾತ್ರ ಸುಧಾರಿಸಿಲ್ಲ. ‘ಕೇರಳದಲ್ಲಿ ಓರ್ವ ಚಹಾ ತೋಟದ ಕಾರ್ವಿುಕನಿಗೆ -ಠಿ; 380 ದಿನಗೂಲಿಯಿದೆ. ಹಾಗಾದರೆ, ನಾವೇನು ತಪು್ಪ ಮಾಡಿದ್ದೇವೆ? ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ದುಡ್ಡು ಬೇಕು. ಆಸ್ಪತ್ರೆಗಳಿಗೆ ಕಾಲಿಟ್ಟರೆ ಹಣವನ್ನೇ ದೋಚುತ್ತಾರೆ. ಇವೆಲ್ಲವನ್ನೂ ಈ ಕಡಿಮೆ ಹಣದಲ್ಲಿ ಹೇಗೆ ನಿಭಾಯಿಸುವುದು ಹೇಳಿ’ ಎಂದು ಪ್ರಶ್ನಿಸುತ್ತಾರೆ ನಾಗಾಂವ್ ಜಿಲ್ಲೆಯ ಕಥಿಯಾಟೊಲಿಯ ಟೀ ಗಾರ್ಡನ್ ಕಾರ್ವಿುಕ ಮಹಿಳೆ ಸೀತಾ. ನಮ್ಮ ಕಷ್ಟ, ನೋವುಗಳು ನಿರಂತರ ಎನ್ನುವುದಾರೆ ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿಯವರ ಪಕ್ಷಕ್ಕೆ ವೋಟು ಹಾಕಿ ಪ್ರಯೋಜನವೇನು ಎನ್ನುವುದು ಅವರ ಪ್ರಶ್ನೆ.
ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ನೇತೃತ್ವದ ಬಿಜೆಪಿ ಸರ್ಕಾರ 2016ರಲ್ಲಿ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಕಾರ್ವಿುಕರ ಬವಣೆಗೆ ಪರಿಹಾರ ಒದಗಿಸಲೆಂದೇ ಸಲಹಾ ಮಂಡಳಿಯೊಂದನ್ನು ರಚನೆ ಮಾಡಿತು. ಕಾರ್ವಿುಕರ ದಿನಗೂಲಿಯನ್ನು -ಠಿ; 351ಕ್ಕೆ ನಿಗದಿಗೊಳಿಸಬೇಕು ಎನ್ನುವುದು ಮಂಡಳಿ ಶಿಫಾರಸಾಗಿತ್ತು. ಅಸ್ಸಾಂ ಚಹಾ ಮಜ್ದೂರ್ ಸಂಘ ಕೂಡ ಕನಿಷ್ಠ ದಿನಗೂಲಿ -ಠಿ; 351 ಇರಬೇಕು ಎಂದು ಒತ್ತಾಯಿಸಿದೆ. ಆದರೆ, -ಠಿ; 137 ಇದ್ದ ದಿನಗೂಲಿಯನ್ನು ಸರ್ಕಾರ -ಠಿ; 167ಕ್ಕೆ ಏರಿಸಿತು. ಚುನಾವಣೆ ಹತ್ತಿರವಿದ್ದಂತೆ, ಫೆಬ್ರವರಿಯಲ್ಲಿ ದಿನಗೂಲಿಯನ್ನು -ಠಿ; 217ಕ್ಕೆ ನಿಗದಿಗೊಳಿಸಲಾಯಿತು. ಅಂದರೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದಿನಗೂಲಿಯಲ್ಲಿ ಒಟ್ಟು -ಠಿ; 80 ಏರಿಕೆಯಾಗಿದೆ.
‘2001ರಿಂದ 2016ರ ತನಕ ಅಧಿಕಾರದಲ್ಲಿದ್ದ ಕಾಂಗ್ರೆಸ್ ಕಾರ್ವಿುಕರ ಕಷ್ಟಕ್ಕೆ ಸ್ಪಂದಿಸಲಿಲ್ಲ. ಈಗ ಹಠಾತ್ತಾಗಿ ದಿನಗೂಲಿ ಬಗ್ಗೆ ಮಾತನಾಡುತ್ತಿದ್ದಾರೆ. 15 ವರ್ಷದಲ್ಲಿ ಸಿಎಂ ತರುಣ್ ಗೋಗೋಯ್ ಕಾರ್ವಿುಕರ ಬವಣೆ ನೀಗಿಸುತ್ತಿದ್ದರೆ, ಈಗ ಬಿಜೆಪಿ ವಿರುದ್ಧ ಮಾತನಾಡುವ ಅಗತ್ಯವೇ ಇರುತ್ತಿರಲಿಲ್ಲ’ ಎನ್ನುತ್ತಾರೆ ಹೋಜ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಮುಖಂಡ ದೀಪನಾಥ್. ಏತನ್ಮಧ್ಯೆ, ಬಿಜೆಪಿ ಸರ್ಕಾರದ ದಿನಗೂಲಿ ಏರಿಕೆ ಕ್ರಮವನ್ನು ಖಾಸಗಿ ಚಹಾ ತೋಟದ ಮಾಲೀಕರು ಕೋರ್ಟ್​ನಲ್ಲಿ ಪ್ರಶ್ನಿಸಿ, ಮಧ್ಯಂತರ ತಡೆ ತಂದಿದ್ದಾರೆ. ಖಾಸಗಿ ತೋಟಗಳ ಕಾರ್ವಿುಕರ ದಿನಗೂಲಿಯನ್ನೂ ಸರ್ಕಾರವೇ ನಿರ್ಧರಿಸುವುದರಿಂದ, ಮಾಲೀಕರು ಸರ್ಕಾರದ ವಿರುದ್ಧ ಕಾನೂನು ಸಮರಕ್ಕಿಳಿದಿದ್ದಾರೆ. ಹೀಗಾಗಿ, -ಠಿ; 351ಕ್ಕೆ ದಿನಗೂಲಿ ಏರಿಸುವುದು ನಿರೀಕ್ಷಿಸಿದಷ್ಟು ಸುಲಭದ ಮಾತೇನಲ್ಲ!
ಉಪ್ಪಿನ ಚಹಾ?!
ದೇಹದಲ್ಲಿ ನೀರಿಳಿಕೆ ತಗ್ಗಿಸಲೆಂದೇ ಬ್ರಿಟಿಷರ ಕಾಲದಲ್ಲಿ ಕಾರ್ವಿುಕರು ಚಹಾಕ್ಕೆ ಉಪ್ಪನ್ನು ಸೇರಿಸಿ ಕುಡಿಯುತ್ತಿದ್ದರು. ಇದು ಆರೋಗ್ಯಕ್ಕೆ ಹಾನಿಕಾರಕ. ನೂರಾರು ಕಾರ್ವಿುಕರು ಈ ‘ಕೆಟ್ಟ’ ಚಾಳಿಯನ್ನು ಈಗಲೂ ಮುಂದುವರಿಸಿದ್ದಾರೆ. ಇದು, ಹೈಪರ್​ಟೆನ್ಷನ್, ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ ಏರಿಕೆ ಸೇರಿ ಹಲವು ಅನಾರೋಗ್ಯಕ್ಕೆ ಕಾರಣವಾಗಿದೆ. ಸಕ್ಕರೆಗೆ ಖರ್ಚು ಮಾಡಲು ಹಣವಿಲ್ಲದಿರುವುದು ಕೂಡ ಉಪ್ಪಿನ ಚಹಾ ಕುಡಿಯಲು ಒಂದು ಕಾರಣ. ಇವೆಲ್ಲವನ್ನು ಪರಿಗಣಿಸಿಯೇ, ಚಹಾ ತೋಟದ ಕಾರ್ವಿುಕರ ಕುಟುಂಬಕ್ಕೆ ಪ್ರತಿ ತಿಂಗಳು 2 ಕೆಜಿ ಸಕ್ಕರೆ ಉಚಿತವಾಗಿ ನೀಡಲಾಗುವುದು ಎಂದು 2019ರಲ್ಲಿ ಮಂಡಿಸಿದ್ದ ರಾಜ್ಯ ಬಜೆಟ್​ನಲ್ಲಿ ಹಣಕಾಸು ಸಚಿವ ಹಿಮಾಂತ ಬಿಸ್ವ ಶರ್ಮ ಘೊಷಿಸಿದ್ದರು. ತೋಟದ ಕಾರ್ವಿುಕರು ಅವರ ಹಕ್ಕುಗಳನ್ನು ಪ್ರಶ್ನಿಸಿ ತಮ್ಮ ವಿರುದ್ಧ ಬಂಡೇಳಬಾರದು ಎಂದೇ ಅಂದು ಬ್ರಿಟಿಷರು ಚಹಾದಲ್ಲಿ ಉಪು್ಪ ಬೆರೆಸಿ ಕಾರ್ವಿುಕರ ಮಿದುಳನ್ನು ದುರ್ಬಲಗೊಳಿಸುತ್ತಿದ್ದರು ಎಂಬ ವಾದವೂ ಇದೆ. ಸ್ವಾತಂತ್ರಾ್ಯ ನಂತರ ಈ ಚಹಾ ಉದ್ಯಾನಗಳನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಿದರೂ, ಉಪ್ಪಿನ ಚಹಾ ಹೀರುವುದು ಕಡಿಮೆಯಾಗಿರಲಿಲ್ಲ. ಆದರೆ, ಈಚಿನ ವರ್ಷಗಳಲ್ಲಿ ಜಾಗೃತಿ ಹೆಚ್ಚಿದ್ದು, ಉಪ್ಪಿನ ಚಹಾದಿಂದ ಕಾರ್ವಿುಕರು ದೂರ ಸರಿಯುತ್ತಿದ್ದಾರೆ.
ಕರ್ನಾಟಕ ಕಾರ್ವಿುಕರ ಸ್ಥಿತಿ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಹಿರೇಬೈಲು, ಸಂಸೆಯಲ್ಲಿರುವ ಗುಮ್ಮನ್​ಖಾನ್ ಎಸ್ಟೇಟ್ ಹಾಗೂ ಬಾಳೆಹೊನ್ನೂರು ಪ್ಲಾಂಟೇಶನ್ಸ್ ತಲಾ 225 ಹೆಕ್ಟೇರ್, ಹಲಗೇಶ್ವರ 194, ದೇವನ್ ಪ್ಲಾಂಟೇಶನ್ಸ್ 170, ಕೆಳಗೂರು ಎಸ್ಟೇಟ್ 144, ಮೂಡಿಗೆರೆಯ ಮೆರ್ತಿಖಾನ್ ಪ್ಲಾಂಟೇಶನ್ಸ್ 115, ಮೈಸೂರು ಪ್ಲಾಂಟೇಶನ್ಸ್ 113, ಮಾವಿನಕೆರೆ ಎಸ್ಟೇಟ್​ನ 56 ಹೆಕ್ಟೇರ್​ನಲ್ಲಿ ಚಹಾವನ್ನು ಕಾಫಿ ಜತೆ ಮಿಶ್ರಬೆಳೆಯಾಗಿ ಬೆಳೆಯಲಾಗುತ್ತಿದೆ. ಈ ಬೆಳೆಯನ್ನು ಅವಲಂಬಿಸಿದ 2 ಸಾವಿರಕ್ಕೂ ಹೆಚ್ಚು ಕಾರ್ವಿುಕರಿದ್ದಾರೆ. ಸ್ಥಳೀಯ ಕಾರ್ವಿುಕರ ಜತೆಗೆ ಮಂಗಳೂರು ಮೂಲದವರೂ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಜತೆಗೆ ಅಸ್ಸಾಂನ ವಲಸೆ ಕಾರ್ವಿುಕರೂ ಇಲ್ಲಿ ದುಡಿಯುತ್ತಿದ್ದಾರೆ. ಕಳೆದ ನಾಲ್ಕೆ ೖದು ವರ್ಷಗಳಲ್ಲಿ ಬೆಲೆಯ ಏರಿಳಿತ ಹಾಗೂ ಮಾರುಕಟ್ಟೆ ಅವ್ಯವಸ್ಥೆಯಿಂದ ಬೆಳೆಗಾರರ ಜತೆಗೆ ಕಾರ್ವಿುಕರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರ್ವಿುಕರಿಗೆ ವಾಸ್ತವ್ಯಕ್ಕೆ ಎಸ್ಟೇಟ್​ನವರೇ ಮನೆಗಳನ್ನು ಕೊಟ್ಟಿದ್ದಾರೆ. ಅವರಿಗೆ ಇಎಸ್​ಐ, ಪಿಎಫ್, ಒಟಿ ಮತ್ತಿತರ ಸೌಲಭ್ಯಗಳ ಜತೆಗೆ ಚಹಾ ಎಲೆ ಕೊಯ್ಯುವವರಿಗೆ ದಿನಕ್ಕೆ -ಠಿ; 345 ಕೊಡುತ್ತಾರೆ.
ಎಸ್​ಟಿ ಮಾನ್ಯತೆಗೆ ಒತ್ತಾಯ
ಸರ್ಕಾರಗಳು ದಿನಗೂಲಿ ಹೆಚ್ಚಿಸದಿರುವುದರಿಂದ ಸಿಟ್ಟಾಗಿರುವ ಕಾರ್ವಿುಕ ಕುಟುಂಬಗಳು ತಮ್ಮ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿವೆ. ಅಸ್ಸಾಂ ಚಹಾ ಬುಡಕಟ್ಟು ವಿದ್ಯಾರ್ಥಿ ಸಂಘಟನೆ (ಎಟಿಟಿಎಸ್​ಎ) ಈ ನಿಟ್ಟಿನಲ್ಲಿ ಸಕ್ರಿಯವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದೆ. ಪರಿಶಿಷ್ಟ ಪಂಗಡದ ಮಾನ್ಯತೆ ಸಿಕ್ಕರಷ್ಟೇ ದಶಕಗಳ ರೋದನಕ್ಕೆ ಪರಿಹಾರ ಸಿಗಲಿದೆ. ಈವರೆಗೆ ನಮ್ಮನ್ನು ಶೋಷಿಸಿದ್ದು ಸಾಕು. ಇನ್ನಾದರೂ ನೆಮ್ಮದಿಯಿಂದ ಬದುಕುವಂತೆ ಸರ್ಕಾರಗಳು ಮಾಡಲಿ. ಯಾರು ಎಸ್ಟಿ ಮಾನ್ಯತೆ ನೀಡುತ್ತಾರೋ ಅವರಿಗೆ ನಮ್ಮ ಮತ ಎಂಬ ಮಾತುಗಳು ಕಾರ್ವಿುಕರ ‘ಚಾಯ್ ಪೆ ಚರ್ಚಾ’ಗಳಲ್ಲಿ ಜೋರಾಗಿ ಕೇಳುತ್ತಿವೆ.
ಅಸ್ಸಾಂ ಚಹಾದ ಇತಿಹಾಸ
ಅಸ್ಸಾಂ ಚಹಾದ ಕಥೆ 200 ವರ್ಷಗಳಿಗಿಂತಲೂ ಹಳೆಯದು. 1820ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ರಾಜ್ಯದ ಚಹಾ ತೋಟದ ಚಿತ್ರಣ ಬದಲಾಯಿಸಿತ್ತು. ಆರಂಭದಲ್ಲಿ ನೇಪಾಳ, ಚೀನಾದಿಂದ ತೋಟಕ್ಕೆ ಕಾರ್ವಿುಕರನ್ನು ಕರೆತರಲಾಯಿತು. ಆದರೆ ಅಸ್ಸಾಂನ ಹವಾಮಾನ ಅವರಿಗೆ ಸರಿಹೊಂದಲಿಲ್ಲ. ಇದು ನಷ್ಟಕ್ಕೆಡೆಮಾಡಿತು. ನಂತರ, ಜಾರ್ಖಂಡ್​ನಿಂದ ಕಾರ್ವಿುಕರು ಬಂದರು. ಸನ್ತಾಲ್, ಮುಂಡಾ, ಖದಿಯಾ, ಉರಾನ್ ಎಂಬ ಆದಿವಾಸಿ ಸಮುದಾಯಗಳು ಅಸ್ಸಾಂನ ಚಹಾ ತೋಟಕ್ಕೆ ಬಂದು ನೆಲೆಸಿದವು. 1860ರಲ್ಲಿ ಬಿಹಾರ, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶಗಳಿಂದ ಕಾರ್ವಿುಕರನ್ನು ಕರೆತಂದರು. ಭಾರತದ ಒಟ್ಟು ಶೇಕಡ 52 ಮತ್ತು ವಿಶ್ವದ ಚಹಾ ಉತ್ಪಾದನೆಯ ಶೇ.15ರಷ್ಟು ಚಹಾ ಅಸ್ಸಾಂನಲ್ಲೇ ಉತ್ಪಾದನೆಯಾಗುತ್ತಿದೆ. ಆದರೆ, ಶೋಷಣೆ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ಕೊರತೆ, ಆರ್ಥಿಕ ಬಿಕ್ಕಟ್ಟು ಈಗಲೂ ಕಾರ್ವಿುಕ ಕುಟುಂಬಗಳನ್ನು ನಿತ್ಯವೂ ಕಾಡುತ್ತಿದೆ. ಪ್ರಧಾನಿ ಮೋದಿ ರ್ಯಾಲಿಯೊಂದರಲ್ಲಿ, ‘ಚಹಾ ಕಾರ್ವಿುಕರ ಬವಣೆ ಚಹಾ ಮಾರುವವನಿಗಿಂತ ಚೆನ್ನಾಗಿ ಬೇರೆ ಯಾರಿಗೆ ತಾನೆ ತಿಳಿದೀತು?’ ಎಂದಿದ್ದರು.
Video: ಅನ್ಯಗ್ರಹದಲ್ಲಿ ಮೊದಲ ಬಾರಿಗೆ ಹಾರಾಡಿತು ಹೆಲಿಕಾಪ್ಟರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
