ಅಹಮದಾಬಾದ್​:ಯುವತಿಯೊಬ್ಬಳು ಸೆಲ್ಫಿ ವಿಡಿಯೋ ಮಾಡಿ ಸಬರಮತಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್​ನ ಅಹಮದಾಬಾದ್​ ನಗರದಲ್ಲಿ ನಡೆದಿದೆ.
ಮೃತ ಯುವತಿಯನ್ನು ಆಯೇಷಾ ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸೆಲ್ಫಿ ವಿಡಿಯೋ ರೆಕಾರ್ಡ್​ ಮಾಡಿ ನಗುತ್ತಲೇ ತನ್ನ ನೋವನ್ನು ಹೇಳಿಕೊಂಡಿದ್ದಾಳೆ. ಯಾವಾಗ ವಿಡಿಯೋ ಪಾಲಕರಿಗೆ ತಲುಪಿದಾಗ ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ನದಿಯ ಸುತ್ತ ರಕ್ಷಣಾ ತಂಡ ಶೋಧ ಕಾರ್ಯ ಕೈಗೊಂಡ ಬಳಿಕ ಮೃತದೇಹ ಪತ್ತೆಯಾಗಿದ್ದು, ಶವಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿರಿ:ಕೆಆರ್​ಎಸ್​ ಹಿನ್ನೀರಿನಲ್ಲಿ ಪೊಲೀಸರಿಂದ ಮೋಜು-ಮಸ್ತಿ- ಭರ್ಜರಿ ಪಾರ್ಟಿ!
ಆಯೇಷಾ ತಂದೆ ಲಿಯಾಖತ್​ ಅಲಿ ಬ್ಯಾಂಕ್​ ಉದ್ಯೋಗಿ. ಮಗಳ ಬಗ್ಗೆ ಮಾತನಾಡಿರುವ ಅಲಿ, 2018ರಲ್ಲಿ ರಾಜಸ್ಥಾನ ಜಲೋರ್​ ನಿವಾಸಿ ಆರೀಫ್​ ಖಾನ್ ಜತೆ​ ಆಯೇಷಾಗೆ ಮದುವೆ ಮಾಡಿದೆವು. ಮದುವೆಯಾದ ಕೆಲವೇ ದಿನಗಳಲ್ಲಿ ಆರೀಫ್​ ಕುಟುಂಬ ವರದಕ್ಷಿಣೆಗಾಗಿ ಆಯೇಷಾಗೆ ಕಿರುಕುಳ ನೀಡಲು ಆರಂಭಿಸಿತು. ಹೀಗಿರುವಾಗ 2019ರಲ್ಲಿ ಮಗಳನ್ನು ಮನೆಗೆ ಕರೆತಂದ ಆರೀಫ್​, ಹಣ ನೀಡುವವರೆಗೂ ಮರಳಿ ಕರೆದೊಯ್ಯುವುದಿಲ್ಲ ಎಂದನು. ಆರೀಫ್​ ಇಟ್ಟಿದ್ದ 1.5 ಲಕ್ಷ ರೂ. ಹಣವನ್ನು ಆಯೇಷಾ ಕುಟುಂಬ ನೀಡಿದ ಬಳಿಕ ಆಕೆಯನ್ನು ತನ್ನ ಜತೆಯಲ್ಲಿ ಆರೀಫ್​ ಕರೆದೊಯ್ದನು ಎಂದು ಅಲಿ ಮಾಹಿತಿ ನೀಡಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಆರೀಫ್​ ಮತ್ತೆ ಹಣಕ್ಕಾಗಿ ಬೇಡಿಕೆ ಇಡಲು ಶುರು ಮಾಡಿದನು. ಮತ್ತೆ ಆಯೇಷಾಳನ್ನು ತವರಿಗೆ ಕರೆತಂದು ಬಿಟ್ಟನು. ಅಲ್ಲದೆ, ಆಕೆಯೊಂದಿಗೆ ಫೋನ್​ನಲ್ಲಿ ಮಾತನಾಡುವುದನ್ನು ಸಹ ನಿಲ್ಲಿಸಿದನು. ಇದರಿಂದ ಆಯೇಷಾ ತೀವ್ರವಾಗಿ ನೊಂದಿದ್ದಳು. ಕೆಲವು ದಿನಗಳ ಹಿಂದೆ ಆರೀಫ್​ಗೆ ಕರೆ ಮಾಡಿದ್ದ ಆಯೇಷಾ ತನ್ನನ್ನು ಕರೆದೊಯ್ಯದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು. ಆದರೆ, ಇದಕ್ಕೆ ಆರೀಫ್​ ಕ್ಯಾರೆ ಎನ್ನಲಿಲ್ಲ. ನೀನು ಸಾಯಬೇಕೆಂದುಕೊಂಡಿದ್ದರೆ ಸಾಯಿ ಅದರಿಂದ ನನಗೇನು ಇಲ್ಲವೆಂದಿದ್ದ. ಇದರಿಂದ ಮತ್ತಷ್ಟು ಘಾಸಿಗೊಂಡ ಆಯೇಷಾ ಈ ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆಂದು ತಂದೆ ಅಲಿ ಆರೋಪಿಸಿದ್ದಾರೆ.
ಇದನ್ನೂ ಓದಿರಿ:ಬ್ಯಾಂಡೇಜ್ ಸುತ್ತಿಕೊಂಡು ಪ್ಲೀಸ್​ ಹೆಲ್ಪ್ ಮಿ ಅಂದ್ರು… ಸಹಾಯಕ್ಕೆ ಹೋದ ವಕೀಲ ಕಿಡ್ನ್ಯಾಪ್​! ಮುಂದೇನಾಯ್ತು?
ಬೇಸರದಲ್ಲಿದ್ದ ಮಗಳು ಆತ್ಮಹತ್ಯೆ ಮಾಡಿಕೊಳ್ಳಬಾರದೆಂದು ಆಗಾಗ ಆಕೆಯನ್ನು ಹುರಿದುಂಬಿಸುತ್ತಿದ್ದೆ. ಆದರೆ, ನನ್ನ ಪ್ರಯತ್ನ ಕೊನೆಗೂ ವಿಫಲವಾಯಿತು ಎಂದು ನೊಂದುಕೊಂಡ ಅಲಿ, ತನ್ನ ಮಗಳ ಸಾವಿಗೆ ನ್ಯಾಯ ದೊರಕಬೇಕೆಂದು ಒತ್ತಾಯಿಸಿದರು.(ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಪಬ್​ಜಿ ಆಡುವಾಗ ಅರಳಿದ ಪ್ರೀತಿ: ಪ್ರಿಯಕರನನ್ನು ಹುಡುಕಿ ಹೊರಟ ವಿವಾಹಿತೆಗೆ ಕಾದಿತ್ತು ಬಿಗ್​ ಶಾಕ್​!

ಮೇಕೆ ತಲೆ ಕತ್ತರಿಸಿ ಕೆಲಸ ಕಳೆದುಕೊಂಡ ಪೊಲೀಸ್​ ಅಧಿಕಾರಿ! ಇದು ವೈರಲ್​ ವಿಡಿಯೋ ಎಫೆಕ್ಟ್​!

ಕೋಳಿಪಡೆ ಆಡಲು ಬಂದವನನ್ನು ಕೊಂದು ಪೊಲೀಸ್​ ಠಾಣೆ ಸೇರಿದ ಕೋಳಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − six =
Remember me
