ಹೈದರಾಬಾದ್:ಭಾರತ ಕ್ರಿಕೆಟ್​ ತಂಡದ ದಿಗ್ಗಜ, ಸ್ಪಿನ್​ ಬೌಲರ್​ ಹರ್ಭಜನ್​ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ 23 ವರ್ಷದ ವೃತ್ತಿ ಬದುಕಿಗೆ ಇಂದು (ಶುಕ್ರವಾರ) ವಿದಾಯ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಿವೃತ್ತಿ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಹರ್ಭಜನ್​ ಸಿಂಗ್​, ಎಲ್ಲ ಒಳ್ಳೆಯ ದಿನಗಳು ಒಂದಲ್ಲ ಒಂದು ದಿನ ಕೊನೆಯಾಗಲೇ ಬೇಕು. ನನ್ನ ಬದುಕಿನಲ್ಲಿ ಎಲ್ಲವನ್ನೂ ನೀಡಿದ ಆಟಕ್ಕೆ ವಿದಾಯ ಹೇಳುತ್ತಿದ್ದೇನೆ. ನಾನು ಇಂದು ಎಲ್ಲ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಯಾಗುತ್ತಿದ್ದೇನೆ. ನನ್ನ ಈ ಜರ್ನಿನಿಯನ್ನು ಸುಂದರ ಮತ್ತು ಅವಿಸ್ಮರಣೀಯವಾಗಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುವೆ. ನನ್ನ ಕ್ರಿಕೆಟ್​ ಗುರುಗಳಿಗೂ ಧನ್ಯವಾದ. ನನಗೆ ತಂದೆ-ತಾಯಿ ಜತೆಗೆ ನನ್ನ ಸಹೋದರಿಯರೇ ವಿಶೇಷ ಶಕ್ತಿ. ಇನ್ನು ಪತ್ನಿ ಮತ್ತು ನನ್ನಿಬ್ಬರ ಮಕ್ಕಳ ಜತೆ ಕಾಲ ಕಳೆಯುವೆ’ ಎಂದು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ.
ಸದ್ಯ 41 ವರ್ಷಕ್ಕೆ ಕಾಲಿಟ್ಟಿರುವ ಹರ್ಭಜ್​ ಸಿಂಗ್​ ಅವರು 17ನೇ ವಯಸ್ಸಿನಲ್ಲೇ ಕ್ರಿಕೆಟ್​ ಜರ್ನಿ ಆರಂಭಿಸಿದ್ದರು.1998ರಲ್ಲಿ ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದೊಂದಿಗೆ ಅಂತರಾಷ್ಟ್ರೀಯ ಮಟ್ಟದ ಪಂದ್ಯದಲ್ಲಿ ಆಡಿದರು. ಇದು ಇವರಿಗೆ ಚೊಚ್ಚಲ ಪಂದ್ಯವಾಗಿತ್ತು. ನಂತರ ಇದೇ ವರ್ಷದಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ODI ಚೊಚ್ಚಲ ಪಂದ್ಯವನ್ನೂ ಆಡಿದ್ದರು. 2006 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ T20ಗೆ ಎಂಟ್ರಿ ಕೊಟ್ಟಿದ್ದರು. ಟೀಂ ಇಂಡಿಯಾ ಪರ ಉತ್ತಮ ಸ್ಪಿನ್ನರ್​ ಎಂದೇ ಖ್ಯಾತಿಗಳಿದ್ದ ಹರ್ಭಜನ್​ ಸಿಂಗ್​​, 2001ರಲ್ಲಿ ಬಾರ್ಡರ್​ – ಗವಾಸ್ಕರ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳಿಂದ ದಾಖಲೆಯ 32 ವಿಕೆಟ್​​ ಪಡೆದುಕೊಂಡು ಹೊಸ ದಾಖಲೆ ನಿರ್ಮಿಸಿದ್ದರು. 2000ರಿಂದ ದಶಕಕಾಲ ಭಾರತೀಯ ತಂಡದ ಅವಿಭಾಜ್ಯ ಅಂಗವಾಗಿದ್ದರು. ಅಷ್ಟೇ ಅಲ್ಲ, ಹರ್ಭಜನ್ ಸಿಂಗ್ 2007 WT20 ಮತ್ತು 2011 ICC ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು.
ಹೊಲದಲ್ಲಿ ಮಗುವನ್ನ ಎಸೆದು ಹೋದ ಕಟುಕರು: ರಾತ್ರಿಯಿಡೀ ಕಾವಲು ಕಾದು ಮಗುವಿನ ಪ್ರಾಣ ಉಳಿಸಿದ ಬೀದಿನಾಯಿ!

ಜೆಡಿಎಸ್​ ಮುಖಂಡನ ಪುತ್ರನ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್! ಲೇಡಿ ಎಸ್​ಐ ​ಜತೆಗಿನ ಲವ್ವಿಡವ್ವಿಯೇ ಮುಳುವಾಯ್ತಾ?

ಊಟಕ್ಕೆಂದು ಹೋದವರು ವಾಪಸ್​ ಬಂದದ್ದು ಹೆಣವಾಗಿ… ಅಯ್ಯೋ ವಿಧಿಯೇ ನೀನೇಷ್ಟು ಕ್ರೂರಿ?

ಗಂಡನ ಜತೆ ಹೋಗಲ್ಲ ಎಂದಾಕೆಗೆ ಬೂಟುಗಾಲಲ್ಲೇ ಒದ್ದು ಹಿಂಸಿಸಿದ ಪೊಲೀಸರು! ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 11 =
Remember me
