ಕೀವ್​:ರಷ್ಯಾ ಮತ್ತು ಯೂಕ್ರೇನ್​ ನಡವಿನ ಯುದ್ಧ ಇಂದು(ಶನಿವಾರ) ಕೂಡ ಮುಂದುವರಿದ್ದು, ಯೂಕ್ರೇನ್​ನಲ್ಲಿರುವ ಭಾರತೀಯ ಮೂಲದ ವಿದ್ಯಾರ್ಥಿಗಳು ವಾಪಸ್ ದೇಶಕ್ಕೆ ಹೋದರೆ ಸಾಕಪ್ಪ ಎಂದು ಜೀವ ಭಯದಲ್ಲಿ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ, ಕೀವ್​ನಲ್ಲಿರುವ ಹರಿಯಾಣ ಮೂಲದ ಯುವತಿಯೊಬ್ಬಳು ಯೂಕ್ರೇನ್​ ಬಿಟ್ಟು ಬರಲು ಒಲ್ಲೆ ಎಂದಿದ್ದಾಳೆ. ಸುರಕ್ಷಿತವಾಗಿ ಪೋಲ್ಯಾಂಡ್​ಗೆ ತಲುಪಿಸಲು ಆಕೆಯ ತಾಯಿ ವ್ಯವಸ್ಥೆ ಮಾಡಿದ್ದರಾದರೂ ಮಗಳು ನಿರಾಕರಿಸಿದ್ದಾಳೆ.
ಯೂಕ್ರೇನ್​ನಲ್ಲಿ ತಾನು ವಾಸವಿದ್ದ ಮನೆಯ ಮಾಲೀಕರ ಮೂರು ಪುಟ್ಟ ಮಕ್ಕಳನ್ನು ರಕ್ಷಣೆ ಮಾಡಿ ಆರೈಕೆ ಮಾಡುತ್ತಿದ್ದಾಳೆ. ಇಂತಹ ಸ್ಥಿತಿಯಲ್ಲಿ ಈ ಮಕ್ಕಳನ್ನು ಬಿಟ್ಟು ಬರಲು ಆಗಲ್ಲ ಎಂದಿದ್ದು, ಸಾವಿನ ಕೂಪದಲ್ಲೂ ಮಾನವೀಯತೆ ಮರೆಯುತ್ತಿರುವ ಭಾರತದ ಹೆಣ್ಣುಮಗಳ ಧೈರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಅಂದಹಾಗೆ ಆ ಯುವತಿ ಹೆಸರು ನೇಹಾ. ಹರಿಯಾಣ ಮೂಲದ ನೇಹಾ, ವಿದ್ಯಾಭ್ಯಾಸಕ್ಕೆಂದ ಯೂಕ್ರೇನ್​ನ ಕೀವ್​ ನಗರಕ್ಕೆ ತೆರಳಿದ್ದರು. ನೇಹಾಳ ತಂದೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ್ದರು. ಅವರೀಗ ಬದುಕಿಲ್ಲ. ಈಕೆಯ ತಾಯಿ ಹರಿಯಾಣದ ಚಾರ್ಖಿ ದಾದ್ರಿಯಲ್ಲಿದ್ದಾರೆ. ಯೂಕ್ರೇನ್​ ಮೇಲೆ ರಷ್ಯಾ ಪಡೆ ದಾಳಿ ಮಾಡಿದ ಸುದ್ದಿ ಕೇಳಿ ಆತಂಕಗೊಂಡ ನೇಹಾಳ ತಾಯಿ, ಯೂಕ್ರೇನ್​ನಲ್ಲಿರುವ ಭಾರತೀಯ ದೂತವಾಸವನ್ನು ಸಂಪರ್ಕಿಸಿ ತನ್ನ ಮಗಳನ್ನು ಸುರಕ್ಷಿತವಾಗಿ ಪೋಲ್ಯಾಂಡ್​ಗೆ ತಲುಪಿಸುವ ವ್ಯವಸ್ಥೆ ಮಾಡಿಸಿದ್ದರು. ಆದರೆ, ನೇಹಾ ತಾನಿದ್ದ ಜಾಗವನ್ನು ಬಿಟ್ಟು ಬರಲು ಒಪ್ಪಲಿಲ್ಲ. ಕೀವ್​ನಲ್ಲಿ ತಾನು ವಾಸವಿದ್ದ ಮನೆಯ ಮಾಲೀಕ ದೇಶ ರಕ್ಷಣೆಗಾಗಿ ಪತ್ನಿ ಹಾಗೂ ತನ್ನ ಮೂವರು ಪುಟ್ಟ ಮಕ್ಕಳನ್ನು ಬಿಟ್ಟು ಸ್ವಯಂ ಪ್ರೇರಣೆಯಿಂದ ಗನ್​ ಹಿಡಿದು ಯುದ್ಧ ಭೂಮಿಯಲ್ಲಿದ್ದಾರೆ.
ರಷ್ಯಾದ ಕ್ಷಿಪಣಿ ದಾಳಿ ಹೆಚ್ಚಾದ್ದರಿಂದ ಸುರತಕ್ಷತೆ ದೃಷ್ಟಿಯಿಂದ ಮನೆಯ ಮಾಲಕಿ, ಅವರ ಮೂರು ಮಕ್ಕಳನ್ನು ಕರೆದುಕೊಂಡು ನೇಹಾ, ಬಾಂಬ್ ದಾಳಿಯಿಂದ ರಕ್ಷಣೆ ಪಡೆಯಲು ಇರುವ ಆಶ್ರಯತಾಣಕ್ಕೆ ಕೊಂಡೊಯ್ದು ಆರೈಕೆ ಮಾಡುತ್ತಿದ್ದಾಳೆ. ಇಂತಹ ಸಂಕಷ್ಟ ಕಾಲದಲ್ಲಿ ಪುಟ್ಟ ಮಕ್ಕಳನ್ನು ಬಿಟ್ಟು ನಾನೊಬ್ಬಳೇ ಬರಲು ಸಾಧ್ಯವಿಲ್ಲ ಎಂದು ತನ್ನ ತಾಯಿಗೆ ನೇಹ ತಿಳಿಸಿದ್ದಾಳೆ. ಮಗಳಿಗೆ ಏನಾಗುತ್ತೋ ಎಂಬ ಭಯ ತಾಯಿಗೆ ಕಾಡುತ್ತಿದೆಯಾದರೂ, ಎಷ್ಟೇ ಆದರೂ ಆಕೆ ಯೋಧನ ಮಗಳಲ್ಲವೇ… ಜತೆಗಿರುವವರ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮಗಳು ಹೋರಾಡುತ್ತಿದ್ದಾಳೆ. ಅವರೆಲ್ಲರೂ ಸುರಕ್ಷಿತಾಗಿರಲಿ ಎಂದು ತಾಯಿ ತಾನಿರುವಲ್ಲೇ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಮೇಕೆದಾಟು ಪಾದಯಾತ್ರೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಡಿಕೆಶಿಗೆ ಪತ್ರ ಬರೆದ ಸಿದ್ಧಗಂಗಾ ಶ್ರೀಗಳು

ಯೂಕ್ರೇನ್​ನಲ್ಲಿ ನಾಗರಿಕರ ವಸತಿ ಕಟ್ಟಡಗಳ ಮೇಲೂ ರಷ್ಯಾ ದಾಳಿ

ಯೂಕ್ರೇನ್​ನಲ್ಲಿ ಮದ್ವೆ ಆದ ಮರುದಿನವೇ ಗನ್​ ಹಿಡಿದು ದೇಶ ರಕ್ಷಣೆಗೆ ನಿಂತ ಜೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 11 =
Remember me
