ಚಂಡೀಗಢ:ಪೊಲೀಸರೆಂದು ಕಳ್ಳರನ್ನು ಹಿಡಿಯುವವರು ಎನ್ನುವ ಕಲ್ಪನೆ ನಮ್ಮ ನಿಮ್ಮೆಲ್ಲರ ತಲೆಯಲ್ಲು ಇರುತ್ತದೆ. ಆದರೆ ಈ ವಿಡಿಯೋ ನೋಡಿದ ಮೇಲೆ ಪೊಲೀಸರೆಂದರೆ ಯಾರು ಎನ್ನುವ ಪ್ರಶ್ನೆ ನಿಮ್ಮ ತಲೆಯಲ್ಲಿ ಬಂದರೂ ಬರಬಹುದು.
ರಸ್ತೆ ಬದಿಯಲ್ಲಿ ಮೊಟ್ಟೆಯ ಟ್ರೇಗಳನ್ನು ಹೊತ್ತಿದ್ದ ಬೈಕ್​ ಒಂದು ನಿಂತಿದೆ. ಅದರ ಹತ್ತಿರವೇ ಇರುವ ಪೊಲೀಸಪ್ಪ, ನಿಧಾನವಾಗಿ ಒಂದೊಂದೇ ಮೊಟ್ಟೆಯನ್ನ ಎತ್ತಿಕೊಂಡು ತನ್ನ ಯುನಿಫಾರಂನ ಜೇಬಿನೊಳಗೆ ತುಂಬಿಕೊಳ್ಳುತ್ತಿದ್ದಾನೆ. ಯಾರಿಗೂ ಗೊತ್ತಾಗದಿರಲಿ ಎಂದು ಅಲ್ಲೇ ಕೈ ಮಾಡುತ್ತಾ ಇದ್ದಾನೆ. ವಾಹನ ಮಾಲೀಕ ಹತ್ತಿರ ಬರುತ್ತಿದ್ದಾನೆ ಎಂದು ತಿಳಿದ ತಕ್ಷಣ ಅಲ್ಲಿಂದ ಹೊರಟ ಆಸಾಮಿ ಯಾವುದೋ ಆಟೋವೊಂದಕ್ಕೆ ಕೈ ಮಾಡಿ ಅದರಲ್ಲಿ ಹತ್ತಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ.
ಮೊಟ್ಟೆ ಕದಿಯೋ ಪೊಲೀಸ್​!ಕಳ್ಳರನ್ನ ಹಿಡಿಯುವ ಪೊಲೀಸರೇ ಕಳ್ಳತನ ಮಾಡಿದರೆ? ಇಂತದ್ದೊಂದು ಘಟನೆ ಪಂಜಾಬ್​ನ ಫತೇಗಡ ಸಾಹಿಬ್​ ನಗರದ ಬಳಿ ನಡೆದಿದೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವುದು ಹೆಡ್​ ಕಾನ್​ಸ್ಟೇಬಲ್​ ಪ್ರೀತ್ಪಾಲ್​ ಸಿಂಗ್​. ಸದ್ಯ ಈ ಪೊಲೀಸ್​ ಪೇದೆಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ಪಂಜಾಬ್​ ಪೊಲೀಸ್ ಇಲಾಖೆ ತಿಳಿಸಿದೆ.pic.twitter.com/cYAHZKXIFQ
— Vijayavani (@VVani4U)May 16, 2021

ಅಂದ ಹಾಗೆ ಇದು ಪಂಜಾಬ್​ನ ಫತೇಗಡ ಸಾಹಿಬ್​ ನಗರದ ಬಳಿ ನಡೆದಿರುವ ಘಟನೆ. ಈ ರೀತಿ ಕಳ್ಳತನ ಮಾಡುತ್ತಿರುವುದು ಪೊಲೀಸ್​ ಹೆಡ್​ ಕಾನ್​ಸ್ಟೇಬಲ್​ ಪ್ರೀತ್ಪಾಲ್ ಸಿಂಗ್. ಈ ಸಂಪೂರ್ಣ ದೃಶ್ಯವನ್ನು ಯಾರೋ ಮೊಬೈಲ್​ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ವಿಡಿಯೋ ಭಾರೀ ವೈರಲ್​ ಆಗಿತ್ತು. ಅದನ್ನು ಗಮನಿಸಿರುವ ಪಂಜಾಬ್​ ಪೊಲೀಸರು ಪ್ರೀತ್ಪಾಲ್​ ಸಿಂಗ್​ನನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಈ ಬಗ್ಗೆ ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)
ಫೇಸ್​ಬುಕ್ ಸ್ನೇಹ: ಯುವಕನನ್ನು ನಂಬಿ ಹೋದ ಮಹಿಳೆಯ ಮೇಲೆ 25 ಮಂದಿಯಿಂದ ಗ್ಯಾಂಗ್​ರೇಪ್!

ನರ್ಸ್​ ಕೆನ್ನೆಗೆ ಹೊಡೆದ ವೈರಲ್​ ವಿಡಿಯೋದಲ್ಲಿದ್ದ ಡಾಕ್ಟರ್​ ಶವ ಪತ್ತೆ! ಕುಟುಂಬದವರು ಹಾಗೆ ಮಾಡಿದ್ದಾದರೂ ಏಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
