ಛತ್ತೀಸ್‌ಗಢ:ದೇಶದ ಭವಿಷ್ಯ ಪ್ರಜೆಗಳಾದ ಮಕ್ಕಳಿಗೆ ಉತ್ತಮ ಸಂಸ್ಕಾರ ಹೇಳಿಕೊಟ್ಟು, ತಿದ್ದಿ-ತೀಡಿ ಸನ್ಮಾರ್ಗದಲ್ಲಿ ಮುನ್ನಡೆಸುವ ಮಹತ್ತರ ಜವಾಬ್ದಾರಿ ತಮ್ಮ ಹೆಗಲ ಮೇಲಿದ್ದರೂ ಅದನ್ನೆಲ್ಲ ಮರೆತು ವಿದ್ಯಾದೇಗುಲದಲ್ಲಿ ಪ್ರಾಂಶುಪಾಲ-ಶಿಕ್ಷಕಿ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದಿದ್ದಾರೆ. ಇವರಿಬ್ಬರೂ ಶಾಲೆಯಲ್ಲೇ ಲೈಂಗಿಕ ಕ್ರಿಯೆ ನಡೆಸಿರುವ ವಿಡಿಯೋ ವೈರಲ್​ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮಕ್ಕಳ ಉಜ್ವಲ ಭವಿಷ್ಯ ರೂಪಿಸಬೇಕಿದ್ದವರೇ ಅಸಹ್ಯವಾಗಿ ನಡೆದುಕೊಂಡಿದ್ದು, ಪಾಲಕರು ಆತಂಕಗೊಂಡಿದ್ದಾರೆ.
ಇಂತಹ ಅಸಹ್ಯ ಘಟನೆ ಛತ್ತೀಸ್‌ಗಢದ ಕಂಕೇರ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಪ್ರಾಂಶುಪಾಲನಿಗೆ ಮದುವೆ ಆಗಿ ಪತ್ನಿ ಇದ್ದರೂ ಶಾಲೆಯಲ್ಲಿ ಶಿಕ್ಷಕಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಶಾಲಾ ಕೊಠಡಿಯಲ್ಲೇ ಶಿಕ್ಷಕಿ ಜೊತೆ ಕಾಮಚೇಷ್ಟೆ ನಡೆಸುತ್ತಿದ್ದ. ಇದನ್ನು ಗಮನಿಸಿದ್ದ ಗ್ರಾಮಸ್ಥರು ರೆಡ್​ಹ್ಯಾಂಡ್​ ಆಗಿ ಹಿಡಿಯಲು ಯತ್ನಿಸಿದ್ದರು. ಇತ್ತೀಚಿಗೆ ಶಾಲಾ ಕೊಠಡಿಯಲ್ಲೇ ಶಿಕ್ಷಕಿ ಜೊತೆ ಪಾಂಶುಪಾಲ ಲೈಂಗಿಕ ಕ್ರಿಯೆ ನಡೆಸುತ್ತಿದ್ದರು. ಅವರಿಗೆ ಗೊತ್ತಾಗದಂತೆ ಗ್ರಾಮಸ್ಥರು ವಿಡಿಯೋ ಮಾಡಿದ್ದಾರೆ. ಕರೊನಾ ಸಂಕಷ್ಟ ಕಾಲದಲ್ಲಿ ಶಾಲೆಗಳು ಬಂದ್​ ಆಗಿದ್ದರೂ ಶಾಲೆಗೆ ಬರುತ್ತಿದ್ದ ಪ್ರಾಂಶುಪಾಲ ಮತ್ತು ಮಹಿಳಾ ಸಿಬ್ಬಂದಿ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು ಎಂದು ಗ್ರಾಮಸ್ಥರು ದೂರಿದ್ದಾರೆ. ಶಾಲೆ ಆರಂಭವಾದಗಲೂ ಇವರಿಬ್ಬರ ಅಕ್ರಮ ಸಂಬಂಧ ಮುಂದುವರಿದಿತ್ತು.
ಶಾಲೆಯಲ್ಲಿ ಪ್ರಾಂಶುಪಾಲ ಅಸಹ್ಯವಾಗಿ ನಡೆದುಕೊಳ್ಳುತ್ತಿದ್ದಾನೆ. ಶಿಕ್ಷಕಿ-ಪ್ರಾಂಶುಪಾಲ ಇಬ್ಬರೂ ಶಾಲೆಯನ್ನು ಖಾಸಗಿ ಸ್ಥಳ ಎಂಬಂತೆ ಬಳಸಿಕೊಳ್ಳುತ್ತಿದ್ದಾರೆ. ವಿದ್ಯಾದೇಗುಲದಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಆಕ್ರೋಶಗೊಂಡಿದ್ದ ಗ್ರಾಮಸ್ಥರು ಈ ಹಿಂದೆಯೇ ಪ್ರಾಂಶುಪಾಲನಿಗೆ ಎಚ್ಚರಿಕೆ ನೀಡಿದ್ದರು. ಆದರೂ ಪ್ರಾಂಶುಪಾಲ ತನ್ನ ಕಾಮದಾಟ ಮುಂದುವರಿಸಿದ್ದ. ಈ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದ ವ್ಯಕ್ತಿಗೆ ವೈರಲ್​ ಮಾಡದಂತೆ ಹಣದ ಆಮಿಷವನ್ನೂ ಪ್ರಾಂಶುಪಾಲ ಒಡ್ಡಿದ್ದ. ಗ್ರಾಮಸ್ಥರು ಪ್ರಾಂಶುಪಾಲರ ವಿರುದ್ಧ ಜಿಲ್ಲಾಧಿಕಾರಿ ಚಂದನ್‌ಕುಮಾರ್‌ಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಲೆ ಆಡಳಿತ ಮಂಡಳಿಯು ವಿಚಾರಣೆ ನಡೆಸಿತ್ತು. ಮೇಲ್ನೋಟಕ್ಕೆ ಆರೋಪ ಸಾಬೀತಾಗಿದ್ದು, ಪ್ರಾಂಶುಪಾಲನನ್ನು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಅಮಾನತು ಮಾಡಲಾಗಿದೆ.
ಪಕ್ಕದ ರೂಮಲ್ಲಿ ಗಂಡ ಮಲಗಿದ್ರೂ ನಡೆದೇ ಹೋಯ್ತು ಘೋರ ದುರಂತ! ಬೆಳಗ್ಗೆ ಪತ್ನಿಯ ಕೋಣೆಗೆ ಹೋದವನಿಗೆ ಕಾದಿತ್ತು ಶಾಕ್​

ತುಮಕೂರು ಎಸ್​ಪಿ ಸರ್​, ಪ್ಲೀಸ್​ ನೀವೆ ನಮ್ಗೆ ದಾರಿ ತೋರ್ಸಿ… ಮನೆ ಮಾಲೀಕನ ಸಾಲಕ್ಕೆ ಕಂಗಾಲಾದ 35 ಕುಟುಂಬ

ಬೆಡ್​ ರೂಮಲ್ಲಿ ಎಲೆಕ್ಟ್ರಿಕ್​​ ಸ್ಕೂಟರ್​ನ ಬ್ಯಾಟರಿ ಸ್ಫೋಟ: ಪತಿ ಸಾವು, ಪತ್ನಿ ಸ್ಥಿತಿ ಚಿಂತಾಜನಕ… ಸ್ಕೂಟರ್​ ಖರೀದಿಸಿದ ಮರುದಿನವೇ ದುರಂತ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 5 =
Remember me
