ಶಿಮ್ಲಾ:ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು, ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಆಡಳಿತಾರೂಡ ಬಿಜೆಪಿ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು ಇನ್ನಿಲ್ಲದ ರಣತಂತ್ರ ರೂಪಿಸುತ್ತಿದ್ದು, ಇದೀಗ ಶಿಮ್ಲಾ ನಗರ ಕ್ಷೇತ್ರಕ್ಕೆ ಚಹಾ ಮಾರುವ ವ್ಯಕ್ತಿಗೆ ಟಿಕೆಟ್​ ನೀಡಿದೆ!
ಹಿಮಾಚಲ ಪ್ರದೇಶ ರಾಜ್ಯದ 68 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನ.12ರಂದು ಮತದಾನ ನಡೆಯಲಿದೆ. ಡಿ.8ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ದಿನಾಂಕ ಘೋಷಣೆ ಆಗುತ್ತಿದ್ದಂತೆ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿಯು ಚಹಾ ಮಾರುವವನಿಗೆ ಟಿಕೆಟ್​ ನೀಡಿ ಗಮನ ಸೆಳೆದಿದೆ.
ಶಿಮ್ಲಾ ನಗರ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಹಾಲಿ ಸಚಿವ ಸುರೇಶ್​ ಭಾರದ್ವಾಜ್​ ಬದಲಿಗೆ ಚಹಾ ಅಂಗಡಿ ನಡೆಸುತ್ತಿರುವ ಸಂಜಯ್​ ಸೂದ್​ಗೆ ಟಿಕೆಟ್​ ನೀಡಿದೆ. ಸುರೇಶ್​ ಭಾರದ್ವಾಜ್​ಗೆ ಕಾಸುಂಪ್ತಿ ಕ್ಷೇತ್ರದಿಂದ ಟಿಕೆಟ್​ ನೀಡಲಾಗಿದೆ.
‘ಶಿಮ್ಲಾ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ನನ್ನನ್ನು ಆಯ್ಕೆ ಮಾಡಿರುವುದು ನಿಜಕ್ಕೂ ಖುಷಿಯ ವಿಚಾರ. ನನಗೆ ಟಿಕೆಟ್​ ಕೊಟ್ಟಿರುವುದಕ್ಕೆ ಬಹಳ ಋಣಿಯಾಗಿದ್ದೇನೆ. ಐದು ವರ್ಷ ವಿದ್ಯಾರ್ಥಿ ಪರಿಷತ್​ನಲ್ಲಿ ಕೆಲಸ ಮಾಡಿದ್ದ ನನ್ನಂತಹ ಸಣ್ಣ ಕಾರ್ಯಕರ್ತನನ್ನು ಗುರುತಿಸಿರುವುದಕ್ಕೆ ಹೆಮ್ಮೆಯಾಗುತ್ತಿದೆ’ ಎಂದು ಸಂಜಯ್​ ಸೂದ್​ ಹೇಳಿದ್ದಾರೆ.
ಮದುವೆ ಆಮಿಷವೊಡ್ಡಿ ಯುವತಿಗೆ ಲೈಂಗಿಕ ದೌರ್ಜನ್ಯ: ಬೆಂಗಳೂರಲ್ಲಿ ಸಬ್​ಇನ್​ಸ್ಪೆಕ್ಟರ್​ ಬಂಧನ

ಡೆಂಘೆ ರೋಗಿಗೆ ಪ್ಲಾಸ್ಮಾ ಬದಲು ಡ್ರಿಪ್​ನಲ್ಲಿ ಮೂಸಂಬಿ ಜ್ಯೂಸ್ ಕೊಟ್ಟ ಸಿಬ್ಬಂದಿ! ರೋಗಿ ಸಾವು, ಆಸ್ಪತ್ರೆ ಸೀಜ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − eight =
Remember me
