ಮುಂಬೈ:ಭಾರತೀಯ ಷೇರು ಮಾರುಕಟ್ಟೆ ಬುಧವಾರ ಹೊಸ ದಾಖಲೆ ಬರೆಯಿತು. ಬೆಂಚ್‌ಮಾರ್ಕ್​ ಸೂಚ್ಯಂಕಗಳಾದ ಬಿಎಸ್​ಇ ಸೂಚ್ಯಂಕ ಇದೇ ಮೊದಲ ಬಾರಿಗೆ 75,000 ಅಂಕಗಳ ಗಡಿ ದಾಟಿದರೆ, ಎನ್​ಎಸ್​ಇ ನಿಫ್ಟಿ ಸೂಚ್ಯಂಕ ಕೂಡ ಜೀವಮಾನದ ಗರಿಷ್ಠ ಮಟ್ಟವಾದ 22,753.80 ಅಂಕಗಳನ್ನು ತಲುಪಿ ಐತಿಹಾಸಿಕ ದಾಖಲೆ ಬರೆದವು.
30-ಷೇರುಗಳ ಬಿಎಸ್‌ಇ ಸೂಚ್ಯಂಕ 354.45 ಅಂಕಗಳು ಅಥವಾ 0.47 ರಷ್ಟು ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 75,038.15 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನಲ್ಲಿ ಈ ಸೂಚ್ಯಂಕವು 421.44 ಅಂಕಗಳು ಅಥವಾ ಶೇಕಡಾ 0.56 ರಷ್ಟು ಹೆಚ್ಚಿ 75,105.14 ಕ್ಕೆ ತಲುಪಿತು.
ಎನ್‌ಎಸ್‌ಇಯ ಬ್ರೋಡರ್ ನಿಫ್ಟಿ 111.05 ಅಂಕಗಳು ಅಥವಾ 0.49 ಶೇಕಡಾ ಏರಿಕೆಯಾಗಿ 22,753.80 ರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತು. ದಿನದ ವಹಿವಾಟಿನಲ್ಲಿ ಇದು 132.95 ಅಂಕಗಳು ಅಥವಾ ಶೇಕಡಾ 0.58 ರಷ್ಟು ಜಿಗಿದು 22,775.70 ರ ಜೀವಿತಾವಧಿಯ ಇಂಟ್ರಾ-ಡೇ ಗರಿಷ್ಠವನ್ನು ತಲುಪಿತ್ತು.
ಬಿಎಸ್​ಇಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ವಹಿವಾಟು ದಿನಕ್ಕೆ ಹೋಲಿಸಿದರೆ ಅಂದಾಜು ರೂ. 400 ಲಕ್ಷ ಕೋಟಿಯಿಂದ ರೂ. 402.2 ಲಕ್ಷ ಕೋಟಿಗೆ ಏರಿತು, ಹೂಡಿಕೆದಾರರನ್ನು ಒಂದೇ ಅವಧಿಯಲ್ಲಿ ರೂ. 2 ಲಕ್ಷ ಕೋಟಿಗಳಷ್ಟು ಶ್ರೀಮಂತರನ್ನಾಗಿ ಮಾಡಿತು.
ಭಾರತೀಯ ಮಾರುಕಟ್ಟೆಗಳು ತಮ್ಮ ಏಷ್ಯನ್ ಮತ್ತು ಐರೋಪ್ಯ ಮಾರುಕಟ್ಟೆಗಳಿಗಿಂತ ಸ್ವಲ್ಪ ಹಿಂದುಳಿದಿದ್ದರೂ, ವಿಶಾಲ ಮಾರುಕಟ್ಟೆಯಲ್ಲಿನ ದೃಢವಾದ ಪ್ರದರ್ಶನದಿಂದ ಉತ್ತೇಜಿತವಾಗಿ ತಮ್ಮ ಏರುಗತಿಯನ್ನು ಉಳಿಸಿಕೊಂಡಿವೆ ಎಂದುಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಪ್ರಮುಖ ಷೇರುಗಳಾದ ಐಟಿಸಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಭಾರ್ತಿ ಏರ್‌ಟೆಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಏಷ್ಯನ್ ಪೇಂಟ್ಸ್, ಟೆಕ್ ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ನೆಸ್ಲೆ ಪ್ರಮುಖ ಲಾಭ ಗಳಿಸಿದವು. ಮಾರುತಿ, ಎಚ್‌ಡಿಎಫ್‌ಸಿ ಬ್ಯಾಂಕ್, ಲಾರ್ಸೆನ್ ಮತ್ತು ಟೂಬ್ರೊ ಮತ್ತು ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳು ನಷ್ಟ ಅನುಭವಿಸಿದವು.
ಏಷ್ಯಾದ ಮಾರುಕಟ್ಟೆಗಳ ಪೈಕಿ, ಟೋಕಿಯೊ ಮತ್ತು ಶಾಂಘೈ ನಷ್ಟ ಕಂಡರೆ, ಹಾಂಗ್ ಕಾಂಗ್ ಲಾಭ ಗಳಿಸಿತು. ದಕ್ಷಿಣ ಕೊರಿಯಾದಲ್ಲಿನ ಮಾರುಕಟ್ಟೆಗಳು ಚುನಾವಣೆಗಾಗಿ ಮುಚ್ಚಲ್ಪಟ್ಟಿದ್ದವು. ಐರೋಪ್ಯ ಮಾರುಕಟ್ಟೆಗಳು ಲಾಭದಲ್ಲಿ ವಹಿವಾಟು ನಡೆಸಿದವು. ಅಮೆರಿಕದ ವಾಲ್ ಸ್ಟ್ರೀಟ್ ಮಂಗಳವಾರ ಲಾಭ ಕಂಡಿತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ 593.20 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಷೇರು ವಿನಿಮಯ ಕೇಂದ್ರ ತಿಳಿಸಿದೆ.ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ ಮಂಗಳವಾರ 58.80 ಅಂಕಗಳು ಅಥವಾ ಶೇಕಡಾ 0.08 ರಷ್ಟು ಕುಸಿತವಾಗಿ 74,683.70 ಕ್ಕೆ ತಲುಪಿತ್ತು. ಎನ್ಎಸ್ಇ ನಿಫ್ಟಿ 23.55 ಅಂಕಗಳು ಅಥವಾ 0.10 ರಷ್ಟು ಕುಸಿದು 22,642.75 ಕ್ಕೆ ತಲುಪಿತ್ತು.

ಎಲಾನ್​ ಮಸ್ಕ್​ ಕಂಪನಿ ಟೆಸ್ಲಾ ಜತೆ ನಡೆದಿದೆ ಮಾತುಕತೆ: ಎಲೆಕ್ಟ್ರಿಕ್​ ವಾಹನ ತಯಾರಿಸಲು ಸಜ್ಜಾಗುತ್ತಿದೆ ರಿಲಯನ್ಸ್​
1 ಲಕ್ಷ ಅಂಕ ತಲುಪಬಹುದು ಷೇರು ಸೂಚ್ಯಂಕ: ಸ್ಟಾಕ್​ ಮಾರ್ಕೆಟ್​ ಉತ್ಕರ್ಷದಿಂದ ಜನಸಾಮಾನ್ಯರ ಮೇಲೆ ಪರಿಣಾಮವೇನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
