ಆಗ್ರಾ:ಭಗ್ನಗೊಂಡ ಶ್ರೀಕೃಷ್ಣನ ವಿಗ್ರಹಕ್ಕೆ ಆಸ್ಪತ್ರೆ ಸಿಬ್ಬಂದಿ ಬ್ಯಾಂಡೇಜ್​ ಮಾಡಿ, ಚಿಕಿತ್ಸೆ ನೀಡಿದ್ದು, ಈ ವಿಚಿತ್ರ ಘಟನೆಯ ವಿಡಿಯೋ ಸಖತ್​ ವೈರಲ್​ ಆಗಿದೆ.
ಬೆಳಗಿನ ಪೂಜೆ ವೇಳೆ ಶ್ರೀಕೃಷ್ಣನ ಮೂರ್ತಿಗೆ ಅರ್ಚಕ ಲೇಖ್​ ಸಿಂಗ್​ ಅವರು ಅಭಿಷೇಕ ಮಾಡುತ್ತಿದ್ದರು. ಈ ವೇಳೆ ಮೂರ್ತಿ ನೆಲಕ್ಕೆ ಬಿದ್ದು, ಮೂರ್ತಿ ಕೈ ಮುರಿದು ಭಗ್ನಗೊಂಡಿತ್ತು. ಶ್ರೀಕೃಷ್ಣನ ಮೂರ್ತಿಯ ಕೈ ಮುರಿದಿದ್ದಕ್ಕೆ ತೀವ್ರ ಭಾವುಕರಾದ ಅರ್ಚಕ, ಮೂರ್ತಿ ಸಮೇತ ಜಿಲ್ಲಾಸ್ಪತ್ರೆಗೆ ಧಾವಿಸಿ ಚಿಕಿತ್ಸೆ ನೀಡುವಂತೆ ಸಿಬ್ಬಂದಿಗೆ ಮನವಿ ಮಾಡಿದರು. ಆದರೆ ಅವರ ಮನವಿಯನ್ನು ಯಾರೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಇದರಿಂದ ಬೇಸರಗೊಂಡ ಅರ್ಚಕ ಆಸ್ಪತ್ರೆಯಲ್ಲೇ ಕಣ್ಣೀರಿಟ್ಟರು.
ಇದನ್ನು ನೋಡಿದ ಆಸ್ಪತ್ರೆ ಸಿಬ್ಬಂದಿ ಅರ್ಚಕರ ಸಮಾಧಾನ ಪಡಿಸಲು ಕೃಷ್ಣನ ವಿಗ್ರಹಕ್ಕೆ ಚಿಕಿತ್ಸೆ ನೀಡಿದರು. ಮುರಿದ ಕೈಗೆ ಬ್ಯಾಂಡೇಜ್​ ಹಾಕಿದರು. ಬಳಿಕ ಅರ್ಚಕರು ಅಲ್ಲಿಂದ ತೆರಳಿದರು. ಇಂತಹ ವಿಚಿತ್ರ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಶುಕ್ರವಾರ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
https://www.vijayavani.net/a-kodimath-shree-about-rain/
140 ರೂಪಾಯಿ ದಾಟಿತು 1 ಕೆಜಿ ಟೊಮ್ಯಾಟೊ ಬೆಲೆ!

ನನ್ನ ಗಂಡನನ್ನು ಬೆತ್ತಲೆಗೊಳಿಸಿ ನಾಗಿಣಿ ಡಾನ್ಸ್​ ಮಾಡಿಸಿದ್ರು… ಆ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪತ್ನಿ

ಜಮೀನು ಖರೀದಿಸಲು ತಂದಿದ್ದ 9.50 ಲಕ್ಷ‌ ರೂ.‌ ಕಳ್ಳತನ: ಹಣ ಕಳೆದುಕೊಂಡ ರೈತನ ಗೋಳಾಟ ಹೇಳತೀರದು

Sign in to your account
Please enter an answer in digits:eight + seventeen =
Remember me
