ಮುಂಬೈ:ನೌಕಾಪಡೆ ಸ್ಥಾಪಿಸಿದ್ದ ಶಿವಾಜಿ ಮಹಾರಾಜರ 35 ಅಡಿ ಎತ್ತರದ ಪ್ರತಿಮೆ ಸೋಮವಾರ ನೆಲಸಮವಾಗಿದ್ದು, ಅದೇ ಸ್ಥಳದಲ್ಲಿ ಅದಕ್ಕಿಂತ ದೊಡ್ಡ ಪ್ರತಿಮೆಯನ್ನು (ನೂರು ಅಡಿ) ಮಹಾರಾಷ್ಟ್ರ ಸರ್ಕಾರ ಪ್ರತಿಷ್ಠಾಪಿಸಲಿದೆ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಿಂಧುದುರ್ಗದ ರಾಜಕೋಟ್ ಕೋಟೆ ಬಳಿ ಕಳೆದ ವರ್ಷ ನೌಕಾ ದಿನದಂದು (ಡಿ.4) ಶಿವಾಜಿ ಪ್ರತಿಮೆ ಅನಾವರಣಗೊಳಿಸಿದ್ದರು. ‘ಇದರ ಉಸ್ತುವಾರಿಯನ್ನು ನೌಕಾಪಡೆ ನೋಡಿಕೊಳ್ಳುತ್ತಿತ್ತು. ಬಹುಶಃ ಪ್ರತಿಮೆ ನಿರ್ವಿುಸುವವರು ಕಳಪೆ ಕಬ್ಬಿಣ ಬಳಸಿರಬಹುದು. ಈ ಭಾಗದಲ್ಲಿ ಗಾಳಿಯ ವೇಗ ಎಷ್ಟಿರುತ್ತದೆ ಎಂಬುದರ ಅಂದಾಜು ಅವರಿಗೆ ಇಲ್ಲದಿರ ಬಹುದು. ಸಮುದ್ರದ ಗಾಳಿಯಿಂದಾಗಿ ಕಬ್ಬಿಣಕ್ಕೆ ತುಕ್ಕು ಹಿಡಿದಿರಬಹುದು. ಪ್ರತಿಮೆ ನಿರ್ವಿುಸಿದವರು ಇದೆಲ್ಲವನ್ನೂ ಗಣನೆಗೆ ತೆಗೆದು ಕೊಂಡಿದ್ದರೋ ಇಲ್ಲವೋ ಗೊತ್ತಿಲ್ಲ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ವಿರೋಧ ಪಕ್ಷಗಳು ಇದನ್ನು ಒಂದು ರಾಜಕೀಯ ವಿಷಯವನ್ನಾಗಿ ಮಾಡಬಾರದು’ ಎಂದು ಫಡ್ನವಿಸ್ ಸುದ್ದಿಗಾರರಿಗೆ ಹೇಳಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಗಂಟೆಗೆ 45 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದ್ದು ಘಟನೆಗೆ ಕಾರಣ ಎಂದು ಹೇಳಿದ್ದಾರೆ. ಲೋಕೋಪಯೋಗಿ ಸಚಿವ ರವೀಂದ್ರ ಚವಾಣ್ ‘ಪ್ರತಿಮೆಯ ಕಬ್ಬಿಣ ತುಕ್ಕು ಹಿಡಿದಿತ್ತು. ಇದನ್ನು ನೌಕಾಪಡೆ ಗಮನಕ್ಕೆ ತರಲಾಗಿತ್ತು’ ಎಂದು ಹೇಳಿದ್ದಾರೆ. ಪ್ರತಿಮೆಯ ಗುತ್ತಿಗೆದಾರ ಜಯದೀಪ್ ಆಪ್ಟೆ ಮತ್ತು ಕನ್ಸಲ್ಟಂಟ್ ಚೇತನ್ ಪಾಟೀಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವಸರವಾಗಿ ಪ್ರತಿಮೆ ಪ್ರತಿಷ್ಠಾಪಿಸಿದ್ದೇ ಈ ಘಟನೆಗೆ ಕಾರಣ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ತನಿಖೆಯೊಂದೇ ಸಾಲದು!:ಸಿಂಧುದುರ್ಗದಲ್ಲಿ 35 ಅಡಿಯ ಶಿವಾಜಿ ಪ್ರತಿಮೆ ನೆಲಸಮವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅದೇ ಸ್ಥಳದಲ್ಲಿ ನೂರಡಿ ಎತ್ತರದ ಶಿವಾಜಿ ಪ್ರತಿಮೆ ಅನಾವರಣ ಮಾಡಲಿದೆ ಎಂದು ಸಚಿವ ದೀಪಕ್ ಕೇಸರ್​ಕರ್ ತಿಳಿಸಿದ್ದಾರೆ. ‘ತನಿಖೆಯೊಂದರಿಂದಲೇ ಜನರ ಭಾವನೆಗಳನ್ನು ಗೌರವಿಸಿದಂತೆ ಆಗುವುದಿಲ್ಲ’ ಎಂದು ಅವರು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
