ಸೂರತ್​:ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುತ್ತಾರೆ. ಆದರೆ ಎಷ್ಟೋ ಬಾರಿ ದುಷ್ಟ ಕೆಲಸ ಮಾಡುವ ಗಂಡಿನ ಹಿಂದೆಯೂ ಹೆಣ್ಣಿನ ಕೈವಾಡವೇ ಇರುತ್ತದೆ ಎನ್ನುವುದನ್ನು ಮರೆಯಬಾರದು. ಜೀವನ ಪೂರ್ತಿ ಜತೆ ನಡೆಯುವ ಪ್ರಮಾಣ ಮಾಡಿ ಮದುವೆಯಾದ ಪತ್ನಿಯು ಕೊಡುತ್ತಿದ್ದ ಟಾಂಟ್​ಗಳಿಂದಲೇ ಬೇಸತ್ತ ಪತಿ, ಕಳ್ಳನಾಗಿ ಬದಲಾದ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ.
ಇದನ್ನೂ ಓದಿ:‘ಯಾರ ಮರ್ಜಿಯಲ್ಲಿ ಆ ಸ್ಥಾನದಲ್ಲಿ ಕುಳಿತಿದ್ದಾರೆ ಎಂಬುದನ್ನ ಮರೆತಿದ್ದಾರೆ’ ಸಿಎಂ ವಿರುದ್ಧ ವಿಶ್ವನಾಥ್​ ಅಸಮಾಧಾನ
ಸೂರತ್​ನ ಬಲ್ವಂತ್​ ಚೌಹಾಣ್​ (37) ಡೈಮಂಡ್​ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ತಕ್ಕ ಮಟ್ಟಿಗೆ ಸಂಬಳ ಸಿಗುತ್ತಿದ್ದ ಆತ ಸಂಸಾರವನ್ನು ಹೇಗೋ ನಿಭಾಯಿಸಿಕೊಂಡು ಹೋಗುತ್ತಿದ್ದ. ಆದರೆ ಆತನ ಪತ್ನಿ ಸಂಬಳದ ವಿಚಾರದಲ್ಲಿ ಯಾವಾಗಲೂ ಕಿರಿಕಿರಿ ಮಾಡುತ್ತಿದ್ದಳು. ನಿನ್ನ ಅಣ್ಣನಿಗೆ ನೋಡು, ನಿನಗಿಂತ ಜಾಸ್ತಿ ಸಂಬಳ ಬರುತ್ತದೆ ಎಂದು ಟಾಂಟ್​ ಕೊಡುತ್ತಿದ್ದಳು. ಇದರಿಂದ ಬೇಸತ್ತ ಬಲ್ವಂತ್​ ಶ್ರೀಮಂತನಾಗಲು ಶಾರ್ಟ್​ಕಟ್​ ದಾರಿಯೊಂದನ್ನು ಹುಡುಕಿದ್ದಾನೆ.
ಇದನ್ನೂ ಓದಿ:ಬಿಜೆಪಿ ಶಾಸಕ ಸಿದ್ದು ಸವದಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಕೊಟ್ಟ ಕಾಂಗ್ರೆಸ್​ ಮಹಿಳಾ ಘಟಕ
ಪ್ರತಿದಿನ ಫ್ಯಾಕ್ಟರಿಯಿಂದ ಮಧ್ಯಾಹ್ನದ ಊಟಕ್ಕೆ ಬರುವಾಗ ಅಲ್ಲಿನ ಸಿಬ್ಬಂದಿಯ ಬೈಕ್​ನ್ನು ಮಾಸ್ಟರ್​ ಕೀ ಬಳಸಿ ಕದ್ದು ತೆಗೆದುಕೊಂಡು ಬರಲಾರಂಭಿಸಿದ್ದಾನೆ. ಕದ್ದ ಬೈಕನ್ನು ಮಾರಾಟ ಮಾಡಿ ಆ ಹಣದಿಂದ ಶ್ರೀಮಂತನಾಗಲು ಪ್ರಯತ್ನಿಸಿದ್ದಾನೆ. ಈವರೆಗೆ ಸುಮಾರು 30 ಬೈಕ್​ಗಳನ್ನು ಬಲ್ವಂತ್​ ಕದ್ದಿದ್ದಾನೆ. ಕಪೋದ್ರಾದಿಂದ 8, ವರಾಚಾದಿಂದ 11, ಅಮ್ರೋಲಿಯಿಂದ 2, ಕತಾರ್ಗಂನಿಂದ 7 ಮತ್ತು ಮಹೀಧರಪುರ ಸಚಿನ್​ನಿಂದ ತಲಾ ಒಂದು ಬೈಕುಗಳನ್ನು ಕದ್ದಿದ್ದಾನೆ. ಇದರಲ್ಲಿ ಹಲವಷ್ಟನ್ನು ಮಾರಾಟ ಮಾಡಿದ್ದು, ಇನ್ನು ಕೆಲವನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದಾನೆ. ಸದ್ಯ ಈತನ ಕಳ್ಳತನವನ್ನು ಪತ್ತೆ ಹಚ್ಚಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)
ಮಗನಿಗೆ ನೋವಾಗಬಾರದೆಂದು ಕೊಂದೇ ಬಿಟ್ಟ! ಮಗನ ಶವದ ಜತೆಯೇ ರಾತ್ರಿ ಮಲಗಿದ

ಸಾಲ ವಾಪಾಸು ಕೇಳಲು ಬಂದವಳನ್ನೇ ರೇಪ್​ ಮಾಡಿಬಿಟ್ಟ; ಸಾಲ ಕೇಳಿದರೆ ಹುಷಾರ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − seven =
Remember me
