ರಾಂಚಿ:ಅಕ್ರಮ ಗಣಿ ಗುತ್ತಿಗೆ ಪ್ರಕರಣ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್​ರ ಕೊರಳಿಗೆ ಸುತ್ತಿಕೊಂಡಿದ್ದು, ವಿಧಾನಸಭೆಯಿಂದ ಅನರ್ಹಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಜಾರ್ಖಂಡ್​ ಮುಖ್ಯಮಂತ್ರಿಯನ್ನು ಶಾಸಕ ಸ್ಥಾನದಿಂದ ವಜಾ ಮಾಡುವಂತೆ ಚುನಾವಣಾ ಆಯೋಗ ರಾಜ್ಯಪಾಲರಿಗೆ ಸೂಚಿಸಿದ್ದು, ಇನ್ನು ಕೆಲವೇ ಕ್ಷಣದಲ್ಲಿ ರಾಜ್ಯಪಾಲ ರಮೇಶ್ ಬೈಸ್ ಮಹತ್ವದ ಆದೇಶ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಮ್ಮದೇ ಮಾಲೀಕತ್ವದ ಕಂಪನಿಗೆ ಗಣಿಗಾರಿಕೆ ಪರವಾನಗಿ ಕೊಟ್ಟುಕೊಳ್ಳುವ ಮೂಲಕ ಸಿಎಂ ಪ್ರಜಾಪ್ರತಿನಿಧಿ ಕಾಯ್ದೆಯ ಹಲವು ಅಂಶಗಳನ್ನು ಉಲ್ಲಂಘಿಸಿದ್ದಾರೆ. ಕಲ್ಲುಗಣಿಗಾರಿಕೆ ಲೈಸೆನ್ಸ್​ ಪಡೆಯುವ ಮೂಲಕ ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕ ರಾಜ್ಯಪಾಲರಿಗೆ ದೂರು ಸಲ್ಲಿಸಿತ್ತು. ಹಾಗಾಗಿ ಈ ಕುರಿತು ರಾಜ್ಯಪಾರಲು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಅಭಿಪ್ರಾಯ ಕೇಳಿದ್ದರು. ನಿಯಮ ಉಲ್ಲಂಘನೆ ಸಾಬೀತಾದ ಹಿನ್ನೆಲೆ ಚುನಾವಣಾ ಆಯೋಗವು ಹೇಮಂತ್ ಸೊರೆನ್​ರ ಶಾಸಕ ಸ್ಥಾನ ವಜಾಗೆ ಶಿಫಾರಸು ಮಾಡಿದೆ. ಮೂರು ದಿನದಿಂದ ದೆಹಲಿಯಲ್ಲಿರುವ ರಾಜ್ಯಪಾಲು ಕೆಲವೇ ಕ್ಷಣದಲ್ಲಿ ಜಾರ್ಖಂಡ್​ನ ರಾಜಧಾನಿ ಆಗಮಿಸಲಿದ್ದು, ಮಹತ್ವದ ಆದೇಶ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಮನೆಯಲ್ಲಿ ಎರಡು ಎಕೆ-47 ರೈಫಲ್ಸ್​ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್​ ಮುಖ್ಯಮಂತ್ರಿ ಹೇಮಂತ್​ ಸೊರೆನ್ ಅವರ ನಿಕಟವರ್ತಿ ಪ್ರೇಮ್​ ಪ್ರಕಾಶ್​ ಎಂಬುವರನ್ನು ಜಾರಿ ನಿರ್ದೇಶನಾಲಯ (ಇಡಿ) ಇಂದು ಬೆಳಗ್ಗೆ (ಗುರುವಾರ) ಬಂಧಿಸಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧ ತನಿಖೆ ನಡೆಸುತ್ತಿರು ಇಡಿ ಅಧಿಕಾರಿಗಳು, ನಿನ್ನೆ (ಆ.24) ಜಾರ್ಖಂಡ್​ನ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಪ್ರೇಮ್​ ಪ್ರಕಾಶ್​ಗೆ ಸೇರಿದ ಮನೆಯ ಬೀರುವಿನಲ್ಲಿ ಎರಡು ಎಕೆ-47 ರೈಫಲ್ಸ್​ ಪತ್ತೆಯಾಗಿದ್ದವು.
ಮನೆಯಲ್ಲಿ ಎಕೆ-47, 60 ಜೀವಂತ ಬುಲೆಟ್​ಗಳು ಪತ್ತೆ: ಇಡಿಯಿಂದ ಜಾರ್ಖಂಡ್​ ಸಿಎಂ ಆಪ್ತನ ಬಂಧನ

ಅತ್ಯಾಚಾರ ಆರೋಪಿಯನ್ನೇ ಮದ್ವೆಯಾದ ಯುವತಿ! ಪೋಕ್ಸೋ ಪ್ರಕರಣ ರದ್ದುಪಡಿಸಿದ ಹೈಕೋರ್ಟ್​

ಪರಸ್ತ್ರೀಗಾಗಿ ಕೋಮುಗಲಭೆ ನಾಟಕ! ಶಿವಮೊಗ್ಗ ಪೊಲೀಸರನ್ನೇ ಬೆಚ್ಚಿಬೀಳಿಸಿದ್ದ ಪತ್ರ, ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:eight + 9 =
Remember me
