ಭೂಪಾಲ್​:ಮುಖ್ಯಮಂತ್ರಿ ಭೇಟಿ ವೇಳೆ ಕಳಪೆ ಮಟ್ಟದ ಟೀ ನೀಡಿದ್ದರಿಂದ ಕಿರಿಯ ಅಧಿಕಾರಿಯೊಬ್ಬರು ಈಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಛಾತರ್​ಪುರ್​ ಜಿಲ್ಲೆಯ ಖುಜುರಾಹೋ ಭೇಟಿ ಸಂದರ್ಭದಲ್ಲಿ ವಿಮಾನನಿಲ್ದಾಣಕ್ಕೆ ಆಗಮಿಸಿದ್ದ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​​ ಅವರಿಗೆ ಟೀ ನೀಡಲಾಗಿತ್ತು. ಈಗ ಇದೇ ಟೀ ಈ ಅಧಿಕಾರಿಗೆ ತಲೆನೋವಾಗಿ ಪರಿಣಮಿಸಿದೆ.
ಮುಖ್ಯಮಂತ್ರಿಗಳಿಗೆ ನೀಡಲಾಗಿದ್ದ ಟೀ ಅತ್ಯಂತ ಕಳಪೆ ಗುಣಮಟ್ಟದ್ದಾಗಿತ್ತೆಂದು ವರದಿ ನೀಡಲಾಗಿದ್ದು, ಈ ಬೆನ್ನಲ್ಲೇ ಈ ಅಧಿಕಾರಿಗೆ ಶೋಕಾಸ್​ ನೋಟಿಸ್​ ಜಾರಿ ಮಾಡಲಾಗಿದೆ.
ಕಿರಿಯ ಅಧಿಕಾರಿ ರಾಕೇಶ್​​ ಕನೌಹ್ಹಾ ಎಂಬುವರು ಮುಖ್ಯಮಂತ್ರಿ ಟೀ ತಾವೇ ನೀಡಿದ್ದರು. ಅಧಿಕಾರಿಯೇ ಟೀ ನೀಡುವ ಮೂಲಕ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಲ್ಲದೇ, ಕಳಪೆ ಟೀ ನೀಡಿರುವುದರಿಂದ ನೋಟಿಸ್​ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಿಪಿ ದ್ವಿವೇದಿ ಹೇಳಿದ್ದಾರೆ.
ಕರ್ತವ್ಯದಲ್ಲಿರುವ ವೇಳೆಯೇ ಟೀ ತಂದುಕೊಟ್ಟು ಶಿಷ್ಟಾಚಾರ ಉಲ್ಲಂಘಿಸಿದ್ದಲ್ಲದೇ, ಕಳಪೆ ಟೀ ನೀಡಿದ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ. ಮೂರು ದಿನದೊಳಗೆ ಉತ್ತರಿಸಬೇಕು ಇಲ್ಲದಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.(ಏಜೆನ್ಸೀಸ್​)
ಪ್ರತಿಯೊಬ್ಬ ವ್ಯಕ್ತಿಯೂ ವಿಮಾನದಲ್ಲಿ ಸಂಚರಿಸಬೇಕು, ದಿಯೋಘರ್​ ವಿಮಾನ ನಿಲ್ದಾಣ ಉದ್ಘಾಟಿಸಿ ಪ್ರಧಾನಿ ಹೇಳಿಕೆ

ಸಲ್ಮಾನ್​​ನನ್ನು ಮುಗಿಸಿಬಿಡಬೇಕಿತ್ತು, ಕೊಲ್ಲಲು ಮಾಡಿದ್ದ ಪ್ರಯತ್ನ ಒಂದೆರಡಲ್ಲ, ಗ್ಯಾಂಗ್​ಸ್ಟರ್ ಹೇಳಿಕೆಯಿಂದ ಪೊಲೀಸರೇ ಶಾಕ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 12 =
Remember me
