ಬೆಂಗಳೂರು:ಸಾಕ್ಷ್ಯಚಿತ್ರವೊಂದರಲ್ಲಿ ಹಿಂದು ದೇವತೆ ಕಾಳಿಮಾತೆಗೆ ಅಪಮಾನಿಸಿರುವ ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ದೆಹಲಿ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.
ಲೀನಾ ಮಣಿಮೇಕಲೈ ನಿರ್ದೇಶನದ ‘ಕಾಳಿ’ ಡಾಕ್ಯುಮೆಂಟರಿ ಸಿನಿಮಾದ ಪೋಸ್ಟರ್​ನಲ್ಲಿ ಕಾಳಿದೇವಿಯ ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ LGBTQ(ಗೇ, ಟ್ರಾನ್ಸ್ ಜೆಂಡರ್ ಸಮುದಾಯದ್ದು) ಧ್ವಜ, ಬಾಯಲ್ಲಿ ಸಿಗರೇಟ್​ ಇದೆ. ಕೆನಾಡದ ಫಿಲ್ಮ್ ಪೆಸ್ಟಿವಲ್​ನಲ್ಲಿ ಕಾಳಿ ಮಾತೆ ಸಿಗರೇಟ್ ಸೇದುವ ಭಂಗಿಯ ಪೋಸ್ಟರ್ ರಿಲೀಸ್​ ಮಾಡುವ ಮೂಲಕ ಹಿಂದುಗಳ ಭಾವನೆಗಳಿಗೆ ಧಕ್ಕೆ ಲೀನಾ ತಂದಿದ್ದಾರೆ. ಇದನ್ನು ಖಂಡಿಸಿರುವ ದೆಹಲಿಯ ವಕೀಲರೊಬ್ಬರು ನಿರ್ದೇಶಕಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ವಿವಾದಾತ್ಮಕ ಪೋಸ್ಟರ್​ ನೋಡಿ ಹಿಂದು ಸಂಘಟನೆಗಳು ರೊಚ್ಚಿಗೆದ್ದಿದ್ದು, ‘#ಲೀನಾ ಅರೆಸ್ಟ್’ ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸುತ್ತಿದ್ದಾರೆ. ಆದರೂ ನಿರ್ದೇಶಕಿ ಮಾತ್ರ ಮೊಂಡುವಾದ ಮಾಡುತ್ತಿದ್ದಾರೆ. ‘ನನ್ನನ್ನು ಅರೆಸ್ಟ್​ ಮಾಡಿ ಎನ್ನಬೇಡಿ, ಲವ್​ ಯೂ ಲೀನಾ ಅಂತೇಳಿ’ ಎಂದು ಟ್ವೀಟ್​ ಮಾಡಿದ್ದಾರೆ.
ಸಾಕ್ಷ್ಯಚಿತ್ರದಲ್ಲಿ ಹಿಂದು ದೇವರಿಗೆ ಅಪಮಾನ, ಕಾಳಿ ಮಾತೆ ಬಾಯಲ್ಲಿ ಸಿಗರೇಟ್​! ಕ್ಷಮೆ ಕೇಳದೆ ನಿರ್ದೇಶಕಿ ಮೊಂಡುವಾದ

ಬೆಂಗ್ಳೂರಲ್ಲಿ ಒಂಟಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಂದ ವಿದ್ಯಾರ್ಥಿನಿಯನ್ನ ರಕ್ಷಿಸಿದ ತೃತೀಯಲಿಂಗಿಗಳು

ಪರ ಸ್ತ್ರೀಯರ ಜತೆ ಶಿಕ್ಷಕನ ಕಾಮದಾಟ: ವಿಡಿಯೋ ವೈರಲ್​ ಆಗ್ತಿದ್ದಂತೆ ಮನದನೋವು ಬಿಚ್ಚಿಟ್ಟ ಸಂತ್ರಸ್ತೆ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:19 + 12 =
Remember me
