ಬೆಂಗಳೂರು:ಸೆ.30ರಂದು ಬಿಡುಗಡೆಯಾದ ರಿಷಬ್​ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಸಿನಿಮಾ 3ನೇ ವಾರವೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಿರೀಕ್ಷೆ ಮೀರಿ ಹಿಟ್ ಆಗಿರುವ ಈ ಚಿತ್ರ ಪ್ಯಾನ್​ ಇಂಡಿಯಾ ಆಗಿದೆ. ಕರ್ನಾಟಕದಲ್ಲಷ್ಟೇ ಅಲ್ಲ, ಬೇರೆಬೇರೆ ರಾಜ್ಯಗಳ ಮತ್ತು ದೇಶಗಳ ಪ್ರಮುಖ ನಗರಗಳ ಮಲ್ಟಿಪ್ಲೆಕ್ಸ್​ನಲ್ಲೂ ಬಿಡುಗಡೆಯಾಗಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ವಿವಿಧ ಭಾಷೆಯ ಸಿನಿಮಾ ಮಂದಿಯೂ ಚಿತ್ರ ವೀಕ್ಷಿಸಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಸುಸಂದರ್ಭದಲ್ಲಿ ‘ಕನ್ನಡ ಸಿನಿಮಾದ ಗತವೈಭವ’ ಎಂಬ ಟ್ಯಾಗ್​ಲೈನ್​ನಲ್ಲಿ ವಿಡಿಯೋವೊಂದು ಸಖತ್​ ವೈರಲ್​ ಆಗುತ್ತಿದೆ..!
ಅದು ಹಿಂದಿ ಯುಟ್ಯೂಬರ್ ಒಬ್ಬರು ಸಂದರ್ಶನ ಮಾಡುತ್ತಿರುವಾಗಲೇ ರಿಷಬ್ ಶೆಟ್ಟಿಯ ಕಾಲಿಗೆ ಬಿದ್ದು ನಮಸ್ಕರಿಸುತ್ತಿರುವ ವಿಡಿಯೋ! ಕಾಂತಾರ ಸಿನಿಮಾ ಹಿಂದಿ ವಲಯದಲ್ಲೂ ತೆರೆಕಂಡಿದೆ. ಹಾಗಾಗಿ ಚಿತ್ರ ಪ್ರಚಾರಕ್ಕೆಂದು ರಿಷಬ್​ ಹಾಗೂ ಚಿತ್ರದ ನಾಯಕಿ ಸಪ್ತಮಿ ಗೌಡ ಮುಂಬೈನಲ್ಲಿ ಪ್ರಚಾರಕ್ಕೆಂದು ತೆರಳಿದ್ದಾರೆ. ಹಲವು ವಾಹಿನಿಗಳು, ಯುಟ್ಯೂಬ್​​ ವಾಹಿನಿಗಳಿಗೂ ಚಿತ್ರತಂಡ ಸಂದರ್ಶನ ನೀಡುತ್ತಿದೆ. ಹಿಂದಿ ಸಿನಿಮಾ ವಿಮರ್ಶೆ ಮತ್ತು ಸೆಲೆಬ್ರಿಟಿಗಳ ಸಂದರ್ಶನದಿಂದಲೇ ಜನಪ್ರಿಯವಾಗಿರುವ ಯುಟ್ಯೂಬರ್ ಸೂರಜ್​ಕುಮಾರ್​ ಎಂಬುವವರು ರಿಷಬ್​​ರ ಕಾಲಿಗೆ ಬಿದ್ದು ನಮಸ್ಕರಿಸುತ್ತಾ, ‘ಸರ್​ ನೀವು ಅದ್ಭುತ ಸಿನಿಮಾ ಮಾಡಿದ್ದೀರಿ. ನನ್ನ ಲವರ್​ಗಿಂತ ನಿಮ್ಮನ್ನೇ ಹೆಚ್ಚು ಇಷ್ಟಪಡ್ತೀನಿ’ ಎಂದಿದ್ದಾರೆ.
‘ಸರ್​ ನೀವು ಮೊದಲು ನಿಂತುಕೊಳ್ಳಿ…’ ಯುಟ್ಯೂಬರ್ ಸೂರಜ್​ ಹೇಳಿದಾಗ ರಿಷಬ್​​ ಕುರ್ಚಿಯಿಂದ ಮೇಲೆದ್ದರು. ಕ್ಷಣಾರ್ಧದಲ್ಲೇ ಅವರನ್ನ ಬಿಗಿದಪ್ಪಿಕೊಂಡ ಸೂರಜ್​, ಕೂಡಲೇ ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು. ‘ನೀವು ಎಂತಹ ಅದ್ಭುತ ಸಿನಿಮಾ ಮಾಡಿದ್ದೀರಿ ಸರ್​. ನಾನು ತಮಾಷೆಗೆ ಹೀಗೆ ಮಾಡುತ್ತಿಲ್ಲ. ಸಿನಿಮಾದಲ್ಲಿ ನಿಮ್ಮ ನಟನೆಯನ್ನ ನೋಡಿದ ನನಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ನನ್ನ ಗರ್ಲ್​ ಫ್ರೆಂಡ್​ಗಿಂತ ಜಾಸ್ತಿ ನಿಮ್ಮನ್ನೇ ಲವ್​ ಮಾಡ್ತೀನಿ’ ಎಂದು ಸೂರಜ್​ ಹೇಳಿದ್ದಾರೆ. ಕಾಲಿಗೆ ಬಿದ್ದಾಗ ನಟ ರಿಷಬ್​​ ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. ಈ ದೃಶ್ಯ ಜಾಲತಾಣದಲ್ಲಿ ವೈರಲ್​ ಆಗಿದೆ.
ಕಾಂತಾರ ಬಿಡುಗಡೆಯಾದ ಎರಡು ವಾರಗಳಲ್ಲಿ ದೇಶಾದ್ಯಂತ ಬರೀ ಕನ್ನಡ ಅವತರಣಿಕೆಯೊಂದರಿಂದಲೇ 50 ಪ್ಲಸ್ ಕೋಟಿ ರೂ. ಗಳಿಕೆಯಾಗಿದೆ. ಇದರಲ್ಲಿ ನಿರ್ಮಾಪಕರ ಶೇರ್ 25 ಕೋಟಿ ರೂ. ಆಗಬಹುದು ಎಂದು ಹೇಳಲಾಗುತ್ತಿದೆ.
PHOTOS| ರಮೇಶ್ ಯಕ್ಷಾವತಾರ! ನಟನ ಸಂಭ್ರಮಕ್ಕೆ ಪಾರವೇ ಇಲ್ಲ…

ಶಾಸಕ ಹರೀಶ್ ಪೂಂಜಾಗೆ ಬೆದರಿಕೆ: ಕೇರಳ ರಿಜಿಸ್ಟ್ರೇಷನ್​ ಕಾರಲ್ಲಿ ಗಡ್ಡಧಾರಿ ವ್ಯಕ್ತಿ ಇದ್ದ, ಮತ್ತೊಬ್ಬ ತಲ್ವಾರ್​ ಹಿಡಿದಿದ್ದ…

Sign in to your account
Please enter an answer in digits:4 × four =
Remember me
