ಶ್ರಿನಗರ:ಜಮ್ಮು-ಕಾಶ್ಮೀರದ ಆಯ್ದ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿ ಮತ್ತು ಹತ್ಯೆಯ ಹಿಂದೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್​ಐ ಇರುವುದು ಸ್ಪಷ್ಟವಾಗಿದೆ. ಎಲ್ಲೆಲ್ಲಿ ಮತ್ತು ಹೇಗೆ ದಾಳಿ ನಡೆಸಬೇಕು ಎಂದು ಐಎಸ್​ಐ ನೀಲಿನಕ್ಷೆ ಸಿದ್ಧಪಡಿಸಿದ್ದು, ಅದರ ಟೂಲ್ಕಿಟ್​ನಲ್ಲಿ 22 ಅಂಶಗಳ ಗುರಿಯನ್ನು ನೀಡಿರುವುದು ಬಯಲಾಗಿದೆ. ಟೂಲ್ಕಿಟ್​ನಲ್ಲಿ ಉಲ್ಲೇಖಿಸಿರುವ ಅಂಶಗಳು ಅಸ್ಪಷ್ಟ ಎನಿಸಬಹುದು. ಆದರೆ, ದೀರ್ಘಾವಧಿಯಲ್ಲಿ ಪರಿಣಾಮಕಾರಿ ಮತ್ತು ಪ್ರಯೋಜನಕಾರಿ ಆಗಲಿದೆ ಎಂದು ಐಎಸ್​ಐ ಅಡಿ ಟಿಪ್ಪಣಿಯಲ್ಲಿ ತಿಳಿಸಿದೆ.
ಮುಂಚೂಣಿ ನೆಲೆಗಳಿಗೆ ನರವಾಣೆ ಭೇಟಿ:ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ (ಎಲ್​ಒಸಿ) ಹಲವು ಮುಂಚೂಣಿ ನೆಲೆಗಳಿಗೆ ಭೂಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಮಂಗಳವಾರ ಭೇಟಿ ನೀಡಿದ್ದಾರೆ. ಸ್ಥಳೀಯ ಪರಿಸ್ಥಿತಿ, ಒಳನುಸುಳುವಿಕೆ ತಡೆಯಲು ಕೈಗೊಂಡಿರುವ ಕ್ರಮಗಳನ್ನು ಅವರು ಪರಿಶೀಲಿಸಿದ್ದಾರೆ. ವೈಟ್ ನೈಟ್ ಕೋರ್ ಪಹರೆ ಇರುವ ಪ್ರದೇಶಕ್ಕೂ ಅವರು ಭೇಟಿ ನೀಡಿದ್ದಾರೆ.
ಒಂಟಿ ತೋಳದ ದಾಳಿ:ನಾಗರಿಕರು ಮತ್ತು ವಲಸೆ ಕಾರ್ವಿುಕರ ಮೇಲೆ ನಡೆಯುತ್ತಿರುವ ದಾಳಿಯನ್ನು ಗಮನಿಸಿದರೆ ಇದು ‘ಒಂಟಿ ತೋಳ’ದ ದಾಳಿ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಹೇಳಿದೆ. ಈ ದಾಳಿಕೋರರು ಒಂಟಿಯಾಗಿ ಬಂದು ತಮ್ಮ ನಾಯಕರ (ಹ್ಯಾಂಡಲರ್) ಆಣತಿಯಂತೆ ಗುರಿ ಸಾಧಿಸುತ್ತಿದ್ದಾರೆ ಎಂದು ಎನ್​ಐಎ ತಿಳಿಸಿದೆ. ತನಿಖೆ ವೇಳೆ ‘ಕಾಶ್ಮೀರಿ ಫೈಟ್’ ಎಂಬ ಬ್ಲಾಗ್ ಪತ್ತೆಯಾಗಿದೆ. ಇದರಲ್ಲಿ ಸ್ಥಳೀಯರಲ್ಲದವರಿಗೆ ಎಚ್ಚರಿಕೆ ನೀಡುವ ಬರಹ ಇದ್ದು, ಕೂಡಲೇ ಕಾಶ್ಮೀರ ಕಣಿವೆಯನ್ನು ತೊರೆಯುವಂತೆ ಸೂಚಿಸಲಾಗಿದೆ. ಇದು ಸೆಪ್ಟೆಂಬರ್​ನಲ್ಲಿ ಪ್ರಕಟವಾಗಿದೆ. ಜಮ್ಮು-ಕಾಶ್ಮೀರದ ಪೊಲೀಸರ ಮನವಿ ಮೇರೆಗೆ ಕೇಂದ್ರ ಸರ್ಕಾರ ಈ ಬ್ಲಾಗ್ ಬ್ಲಾಕ್ ಮಾಡಿದೆ.
ಹೊರಬರದಂತೆ ಸೂಚನೆ:ಜಮ್ಮು-ಕಾಶ್ಮೀರದ ಪೂಂಛ್ ಮತ್ತು ರಾಜೌರಿಗಳಲ್ಲಿ ನಡೆಯುತ್ತಿರುವ ಉಗ್ರರ ನಿಗ್ರಹ ಕಾರ್ಯಾಚರಣೆ ಮಂಗಳವಾರ 9ನೇ ದಿನಕ್ಕೆ ಕಾಲಿಟ್ಟಿದ್ದು, ಜನರು ಮನೆಯಿಂದ ಹೊರಗೆ ಬಾರದಂತೆ ಭದ್ರತಾಪಡೆಗಳು ಸೂಚಿಸಿವೆ.
ಅಸ್ಸಾಂನಲ್ಲಿ ದಾಳಿ ಸಾಧ್ಯತೆ:ಮುಸ್ಲಿಮರನ್ನು ವಿಚಾರಣೆಗೆ ಗುರಿಪಡಿಸಲಾಗುತ್ತಿದೆ ಎಂದು ಪಾಕ್​ನ ಐಎಸ್​ಐ ಮತ್ತು ಅಲ್​ಖೆೈದಾ ಸಂಘಟನೆ ಅಸ್ಸಾಂನಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ರಾಜ್ಯ ಪೊಲೀಸ್ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ವಿಧ್ವಂಸಕರು ಆರ್​ಎಸ್​ಎಸ್ ಮುಖಂಡರನ್ನು ಗುರಿಯಾಗಿಟ್ಟಿಕೊಂಡಿರುವ ಸಾಧ್ಯತೆ ಇದ್ದು, ರಾಜ್ಯದಲ್ಲಿರುವ ಭದ್ರತಾ ಪಡೆಗಳ ನೆಲೆಗಳ ಮೇಲೂ ಕಣ್ಣಿಟ್ಟಿವೆ ಎಂದು ಹೇಳಿದೆ. ಸಮೂಹ ಸಾರಿಗೆ, ಧಾರ್ವಿುಕ ಸ್ಥಳಗಳು, ಜನರು ಸೇರುವ ಪ್ರದೇಶಗಳಲ್ಲಿ ಸ್ಫೋಟ ನಡೆಸುವ ಸಂಚು ನಡೆಸಿವೆ ಎಂದು ತಿಳಿಸಿದೆ. ಅಸ್ಸಾಂ ಮತ್ತು ಕಾಶ್ಮೀರದಲ್ಲಿ ಜಿಹಾದ್ ಘೋಷಿಸಿ ಎಂದು ಅಲ್​ಖೆೈದಾ ಸೂಚನೆ ನೀಡಿದೆ ಎಂದು ಅಸ್ಸಾಂನ ಸಹಾಯಕ ಪೊಲೀಸ್ ಮಹಾನಿರೀಕ್ಷರು ಹೊರಡಿಸಿರುವ ಕಟ್ಟೆಚ್ಚರದ ಸುತ್ತೋಲೆ ತಿಳಿಸಿದೆ.
23ಕ್ಕೆ ಅಮಿತ್ ಷಾ ಭೇಟಿ:ಕೇಂದ್ರ ಗೃಹ ಸಚಿವ ಅಮಿತ್ ಷಾ 23 ಮತ್ತು 24ರಂದು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಕೇಂದ್ರಾಡಳಿತ ಪ್ರದೇಶದ ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸುವ ಅವರು, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಕೇಂದ್ರೀಯ ಭದ್ರತಾ ಪಡೆಗಳ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ಈ ಮಧ್ಯೆ, ಕಾಶ್ಮೀರದಲ್ಲಿ ನಾಗರಿಕರ ಮೇಲೆ ನಡೆಯುತ್ತಿರುವ ದಾಳಿ ವಿಷಯವಾಗಿ ಅಮಿತ್ ಷಾ – ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಂಗಳವಾರ ಚರ್ಚೆ ನಡೆಸಿದ್ದಾರೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + eight =
Remember me
