ಮುಂಬೈ:ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಎಷ್ಟೋ ಜನರ ತಾಯಿ ತೀರಿಕೊಂಡರೂ ಆ ಸಾವನ್ನು ಒಪ್ಪಲು, ಸ್ವೀಕರಿಸಲು ಅವರು ಸಿದ್ಧರಿರುವುದಿಲ್ಲ. ಅದೇ ರೀತಿ ಮಾನಸಿಕ ಅಸ್ವಸ್ಥ ಮಗಳೊಬ್ಬಳು ತನ್ನ ತಾಯಿ ಸತ್ತು ತಿಂಗಳುಗಳಾದರೂ ಆಕೆಯ ಅಸ್ಥಿ ಪಂಜರದೊಂದಿಗೇ ಬದುಕಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಇದನ್ನೂ ಓದಿ:ಲೈಂಗಿಕ ಕಿರುಕುಳ ನೀಡಿದ ಅಪರಾಧಿಗಳಿಗೆ ನಡುರಸ್ತೆಯಲ್ಲಿ ಬಸ್ಕಿ ಹೊಡೆಯುವ ಶಿಕ್ಷೆ; ಕೋರ್ಟ್​ಗೆ ಹೋಗುವುದರೊಳಗೆ ಹೈರಾಣಾದ ಅಪರಾಧಿಗಳು
ಮಾನಸಿಕ ಅಸ್ವಸ್ಥೆ ತನ್ನ ಮನೆಯಿಂದ ಕಸವನ್ನು ರಸ್ತೆಗೆ ಎಸೆಯುತ್ತಿದ್ದಾಳೆ. ಪೂರ್ತಿ ದಿನ ಆಕೆಯ ಮನೆಯಿಂದ ವಿಚಿತ್ರ ಸದ್ದು ಕೇಳುತ್ತಿರುತ್ತದೆ ಎಂದು ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಅದರ ತನಿಖೆಗೆಂದು ಪೊಲೀಸರು ಆಕೆಯ ಮನೆಗೆ ಬಂದಿದ್ದಾರೆ. ಆಗ ಆಕೆಯ ತಾಯಿಯ ಅಸ್ಥಿ ಪಂಜರ ಪತ್ತೆಯಾಗಿದೆ. ಮ್ಯಾರಿಯಟ್​ ಫರ್ನಾಂಡಿಸ್​ ಹೆಸರಿನ ಆಕೆ ತನ್ನ ತಾಯಿ ಎವಾನ್​ ಫರ್ನಾಂಡಿಸ್​ ಅವರ ಮೃತ ದೇಹವನ್ನು ತನ್ನ ಮನೆಯಲ್ಲೇ ಇಟ್ಟುಕೊಂಡು ಇಷ್ಟು ದಿನ ಬದುಕಿರುವುದು ಗೊತ್ತಾಗಿದೆ.
ಮನೆಯಲ್ಲಿದ್ದ ಮಂಚವೊಂದರ ಕೆಳಗೆ ತಾಯಿಯ ಅಸ್ಥಿ ಪಂಜವರನ್ನು ಬೆಡ್​ಶೀಟ್​ನಲ್ಲಿ ಸುತ್ತಿ ಇಡಲಾಗಿತ್ತು. ಈ ಬಗ್ಗೆ ವಿಚಾರಿಸಿದಾಗ ಆಕೆ ತನ್ನ ತಾಯಿ ಆಗಸ್ಟ್​ನಲ್ಲೇ ಮೃತಳಾಗಿದ್ದಾಗಿ ಹೇಳಿದ್ದಾಳೆ. ಸದ್ಯ ಆ ಅಸ್ಥಿ ಪಂಜರವನ್ನು ಪೊಲೀಸರು ಅಂತ್ಯ ಸಂಸ್ಕಾರ ಮಾಡಿದ್ದು, ಮ್ಯಾರಿಯಟ್​ನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ:ಆಸ್ಪತ್ರೆಯಲ್ಲಿದ್ದ ಪ್ರಭುದೇವ್​ಗೆ ವೈದ್ಯೆಯೊಂದಿಗೆ ಲವ್​; ಮದುವೆಯಾಗಿದ್ದು ಸತ್ಯವೆಂದ ಸಹೋದರ
ಆಗಸ್ಟ್​ನಲ್ಲಿ ಸತ್ತ ತಾಯಿಯ ದೇಹವನ್ನು ಮೂರು ತಿಂಗಳುಗಟ್ಟಲೆ ಮನೆಯಲ್ಲೇ ಇಟ್ಟುಕೊಂಡರೂ ಈ ವಿಚಾರ ಊರವರಿಗೆ ತಿಳಿಯದಿರುವುದು ಕುತೂಹಲಕಾರಿಯಾಗಿದೆ. ಈ ವಿಚಾರದಲ್ಲಿ ಇನ್ನೂ ಕೆಲವು ಸತ್ಯಾಂಶಗಳು ತನಿಖೆಯ ನಂತರ ಹೊರಬರಬೇಕಿದೆ. (ಏಜೆನ್ಸೀಸ್​)
ಮೆದುಳಿನ ಶಸ್ತ್ರ ಚಿಕಿತ್ಸೆ ಸಮಯದಲ್ಲೂ ಬಿಗ್​ ಬಾಸ್​ ನೋಡಿದ ರೋಗಿ; ಕಾರಣವೇನು ಗೊತ್ತಾ?

ಬಟ್ಟೆ ಬದಲಿಸುವಾಗ ನಿರ್ಮಾಪಕರು​ ವ್ಯಾನಿಟಿ ವ್ಯಾನ್​ಗೇ ಬಂದು ಬಿಟ್ಟರು; ಖ್ಯಾತ ನಟಿಯ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
