ಪುಣೆ:ಚುಡಾಯಿಸಿದ ಯುವಕನಿಗೆ ಇಬ್ಬರು ಯುವತಿಯರು ಸೇರಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ ವಲಯದ ಅಂಬಿವಲ್ಲಿ ರೈಲು ನಿಲ್ದಾಣ ಸಮೀಪ ಇರುವ ವಡವಲಿ ಗ್ರಾಮದಲ್ಲಿ ಕಳೆದ ಮಂಗಳವಾರ (ಫೆ.14) ಪ್ರೇಮಿಗಳ ದಿನದಂದು ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ.
ಯುವತಿಯರಿಬ್ಬರು ರಸ್ತೆ ಮೇಲೆ ನಡೆದು ಹೋಗುವಾಗ ಯುವಕನೊಬ್ಬ ಇಬ್ಬರನ್ನು ಟೀಕಿಸಿದ್ದಾನೆ. ಅಲ್ಲದೆ, ಅವರ ಮುಂದೆ ಕೆಟ್ಟ ಪದಗಳನ್ನು ಬಳಸಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿಯರು ಯುವಕನನ್ನು ಎಳೆದಾಡಿ, ಹತ್ತಿರದ ಟೇಬಲ್​ ಒಂದರಲ್ಲಿ ಕೂರಿಸಿ, ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ತಪ್ಪಾಯ್ತು, ಕ್ಷಮಿಸಿ ಬಿಟ್ಟುಬಿಡಿ ಅಂತಾ ಕೇಳಿಕೊಂಡರು ಬಿಡದ ಯುವತಿಯರು ಪೊರಕೆಯಿಂದ ಯುವಕನಿಗೆ ಬಾರಿಸಿದ್ದಾರೆ. ಸ್ಥಳೀಯರೊಬ್ಬರು ತಮ್ಮ ಮೊಬೈಲ್​ನಲ್ಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ.
ಘಟನೆಗೆ ಪೊಲೀಸರು ಸಹ ಪ್ರತಿಕ್ರಿಯಿಸಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. ಆದರೆ, ವಿಡಿಯೋ ಆಧರಿಸಿ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಇತ್ತೀಚೆಗೆ ಯುವತಿಯರನ್ನು ಚುಡಾಯಿಸುವಂತಹ ಪ್ರಕರಣಗಳು ಹೆಚ್ಚಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಈ ಭಾಗದ ಸ್ಥಳೀಯರು.(ಏಜೆನ್ಸೀಸ್​)
A young eve-teaser was beaten by two girls at Vadwali village in Kalyan on Valentine's Day that is 14th Feb for eve-teasing. The boy was beaten by kicks and brooms and the video went viral on social media.#Kalyan#Evetease#viralvideopic.twitter.com/KyX5FXuv7f
— Abhitash Singh (@AbhitashS)February 15, 2023

ಶಾರುಖ್​ ಮ್ಯಾನೇಜರ್​ ಪೂಜಾರ ಒಟ್ಟು ಆಸ್ತಿ ಮೌಲ್ಯ, ವಾರ್ಷಿಕ ಸಂಬಳ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಂಡಿತ!

ತೆರಿಗೆ ಕಟ್ಟದೆ ಕಳ್ಳಾಟ ಆಡುತ್ತಿದ್ದ ಮಂತ್ರಿ ಮಾಲ್​ಗೆ ಬಿಬಿಎಂಪಿ ಶಾಕ್​: ಚರಾಸ್ತಿ ಮುಟ್ಟುಗೋಲು

6 ತಿಂಗಳಲ್ಲಿ ಬಿಡುಗಡೆ ಆಗಲಿದ್ದ ಕೈದಿಗೆ ಜೈಲಿನಲ್ಲೇ ಹೃದಯಾಘಾತ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen + 4 =
Remember me
