ಬರೇಲಿ:ಇದೊಂಥರ ಮುಯ್ಯಿಗೆ ಮುಯ್ಯಿ ಪ್ರಕರಣ. ಏಕೆಂದರೆ ಪೊಲೀಸ್ ದಂಡ ವಿಧಿಸಿದರು ಎಂಬ ಕಾರಣಕ್ಕೆ ಸಿಟ್ಟಾದ ಲೈನ್​ಮ್ಯಾನ್​, ಠಾಣೆಯ ವಿದ್ಯುತ್​ ಸಂಪರ್ಕವನ್ನೇ ಕಡಿತಗೊಳಿಸಿದ್ದಾನೆ. ಇದರಿಂದ ಉತ್ತರಪ್ರದೇಶದ ಹರ್ದಸ್​ಪುರ್ ಪೊಲೀಸ್ ಠಾಣೆ ಕತ್ತಲಲ್ಲಿ ಇರುವಂತಾಗಿತ್ತು.
ಶನಿವಾರ ತಪಾಸಣೆಯಲ್ಲಿದ್ದ ಪೊಲೀಸರು ಭಗವಾನ್​ ಸ್ವರೂಪ್ ಎಂಬ ಲೈನ್​ಮ್ಯಾನ್​ ಒಬ್ಬರ ಬೈಕ್ ಅಡ್ಡಗಟ್ಟಿದ್ದರು. ಆಗ ದಾಖಲೆ ಕೇಳಿದ್ದಕ್ಕೆ ಕೊಡಲು ವಿಫಲನಾದ ಲೈನ್​ಮ್ಯಾನ್​ ಮನೆಗೆ ಹೋಗಿ ತರುವುದಾಗಿ ಹೇಳಿದ್ದರೂ ಕೇಳದ ಪೊಲೀಸರು 500 ರೂ. ದಂಡ ವಿಧಿಸಿದ್ದರು.
ಇದರಿಂದ ತೀವ್ರ ಬೇಸರಗೊಂಡ ಲೈನ್​ಮ್ಯಾನ್​, ತನಗೆ ಗೊತ್ತಿರುವ ಸಿಬ್ಬಂದಿಗೆ ಹೇಳಿಸಿ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ. ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಲೈನ್​ಮ್ಯಾನ್​, ಠಾಣೆ ವಿದ್ಯುತ್ ಸಂಪರ್ಕವಿದ್ದರೂ ಮೀಟರ್ ಇರಲಿಲ್ಲ, ಹೀಗಾಗಿ ಅದು ಕಾನೂನುಬಾಹಿರ ಎಂದು ಹೇಳಿದ್ದಾನೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಾಗಿದೆ.
‘ಅಡ್ಡ’ಪರಿಣಾಮದ ಅತಿರೇಕ: ಮಾಜಿ ಸಿಎಂ-ಶಾಸಕರ ಬೆಂಬಲಿಗರ ಮಧ್ಯೆ ಇಂದು ದ್ವೇಷಜ್ವಾಲೆ!

ಪರಿಷತ್ ಚುನಾವಣೆ; ಶಿಕ್ಷಕರಿಗೆ ಹಂಚಲು ಕಾಂಗ್ರೆಸ್​ನವರು ಕೊಂಡೊಯ್ಯುತ್ತಿದ್ದ ಹಣ ವಶ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 13 =
Remember me
