ತ್ರಿಶೂರ್​:ಕೇರಳದ ತ್ರಿಶೂರ್​ನಲ್ಲಿರು ಕುಟ್ಟುಮುಕ್ಕು ಮಹಾದೇವ ದೇವಸ್ಥಾನ ಒಂದೇ ದಿನದಲ್ಲಿ ಇಂಟರ್​ನೆಟ್​ನಲ್ಲಿ ಸಿಕ್ಕಾಪಟೆ ವಿವಾದ ಸೃಷ್ಟಿಸಿದೆ. ಅದೂ ಟಾಯ್ಲೆಟ್​ ವಿಚಾರದಲ್ಲಿ…!
ದೇಗುಲದ ಮುಖ್ಯ ಆವರಣದ ಒಂದು ಬದಿಯಲ್ಲಿ ಮೂರು ಶೌಚಗೃಹಗಳಿದ್ದು, ಅದರಲ್ಲಿ ಒಂದರ ಮೇಲೆ ‘ಪುರುಷರಿಗೆ’, ಮತ್ತೊಂದರ ಮೇಲೆ ‘ಮಹಿಳೆಯರಿಗೆ’ ಎಂದು ಬೋರ್ಡ್​ ಹಾಕಲಾಗಿತ್ತು. ಆದರೆ ಮೂರನೇ ಟಾಯ್ಲೆಟ್ ಮೇಲೆ ಬ್ರಾಹ್ಮಣರಿಗೆ ಮಾತ್ರ’ ಎಂದು ಬರೆದುಕೊಂಡಿದ್ದ ಫಲಕ ಇತ್ತು. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ದೇಗುಲ ಆಡಳಿತ ಸ್ಪಷ್ಟನೆ ನೀಡಿದ್ದು, ಶೌಚಗೃಹಗಳು ದೇವಾಲಯದ ಆವರಣದಲ್ಲಿ ಇಲ್ಲ. ಸ್ವಲ್ಪ ಹೊರಭಾಗದಲ್ಲಿ ಇವೆ. ನಾವು ಬೋರ್ಡ್​ಗಳನ್ನು ಇತ್ತೀಚೆಗೆ ಗಮನಿಸಿಯೇ ಇರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬಳಿಕವಷ್ಟೇ ನಮ್ಮ ಗಮನಕ್ಕೆ ಬಂದಿದೆ ಎಂದಿದೆ.
ದೇವಾಲಯ ಆಡಳಿತ ಸಮಿತಿ ಅಧಿಕಾರಿ ಕಣ್ಣನ್​ ಎಂಬುವರು ಪ್ರತಿಕ್ರಿಯೆ ನೀಡಿದ್ದು, ದೇವಸ್ಥಾನದ ಮೂರು ಶೌಚಗೃಹಗಳ ಬಾಗಿಲುಗಳ ಮೇಲೆ ಈ ಫಲಕಗಳು ಎರಡು ದಶಕಗಳಿಂದಲೂ (20ವರ್ಷಗಳಿಂದ) ಇವೆ. ಆದರೆ ಇದುವರೆಗೂ ಯಾರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ದೂರು ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.
ಬ್ರಾಹ್ಮಣರಿಗೆ ಎಂದು ಬರೆದುಕೊಂಡಿದ್ದ ಶೌಚಗೃಹವನ್ನು ಇಷ್ಟು ವರ್ಷಗಳಿಂದಲೂ ದೇಗುಲದ ಅರ್ಚಕರು ಹಾಗೂ ಸಿಬ್ಬಂದಿ ಬಳಸುತ್ತಿದ್ದರು. ನಾವೂ ಸಹ ಬೋರ್ಡ್​ನಲ್ಲಿ ಏನು ಬರೆದುಕೊಂಡಿದೆ ಎಂಬುದನ್ನು ಅಷ್ಟಾಗಿ ಗಮನಿಸಲು ಹೋಗಿರಲಿಲ್ಲ. ಮೊದಲಿನಿಂದಲೂ ಹಾಗೇ ಇತ್ತಾ? ಇತ್ತೀಚೆಗೆ ಬದಲಾಯಿತಾ ಎಂದೂ ಗೊತ್ತಿಲ್ಲ ಆದರೆ ಆ ಶೌಚಗೃಹವನ್ನು ದೇಗುಲದ ಸಿಬ್ಬಂದಿ ಹೊರತು ಇನ್ಯಾರೂ ಬಳಸುತ್ತಿರಲಿಲ್ಲ. ಫಲಕದ ಮೇಲೆ ಬ್ರಾಹ್ಮಣರಿಗೆ ಎಂದು ಬರೆದುಕೊಂಡಿದ್ದು ನಮ್ಮ ಗಮನಕ್ಕೆ ಬಂದ ತಕ್ಷಣ ಅದನ್ನು ಬದಲಿಸಿ, ಸ್ಟಾಫ್​ ಓನ್ಲಿ (ದೇಗುಲ ಸಿಬ್ಬಂದಿಗೆ ಮಾತ್ರ) ಎಂಬ ಬೋರ್ಡ್​ ಹಾಕಿದ್ದೇವೆ ಎಂದು ಕಣ್ಣನ್​ ಮಾಹಿತಿ ನೀಡಿದ್ದಾರೆ.
ಈ ಫೋಟೋವನ್ನು ಓರ್ವ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಮೊದಲು ಪೋಸ್ಟ್​ ಮಾಡಿದ್ದಾನೆ. ದೇವಾಲಯದ ಖ್ಯಾತಿಗೆ ಧಕ್ಕೆ ತಂದು, ಉತ್ಸವದ ಸಮಯ ಬಂದಿದ್ದರಿಂದ ಸಮಸ್ಯೆ ಸೃಷ್ಟಿಸಲು ಹೀಗೆ ಮಾಡಿದ್ದಿರಬಹುದು ಎಂಬ ಶಂಕೆಯೂ ಕಾಡುತ್ತಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
ವೈರಲ್​ ನ್ಯೂಸ್​:ಸೂಪರ್​ಮಾರ್ಕೆಟ್​ನಲ್ಲಿ ಐಸ್​ಕ್ರೀಂ ತಿಂದ ಯುವಕನಿಗೆ ಒಂದು ತಿಂಗಳು ಜೈಲು ಶಿಕ್ಷೆ; ಹಾಗಂತ ಆತ ಕದ್ದಿರಲಿಲ್ಲ…ಕತೆ ಬೇರೇನೆ ಇದೆ ಓದಿ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 19 =
Remember me
