ಲಂಡನ್​:ಇನ್ನು ಆರು ವಾರಗಳಲ್ಲಿ ಚೀನಾ ಬ್ಯಾಂಕ್​ಗಳಿಗೆ 100 ಮಿಲಿಯನ್​ ಅಮೆರಿಕನ್​ ಡಾಲರ್​ಗಳನ್ನು ಪಾವತಿ ಪಾಡಬೇಕು ಎಂದು ಲಂಡನ್​ ನ್ಯಾಯಾಲಯ ರಿಲಯನ್ಸ್​ ಗ್ರೂಪ್​ನ ಚೇರ್ಮನ್​ ಅನಿಲ್​ ಅಂಬಾನಿಯವರಿಗೆ ಸೂಚನೆ ನೀಡಿದೆ.
ಚೀನಾದ ಮೂರು ಬ್ಯಾಂಕ್​ಗಳಿಂದ 2012ರಲ್ಲಿ 680 ಮಿಲಿಯನ್​ ಡಾಲರ್​ಗಳನ್ನು ಸಾಲ ಮಾಡಿದ್ದ ಅನಿಲ್​ ಅಂಬಾನಿಯವರು ಅದನ್ನು ಮರುಪಾವತಿ ಮಾಡಲು ವಿಫಲರಾದ ಹಿನ್ನೆಲೆಯಲ್ಲಿ ಬ್ಯಾಂಕ್​ಗಳು ಲಂಡನ್​ ಕೋರ್ಟ್​ನಲ್ಲಿ ಮೊಕದ್ದಮೆ ಹೂಡಿದ್ದವು.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಕೋರ್ಟ್​ ಶುಕ್ರವಾರ ಈ ಆದೇಶ ನೀಡಿದ್ದು, ಸಾಲದ ಒಪ್ಪಂದದ ಅನ್ವಯ ಚೀನಾದ ಬ್ಯಾಂಕ್​ಗಳು ಅನಿಲ್​ ಅಂಬಾನಿಯವರಿಂದ 680 ಡಾಲರ್​ಗಳನ್ನು ಹಿಂಪಡೆಯಬಹುದು ಎಂದು ತಿಳಿಸಿದೆ.ಅನಿಲ್​ ಅಂಬಾನಿ ಈಗ ಶ್ರೀಮಂತ ಉದ್ಯಮಿಯಾಗಿ ಉಳಿದಿಲ್ಲ. ಅವರು ದಿವಾಳಿಯಯಾಗಿದ್ದಾರೆ ಎಂದು ಹೇಳಿರುವ ಅವರ ಪರ ವಕೀಲರ ವಾದದಿಂದ ನನಗೆ ಸಮಾಧಾನ ಆಗಿಲ್ಲ. ಅವರ ಪರ ವಾದ ಮಂಡನೆ ಮಾಡಿದ ವಕೀಲರ ಮಾತಿನಲ್ಲಿ ಪಾರದರ್ಶಕತೆ ಇರಲಿಲ್ಲ ಎಂದು ನ್ಯಾಯಾಧೀಶ ವಾಕ್ಸ್​ಮನ್​ ಹೇಳಿದ್ದಾಗಿ ವರದಿಯಾಗಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
