ಹೈದರಾಬಾದ್​:ಚೀನಾ ಸೇರಿ ಹಲವು ದೇಶಗಳಲ್ಲಿ ಕೊರೊನಾ ವೈರಸ್​ ತನ್ನ ಯಮರೂಪವನ್ನು ತೋರಿದೆ. ನಾವು ತಿನ್ನುವ ಕೋಳಿ ಮಾಂಸದಿಂದಲೂ ಕೊರೊನಾ ವೈರಸ್ ಹರಡುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಸುಳ್ಳು, ಕೊರೊನಾಗೂ ಚಿಕನ್​ಗೂ ಯಾವುದೇ ಸಂಬಂಧವಿಲ್ಲ ಎಂದು ಜನರಲ್ಲಿ ಧೈರ್ಯ ತುಂಬುವ ಸಲುವಾಗಿ ತೆಲಂಗಾಣದ ಸಚಿವರು ವೇದಿಕೆಯ ಮೇಲೆ ಚಿಕನ್​ ತಿಂದಿದ್ದಾರೆ.
ಶುಕ್ರವಾರದಂದು ಹೈದರಾಬಾದ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಲಂಗಾಣದ ಸರ್ಕಾರದ ಸಚಿವರು ಸಾಲಾಗಿ ನಿಂತು ಚಿಕನ್​ ಲೆಗ್​ ಪೀಸ್​ಗಳನ್ನು ತಿಂದಿದ್ದಾರೆ. ಕೆ.ಟಿ.ರಾಮ ರಾವ್​, ಎಟೆಲಾ ರಾಜೇಂದರ್​ ಮತ್ತು ತಲಸಾನಿ ಶ್ರೀನಿವಾಸ್​ ಯಾದವ್​ ಸೇರಿದಂತೆ ಅನೇಕರು ಚಿಕನ್​ ತಿನ್ನುವ ಮೂಲಕ ಜನರಲ್ಲಿರುವ ಭಯವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ.
ಕಳೆದ ಡಿಸೆಂಬರ್​ ತಿಂಗಳಿನಲ್ಲಿ ಚೀನಾದ ಮಾಂಸದ ಮಾರುಕಟ್ಟೆಯಲ್ಲಿ ಮೊದಲ ಕೊರೊನ ವೈರಸ್​ ಪತ್ತೆಯಾಗಿತ್ತು. ಅದಾದ ನಂತರ ಈ ವೈರಸ್​ ದೇಶ ವಿದೇಶಗಳಿಗೂ ಹರಡಿತ್ತು. ಸಾಕು ಪ್ರಾಣಿಗಳು ಮತ್ತು ಕೋಳಿ ಮಾಂಸದಿಂದಲೂ ಕೊರೊನಾ ಹರಡುತ್ತದೆ ಎನ್ನುವ ಸುದ್ದಿಗಳು ಹರಿದಾಡಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + twelve =
Remember me
