ಹೈದರಾಬಾದ್:‘ತೆಲುಗು ಮೂವೀಸ್​ ಆರ್ಟಿಸ್ಟ್ಸ್ ಅಸೋಸಿಯೇಷನ್’ (MAA) ಚುನಾವಣೆಯಲ್ಲಿ ಹಿರಿಯ ನಟ ಪ್ರಕಾಶ್ ರಾಜ್​ಗೆ ಸೋಲಾಗಿದ್ದು, ನಟ ಹಾಗೂ ನಿರ್ಮಾಪಕ ಎಂ. ಮೋಹನ್​ಬಾಬು ಅವರ ಪುತ್ರ ಮಂಚು ವಿಷ್ಣು 400 ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಮೆಗಾಸ್ಟಾರ್​ ಚಿರಂಜೀವಿ ಅವರ ಬೆಂಬಲವಿದ್ದರೂ ಪ್ರಕಾಶ್​ ರಾಜ್ ಸೋಲು ಕಂಡಿದ್ದು, MAA ಅಧ್ಯಕ್ಷರಾಗಿ ಮಂಚು ವಿಷ್ಣು ಆಯ್ಕೆಯಾದರು.
MAA ಅಧ್ಯಕ್ಷ ಸ್ಥಾನಕ್ಕೆ ಭಾನುವಾರ(ಅ.10) ಸಂಜೆ ಹೈದರಾಬಾದ್​ನ ಜ್ಯುಬಿಲಿ ಹಿಲ್ಸ್ ಪಬ್ಲಿಕ್ ಶಾಲೆಯಲ್ಲಿ ಮತದಾನ ನಡೆದಿತ್ತು. ರಾತ್ರಿ 9ರ ವರೆಗೂ ಮತದಾನ ನಡೆದಿದ್ದು, ತಡರಾತ್ರಿವರೆಗೂ ಎಣಿಕೆ ನಡೆದು, ಬಳಿಕ ಫಲಿತಾಂಶ ಪ್ರಕಟಕೊಂಡಿದೆ. ತೆಲುಗು ಮೂವೀಸ್​ ಆರ್ಟಿಸ್ಟ್ಸ್ ಅಸೋಸಿಯೇಷನ್​ನಲ್ಲಿ 883 ಮಂದಿ ಮತದಾನದ ಹಕ್ಕು ಹೊಂದಿದ್ದು, ಈ ಪೈಕಿ ನಿನ್ನೆ ನಡೆದ ಚುನಾವಣೆಯಲ್ಲಿ 605 ಮಂದಿ ಮತಕೇಂದ್ರಕ್ಕೆ ಬಂದು ಹಕ್ಕು ಚಲಾಯಿಸಿದ್ದರು. ಇನ್ನು 60 ಮಂದಿ ಅಂಚೆ ಮೂಲಕ ಮತ ಹಾಕಿದ್ದರು. ಒಟ್ಟು 665 ಮತಗಳು ಚಲಾವಣೆಯಾಗಿದ್ದವು. 381 ಮತಗಳನ್ನು ಪಡೆದ ಮಂಚು ವಿಷ್ಣು, 107 ಮತಗಳ ಅಂತರದಿಂದ ಪ್ರಕಾಶ್ ರಾಜ್​​ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಪ್ರಕಾಶ್ ರಾಜ್ ಪ್ಯಾನೆಲ್​ನಲ್ಲಿ ಎಂ. ಶ್ರೀಕಾಂತ್ ಮಾತ್ರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿಷ್ಣು ಮಂಚು ನೇತೃತ್ವದ ತಂಡದ ಬಹುತೇಕ ಸದಸ್ಯರು MAA​ಗೆ ಆಯ್ಕೆಯಾಗಿದ್ದಾರೆ.
ಜೂಜು ಅಡ್ಡೆ ಮೇಲೆ ದಾಳಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಗೆ ಜಿಗಿದಿದ್ದ ವ್ಯಕ್ತಿ ಸಾವು

ಮಗು ಸಾಯುವ ಭಯದಲ್ಲಿ 8 ತಿಂಗಳ ಗರ್ಭಿಣಿ ಆತ್ಮಹತ್ಯೆ! ಈ ಸಾವಿಗೆ ಹಿಂದಿನ ದುರ್ಘಟನೆಯೇ ಕಾರಣವಾಯ್ತಾ?

ಮದ್ವೆಯಾದ 6 ತಿಂಗಳಿಗೆ ಯುವತಿ ದುರಂತ ಸಾವು: ಗಂಡನಿಗೆ ಹಣದಾಹ, ಮೈದುನನಿಗೆ ಕಾಮದಾಹ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
