ಆಂಧ್ರಪ್ರದೇಶ:ಸತ್ತ ಮೇಲೆ ಮೋಕ್ಷ ಸಿಗುತ್ತೆ, ಪುನರ್ಜನ್ಮ ಪ್ರಾಪ್ತಿ ಆಗುತ್ತೆ ಎಂದು ಗಾಢವಾಗಿ ನಂಬಿದ್ದ ಪೋಷಕರು ವಯಸ್ಸಿಗೆ ಬಂದಿದ್ದ ತನ್ನಿಬ್ಬರು ಹೆಣ್ಣುಮಕ್ಕಳನ್ನು ಮನೆಯಲ್ಲೇ ಅಮಾನುಷವಾಗಿ ಮದನಪಲ್ಲಿಯ ಶಿವನಗರದಲ್ಲಿ ಕೊಂದಿದ್ದ ಘಟನೆ ಇಡೀ ನಾಗರಿಕ ಸಮಾಜವನ್ನೇ ಬೆಚ್ಚಿಬೀಳಿಸಿತ್ತು. ಸುಶಿಕ್ಷಿತ ಕುಟುಂಬದಲ್ಲೇ ಇಂತಹ ಅಮಾನವೀಯ ಕೃತ್ಯ ನಡೆದದ್ದು ದೇಶಾದ್ಯಂತ ಭಾರಿ ಸದ್ದು ಮಾಡಿತ್ತು.
ಇದೀಗ ಮತ್ತೊಂದು ದುರ್ಘಟನೆ ನಿನ್ನೆ (ಭಾನುವಾರ) ಮದನಪಲ್ಲಿಯಲ್ಲಿ ಸಂಭವಿಸಿದ್ದು, ಮಲಗಿದ್ದಲ್ಲೇ ತಾಯಿ-ಮಗ-ಮಗಳು ದುರಂತ ಅಂತ್ಯ ಕಂಡಿದ್ದಾರೆ. ತಾಯಿ ಗುಲ್ಜಾರ್ ಬೇಗಂ, ಇವರ ಪುತ್ರ ಮೊಹಮ್ಮದ್ ರಫಿ, ಪುತ್ರಿ ಕರಿಮುನ್ನಿಸಾ ಮೃತ ದುರ್ದೈವಿಗಳು.
ಗುಲ್ಜಾರ್​ ಬೇಗಂನ ಮತ್ತೊಬ್ಬ ಪುತ್ರ ಕರಿಮುಲ್ಲಾ, ತಾಯಿ-ಮಕ್ಕಳು ಮಲಗಿದ್ದ ವೇಳೆ ಮನೆಗೆ ಬಂದು ಕಲ್ಲಿನಿಂದ ತಲೆ ಜಜ್ಜಿ ಹತ್ಯೆ ಮಾಡಿ ಬಳಿಕ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಭೀಕರ ಹತ್ಯೆ ದೃಶ್ಯ ಕಂಡು ಬೆಚ್ಚಿಬಿದ್ದರು. ಆರೋಪಿ ಕರಿಮುಲ್ಲಾ ತನ್ನ ಹೆಂಡತಿಯೊಂದಿಗೆ ಪದೇಪದೆ ಜಗಳ ಮಾಡುತ್ತಿದ್ದ. ಬೇಸತ್ತ ಪತ್ನಿ ತವರು ಸೇರಿದ್ದಳು. ಆಕೆಯನ್ನ ಕರೆತರಲು ಹೇಳಿದರೂ ಕುಟುಂಬಸ್ಥರು ಸ್ಪಂದಿಸಿರಲಿಲ್ಲವಂತೆ, ಇದೇ ವಿಚಾರವಾಗಿ ತಾಯಿ ಜತೆ ಕರಿಮುಲ್ಲಾ ಹಲವು ಬಾರಿ ಜಗಳ ಮಾಡಿಕೊಂಡಿದ್ದ. ಇದೇ ವಿಚಾರವಾಗಿ ಆಕ್ರೋಶಗೊಂಡಿದ್ದ ಕರಿಮುಲ್ಲಾ, ಇಡೀ ಕುಟುಂಬವನ್ನ ಮುಗಿಸಲು ಸಂಚು ರೂಪಿಸಿದ್ದ. ಅದರಂತೆ ಭಾನುವಾರ ರಾತ್ರಿ ನಿದ್ರೆಗೆ ಜಾರಿದ್ದ ತಾಯಿ ಮತ್ತು ಕಿರಿಯ ಸಹೋದರ, ಸಹೋದರಿಯನ್ನ ಚಿರನಿದ್ರೆಗೆ ಕಳಿಸಿ ವಿಕೃತಿ ಮೆರೆದಿದ್ದಾನೆ.
ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಲಾಗಿದೆ. ಮಾನಸಿಕ ಸಮಸ್ಯೆಯಿಂದ ಆರೋಪಿ ಬಳಲುತ್ತಿದ್ದ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದ್ದು, ತನಿಖೆ ಬಳಿಕ ಕೊಲೆಗೆ ನಿಖರ ಕಾರಣ ತಿಳಿಯಲಿದೆ.
ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

ರುಂಡ-ಮುಂಡ-ಕೈಕಾಲು ಬೇರ್ಪಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ​: ಶವದೊಂದಿಗೆ ಪ್ರಯಾಣಿಸಿದ್ದ ನಟಿ ಶನಾಯ, ಬೆಚ್ಚಿಬೀಳಿಸುತ್ತೆ ಟ್ರಾವೆಲ್ ಹಿಸ್ಟರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + eight =
Remember me
