ಪಣಜಿ:ಏಕನಾಥ್​ ಶಿಂಧೆಗೆ ಮಹಾರಾಷ್ಟ್ರ ಸಿಎಂ ಪಟ್ಟ ಘೋಷಣೆ ಆಗುತ್ತಿದ್ದಂತೆ ಗೋವಾದಲ್ಲಿ ಬೀಡುಬಿಟ್ಟಿರುವ ಶಿಂಧೆ ಬಣದ ಶಾಸಕರು ಮತ್ತು ಸಂಸದರು ಕುಣಿದು ಕುಪ್ಪಳಿಸಿದ್ದಾರೆ. ಏಕನಾಥ್​ಗೆ ಜೈಕಾರ ಹಾಕುತ್ತಾ ಹಾಡಿನ ಹಿನ್ನೆಲೆಗೆ ತಕ್ಕಂತೆ ಭರ್ಜರಿ ಡಾನ್ಸ್​ ಮಾಡಿದ್ದಾರೆ.
ಕ್ಷಣಕ್ಷಣಕ್ಕೂ ತಿರುವು ಪಡೆಯುತ್ತಿದ್ದ ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಗುರುವಾರ ಸಂಜೆ ಸ್ಫೋಟಕ ತಿರುವು ಪಡೆಯಿತು. ಬಿಜೆಪಿಯ ಪಡ್ನವೀಸ್​ ಅವರೇ ಸಿಎಂ ಆಗ್ತಾರೆ. ಶಿಂಧೆಗೆ ಡಿಸಿಎಂ ಪಟ್ಟ ಸಿಗುತ್ತೆ ಎಂದೇ ಹೇಳಲಾಗಿತ್ತು. ಆದರೆ, ಅಚ್ಚರಿ ಬೆಳವಣಿಗೆ ಎಂಬಂತೆ ಕೊನೇ ಕ್ಷಣದಲ್ಲಿ ಮುಂಬೈನಲ್ಲಿ ಶಿಂಧೆ ಜತೆ ಜಂಟಿಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ದೇವೇಂದ್ರ ಪಡ್ನವಿಸ್​, ಮಹಾರಾಷ್ಟ್ರದ ನೂತನ ಸಿಎಂ ಆಗಿ ಏಕನಾಥ್​ ಶಿಂಧೆ ಆಯ್ಕೆ ಆಗಿದ್ದಾರೆ ಎಂದು ಘೋಷಣೆ ಮಾಡಿದರು. ಇದೇ ವೇಳೆ ಅತ್ತ ಗೋವಾದಲ್ಲಿ ಬೀಡುಬಿಟ್ಟಿದ್ದ ಶಿಂಧೆ ಬಣ, ಈ ಸುದ್ದಿ ಕೇಳಿ ಸಂಭ್ರಮಿಸಿದ್ದಾರೆ. ಡಾನ್ಸ್​ ಮಾಡುತ್ತಾ ಶಿಂಧೆ.. ಶಿಂಧೆ.. ಏಕನಾಥ್​ ಶಿಂಧೆ… ಎಂದು ಜೈಕಾರ ಹಾಕಿದ್ದಾರೆ. ಇವರು ಕುಣಿದು ಕುಪ್ಪಳಿಸುತ್ತಿರುವ ವಿಡಿಯೋ ವೈರಲ್​ ಆಗಿದೆ.
‘ಏಕನಾಥ್​ ಶಿಂಧೆ ಕಿಂಗ್​ ಮೇಕರ್​ ಅಲ್ಲ, ಅವರು ಕಿಂಗ್​’ ಎಂದು ದೇವೆಂದ್ರ ಪಡ್ನವಿಸ್​ ಹೇಳುತ್ತಿದ್ದಂತೆ ಶಿಂಧೆ ಬೆಂಬಲಿಕ ಶಾಸಕರು ಜೋರಾಗಿ ಶಿಳ್ಳೆ ಹಾಕಿ, ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ ಇಂದು ಸಂಜೆ 7.30ಕ್ಕೆ ಮಹಾರಾಷ್ಟ್ರ ಸಿಎಂ ಆಗಿ ಶಿಂಧೆ ಪ್ರಮಾನವಚನ ಸ್ವೀಕರಿಸಲಿದ್ದಾರೆ. ಶಿಂಧೆಗೆ ಸಿಎಂ ಸ್ಥಾನ ಬಿಟ್ಟುಕೊಟ್ಟ ಪಡ್ನವಿಸ್​ ನಡೆಯನ್ನ ಮತ್ತು ಬಿಜೆಪಿ ನಿರ್ಧಾರವನ್ನ ಶಿಂಧೆ ಬಣ ಕೊಂಡಾಡಿದೆ. ಬಿಜೆಪಿ ಬಳಿ 120 ಶಾಸಕರ ಬೆಂಬಲವಿದ್ದರೂ ಸಿಎಂ ಸ್ಥಾನವನ್ನ ನನಗೆ ಬಿಟ್ಟುಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಷಾ, ಪಡ್ನವಿಸ್​ ಅವರಿಗೆ ಧನ್ಯವಾದಗಳು. ಇದನ್ನು ಬಾಳಾ ಸಾಹೇಬ್​ ಠಾಕ್ರೆ ಅವರಿಗೆ ಅರ್ಪಿಸುವೆ ಎಂದು ಏಕನಾಥ್​ ಶಿಂಧೆ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಲು ಉದ್ಧವ್​ ಠಾಕ್ರೆಗೆ ಮೇಲಿಂದ ಮೇಲೆ ತಿಳಿಸಿದರೂ ಅವರು ಪುರಸ್ಕರಿಸಲಿಲ್ಲ. ಹಾಗಾಗಿ ನಾವು ಅಘಾಡಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನ ಹಿಂಪಡೆದಿದ್ದೇವೆ ಎಂದು ಏಕನಾಥ್​ ಶಿಂಧೆ ಸ್ಪಷ್ಟನೆ ನೀಡಿದ್ದಾರೆ.
ಆಟೋಡ್ರೈವರ್​ನಿಂದ ‘ಮಹಾ’ ಸಿಎಂ ಖುರ್ಚಿಯವರೆಗೆ… ಬಾಳಾಸಾಹೇಬರ ಶಿಷ್ಯನ ಕುತೂಹಲದ ಪಯಣವಿದು…

ತುಮಕೂರಲ್ಲಿ ಭಯಾನಕ ಗ್ಯಾಂಗ್​: ವಿದ್ಯಾರ್ಥಿಗಳೇ ಟಾರ್ಗೆಟ್​, ಕೆಲ್ಸದ ಆಸೆಗೆ ಫ್ಲ್ಯಾಟ್​​ಗೆ ಹೋದ ಹುಡ್ಗೀರಾ ಪಾಡು ಹೇಳತೀರದು

Sign in to your account
Please enter an answer in digits:twelve − 10 =
Remember me
