ತ್ರಿಶೂರ್:ಕಾರಿನಲ್ಲೇ ಕೈ ನರ ಕತ್ತರಿಸಿಕೊಂಡು ನಿದ್ರೆ ಮಾತ್ರೆ ಸೇವಿಸಿ ಕೋಮ ಸ್ಥಿತಿಯಲ್ಲಿರುವ ಟಿವಿ ಸೀರಿಯಲ್​ ನಟ ಆದಿತ್ಯ ಜಗನ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮಲಯಾಳಂ ಟಿವಿ ಸೀರಿಯಲ್​ನಲ್ಲಿ ಬಣ್ಣಹಚ್ಚಿದ್ದ ನಟ ಆದಿತ್ಯ ಜಯನ್, ಕೌಟುಂಬ ಕಲಹಕ್ಕೆ ಬೇಸತ್ತು ಭಾನುವಾರ ಸಂಜೆ ನಾಡುವಿಲಾಲ್ ಬಳಿ ಕಾರಿ ನಿಲ್ಲಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೋಮಾ ಸ್ಥಿತಿಗೆ ತಲುಪಿದ್ದ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು, ನಟ ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು 24ರಿಂದ 48 ತಾಸು ತೀವ್ರ ನಿಗಾಘಟಕದಲ್ಲಿ ಇಟ್ಟು ನೋಡಲಾಗುವುದು ಎಂದು ಳಿಸಿದ್ದರು. ಆದಿತ್ಯ ಜಯನ್​ ತನಗೆ ಕಿರುಕುಳ ಕೊಡುತ್ತಿದ್ದರು ಎಂದು ಇತ್ತೀಚಿಗೆ ಇವರ ಪತ್ನಿ, ನಟಿ ಅಂಬಿಲಿ ದೇವಿ ಆರೋಪ ಮಾಡಿದ್ದು ಭಾರಿ ಸುದ್ದಿಯಾಗಿತ್ತು.
‘ಸೀತಾ’ ಎಂಬ ಧಾರಾವಾಹಿಯಲ್ಲಿ ಆದಿತ್ಯ ಜಯನ್ ಮತ್ತು ಅಂಬಿಲಿ ದೇವಿ ಪತಿ-ಪತ್ನಿ ಪಾತ್ರ ನಿರ್ವಹಿಸಿದ್ದರು. ಈ ಧಾರಾವಾಹಿ ಶೂಟಿಂಗ್​ ವೇಳೆ ಇವರಿಬ್ಬರೂ ಪರಸ್ಪರ ಪ್ರೀತಿಸಿ 2019ರಲ್ಲಿ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಒಬ್ಬ ಮಗನಿದ್ದಾನೆ. ಆದರೆ, ಕೆಲವು ವರ್ಷಗಳಿಂದ ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಪತಿ ಆದಿತ್ಯ ಜಯನ್​ ಕಿರುಕುಳ ಕೊಡುತ್ತಿದ್ದಾರೆ ಎಂದು ಅಂಬಿಲಿ ಆರೋಪಿಸಿದ್ದರು. ಅಲ್ಲದೆ ವಿಚ್ಛೇದನ ಪಡೆಯಲೂ ನಿರ್ಧರಿಸಿದ್ದರು. ಈ ನಡುವೆ ಆದಿತ್ಯ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

ಕೋವಿಡ್​19: ವಾಜಪೇಯಿ ಸೋದರ ಸೊಸೆ, ಮಾಜಿ ಸಂಸದೆ ಕರುಣಾ ಶುಕ್ಲಾ ನಿಧನ

ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − twenty =
Remember me
