ನವದೆಹಲಿ:ಕ್ರೊವೇಷಿಯಾದಲ್ಲಿ ನೆಲೆಸಿರುವ ಕೇರಳ ಮೂಲದ ವ್ಯಕ್ತಿ ಅಪಾರವಾದ ಧೈರ್ಯ ಮತ್ತು ಸಾಹಸ ಮೆರೆದು ರಾಷ್ಟ್ರೀಯ ಹೀರೋ ಎನಿಸಿಕೊಂಡಿದ್ದಾರೆ. ಈ ಗೌರವಕ್ಕೆ ಪಾತ್ರರಾಗಲು ಅವರು ಮಾಡಿದ ಅಂಥ ಸಾಹಸವಾದರೂ ಏನು?
ಕೇರಳದ ಕಯಾಂಕುಲಂ ಬಳಿಯ ಕಂಡಲ್ಲೂರ್​ನ ಪುಲ್ಲುಕುಲಾಂಗ್ರಾ ಪ್ರದೇಶದ ಬಿಜು ರವೀಂದ್ರನ್​ (41) ಕ್ರೊವೇಷಿಯಾದ ಬಾಲ್ಕನ್​ ಕಂಟ್ರಿಯ ಜೆಲೊವಾರ್​ ಎಂಬಲ್ಲಿ ನೆಲೆಸಿದ್ದಾರೆ. ಇಲ್ಲಿನ ಪೆಟ್ರೋಲಿಯಂ ಸಂಸ್ಕರಣಾ ಘಟಕದಲ್ಲಿ ಫಿಟ್ಟರ್​ ಆಗಿ ಕೆಲಸ ಮಾಡುತ್ತಿದ್ದಾರೆ.
ತಮ್ಮ ಕೇರಳದ ಸ್ನೇಹಿತರೊಂದಿಗೆ ಬಿಜು ವಾಸವಾಗಿದ್ದ ಅಪಾರ್ಟ್​ಮೆಂಟ್ ಮೇಲ್ಮಹಡಿಯಲ್ಲಿ ಜು.10ರ ತಡರಾತ್ರಿ 2 ಗಂಟೆಯಲ್ಲಿ (ಭಾರತೀಯ ಕಾಲಮಾನ ಮುಂಜಾನೆ 5.30) ಬೆಂಕಿ ಕಾಣಿಸಿಕೊಂಡಿತ್ತು. ಅಲ್ಲಿದ್ದ ನಿವಾಸಿಗಳು ಸಹಾಯಕ್ಕಾಗಿ ಕೂಗಲಾರಂಭಿಸಿದ್ದರು. ಗಲಾಟೆಯಿಂದ ಎದ್ದ ಬಿಜು ಹಿಂದುಮುಂದು ಆಲೋಚಿಸದೆ ಮೇಲ್ಮಹಡಿಯಲ್ಲಿದ್ದವರ ಸಹಾಯಕ್ಕೆ ಧಾವಿಸಿದರು.
ಇದನ್ನೂ ಓದಿ:ವಿವಾಹಿತ ಮಹಿಳೆ ಜತೆ ಪರಾರಿಯಾಗಿದ್ದ ಯುವಕ ಪೊಲೀಸ್ ಠಾಣೆಯಲ್ಲೇ ಸ್ಯಾನಿಟೈಸರ್ ಕುಡಿದ..!
ಮೂರು ಮಹಡಿಯ ಕಟ್ಟಡದ ಮೂರನೇ ಮಹಡಿಯಲ್ಲಿ ಎರಡು ಪುಟ್ಟ ಮಕ್ಕಳೊಂದಿಗೆ ದಂಪತಿ ವಾಸವಾಗಿದ್ದರು. ಪತಿ ರೂಬಿನ್​ ಹೇಗೋ ತಪ್ಪಿಸಿಕೊಂಡು ಬಂದು, ತನ್ನ ಪತ್ನಿ ಹೆಲೆನಾ ರೂಬಿನ್​ ಮತ್ತು ಅವರ 3 ಮತ್ತು 5 ವರ್ಷದ ಮಕ್ಕಳನ್ನು ಕಾಪಾಡಲು ಪರದಾಡುತ್ತಿದ್ದರು. ಇದನ್ನು ಗಮನಿಸಿದ ಬಿಜು ತಕ್ಷಣವೇ ದೊಡ್ಡ ಏಣಿಯೊಂದನ್ನು ತೆಗೆದುಕೊಂಡು, ಮಹಿಳೆ ಇದ್ದ ಮನೆಯ ಬಾಲ್ಕನಿಯತ್ತ ಸಾಗಲಾರಂಭಿಸಿದರು. ದಟ್ಟವಾದ ಹೊಗೆ ಹಾಗೂ ಬೆಂಕಿಯ ಕೆನ್ನಾಲಗೆಯಿಂದಾಗಿ ಬಾಲ್ಕನಿಗೆ ಹೋಗುವುದು ದುಸ್ತರವಾಗಿತ್ತು. ಹಾಗಾಗಿ, ಕೋಣೆಯೊಂದರ ವೆಂಟಿಲೇಟರ್​ ಇರುವ ಕಡೆಗೆ ಬಿಜು ಸಾಗಿದರು.ವೆಂಟಿಲೇಟರ್​ ಅನ್ನು ಮುರಿದು, ಹೆಲೆನಾ ಅವರ ಸಹಾಯದಿಂದ ಮಕ್ಕಳನ್ನು ಪಡೆದು ಸುರಕ್ಷಿತವಾಗಿ ಕೆಳಗಿಳಿಸಿದರು. ಆದರೆ, ಹೆಲೆನಾಗೆ ವೆಂಟೆಲೀಟರ್​ ತಲುಪಲು ಸಾಧ್ಯವಾಗಲಿಲ್ಲ. ಕೆಳಗಿದ್ದ ತಮ್ಮ ಸ್ನೇಹಿತರ ಸಹಾಯದಿಂದ ಮತ್ತೊಂದು ಸಣ್ಣ ಏಣಿಯನ್ನು ಪಡೆದುಕೊಂಡು, ವೆಂಟೆಲೇಟರ್​ ಮೂಲಕ ಮಹಿಳೆಗೆ ಕೊಟ್ಟರು. ಅದನ್ನು ಹತ್ತಿ ಬಂದ ಅವರನ್ನು ರಕ್ಷಿಸಿದರು.
ತಮ್ಮ ಸುರಕ್ಷತೆಯನ್ನು ಪಣಕ್ಕೊಡ್ಡಿ, ಪ್ರಾಣದ ಹಂಗು ತೊರೆದು ಕ್ರೊವೇಷಿಯಾ ಮೂಲದ ಕುಟುಂಬವನ್ನು ರಕ್ಷಿಸಿಲು ಬಿಜು ಪ್ರಯತ್ನಿಸಿದ್ದಕ್ಕೆ ಸ್ಥಳೀಯರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಈ ರೀತಿ ಅವರು ಕ್ರೊವೇಷಿಯಾದ ರಾಷ್ಟ್ರೀಯ ಹೀರೋ ಎನಿಸಿಕೊಂಡಿದ್ದಾರೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಬಿಜು, ನಾನು ಹೆಲೆನಾ ರೂಬಿನ್​ ಅವರ ಸಹಾಯಕ್ಕೆ ಮುಂದಾದಾಗ ನನ್ನ ಸ್ನೇಹಿತರು ಹಾಗೂ ಸಹೋದ್ಯೋಗಿಗಳಾದ ಕೇರಳದ ಪಟ್ಟಣಂಥಿಟ್ಟ ಮೂಲದ ವರ್ಗೀಸ್​ ಮತ್ತು ಜೋಬಿ ನನಗೆ ಸಹಾಯಕ್ಕೆ ಬಂದರು. ಅವರು ಇಲ್ಲದೇ ಹೋಗಿದ್ದರೆ ಕುಟುಂಬವನ್ನು ರಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಅರ್ಧ ಗಂಟೆಯಲ್ಲಿ ನಮ್ಮ ರಕ್ಷಣಾ ಕಾರ್ಯಾಚರಣೆ ಮುಗಿದಿದ್ದಾಗಿ ತಿಳಿಸಿದ್ದಾರೆ. ಬಿಜು ಮತ್ತು ಅವರ ಸ್ನೇಹಿತರ ಈ ಸಾಹಸನವನ್ನು ಮೆಚ್ಚಿಕೊಂಡು ಸ್ಥಳೀಯ ಆಡಳಿತ ಸಂಸ್ಥೆಯ ಅಧಿಕಾರಿಗಳು ಬಿಜು ಮತ್ತು ಅವರ ಸ್ನೇಹಿತರನ್ನು ಸನ್ಮಾನಿಸಿ ಅಭಿನಂದಿಸಿದ್ದಾರೆ.
ಆರೇಳು ತಿಂಗಳಲ್ಲಿ ಮನೆಮನೆಗೆ ರೇಷನ್‌: ದೆಹಲಿ ಸಚಿವ ಸಂಪುಟದಲ್ಲಿ ಅನುಮೋದನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 5 =
Remember me
