ಲಖನೌ:ಕೆಲವು ವಸ್ತುಗಳೊಂದಿಗೆ ಹುಡುಗಾಟ ಸಲ್ಲ ಎಂದು ಹೇಳುತ್ತಾರೆ. ಆದರೆ ಆ ಮಾತನ್ನು ಪರಿಗಣಿಸದೆಯೇ ಪಿಸ್ತೂಲಿನೊಂದಿಗೆ ಹುಡುಗಾಟ ಮಾಡಲು ಹೋದ ವ್ಯಕ್ತಿಯೊಬ್ಬ ತನ್ನ ಸೋದರ ಅಳಿಯನಿಗೇ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ನಡೆದಿದೆ.
ಎರಡು ಮೂರು ಜನರು ಗದ್ದೆ ಭಾಗದಲ್ಲಿ ಕುಳಿತುಕೊಂಡು ಮದ್ಯ ಸೇವಿಸುತ್ತಿದ್ದರು. ಈ ವೇಳೆ ಅವರ ಬಳಿ ಇದ್ದ ಕಂಟ್ರಿ ಮೇಡ್ ಪಿಸ್ತೂಲನ್ನೂ ಹೊರತೆಗೆದಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಒಬ್ಬ ತನ್ನ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ಪಿಸ್ತೂಲು ಹೊರತೆಗೆದ ವ್ಯಕ್ತಿ ಅದಕ್ಕೆ ಬುಲೆಟ್​ ಹಾಕಿ ಅದನ್ನು ವಿಡಿಯೋ ಮಾಡುತ್ತಿದ್ದವನತ್ತ ಗುರಿ ಮಾಡಿ ತಕ್ಷಣ ಶೂಟ್​ ಮಾಡಿಬಿಟ್ಟಿದ್ದಾನೆ. ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಅಲ್ಲೇ ಕುಸಿದುಬಿದ್ದಿದ್ದಾನೆ. ಶೂಟ್​ ಮಾಡಿದವ ಮತ್ತು ಮೃತನಾದ ವ್ಯಕ್ತಿ ಸೋದರ ಮಾವ ಅಳಿಯ ಸಂಬಂಧಿಗಳು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಪ್ರಕರಣದಲ್ಲಿ ಶೂಟ್ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಬೇಕೆಂದು ಮಾಡದ ಕೃತ್ಯವೆನ್ನುವುದು ವಿಚಾರಣೆ ವೇಳೆ ಹೊರಬಿದ್ದಿದೆ. (ಏಜೆನ್ಸೀಸ್​)
ಪಿಸ್ತೂಲು ವರ್ಕ್​ ಆಗತ್ತಾ ನೋಡಲು ಸೋದರಳಿಯನಿಗೇ ಗುಂಡಿಟ್ಟ ಮಾವ! ವಿಡಿಯೋ ವೈರಲ್​ವಿವರಗಳಿಗೆhttps://t.co/JCps2efeGVನೋಡಿpic.twitter.com/UkSfQ3OUv0
— Vijayavani (@VVani4U)February 27, 2021

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
ಒಬ್ಬ ಮಗಳ ಪ್ರಾಣ ಉಳಿಸುವುದಕ್ಕಾಗಿ ಇನ್ನೊಬ್ಬ ಮಗಳನ್ನು 10 ಸಾವಿರ ರೂಪಾಯಿಗೆ ಮಾರಾಟ ಮಾಡಿದ ತಂದೆ ತಾಯಿ!

ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ! ಚಿನ್ನಾಭರಣ ಪ್ರಿಯರು ಫುಲ್​ ಖುಷ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
