ಗಾಂಧಿನಗರ:ಜನ್ಮ ಪೂರ್ತಿ ಜತೆಯಿರಲು ಮದುವೆಯಾಗಿ ಬಂದ ಪತ್ನಿಗೆ ಪತಿ ಲೈಂಗಿಕ ಕಿರುಕುಳ ನೀಡಿದ್ದು ಇದೀಗ ಹೆಂಡತಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ. ನನ್ನ ಗಂಡ ನನಗೆ ವಿಚಿತ್ರ ಸೆಕ್ಸ್​ ಪೊಸಿಷನ್​ಗಳಿಗೆ ಒತ್ತಾಯಿಸುತ್ತಾನೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾಳೆ.
ಇದನ್ನೂ ಓದಿ:ಶಾಹೀನ್​ಬಾಗ್​ ಶೂಟರ್​ನ್ನು ಪಕ್ಷಕ್ಕೆ ಸೇರಿಸಿಕೊಂಡು ಕೆಲವೇ ಗಂಟೆಗಳಲ್ಲಿ ಉಚ್ಛಾಟಿಸಿದ ಬಿಜೆಪಿ!
ಗುಜರಾತ್​ನ ಮಣಿನಗರದಲ್ಲಿ ಇಂತದ್ದೊಂದು ಪ್ರಕರಣ ದಾಖಲಾಗಿದೆ. ದೂರು ನೀಡಿರುವ ಮಹಿಳೆಗೆ 2019ರ ಡಿಸೆಂಬರ್​ 19ರಂದು ಮದುವೆಯಾಗಿದೆ. 20 ಲಕ್ಷ ರೂಪಾಯಿ ವರದಕ್ಷಿಣೆ ಕೊಟ್ಟು ಮದುವೆ ಮಾಡಲಾಗಿದೆ. ಗಂಡ ರಾಷ್ಟ್ರೀಕೃತ ಬ್ಯಾಂಕ್​ ಒಂದರಲ್ಲಿ ಕ್ಲರ್ಕ್​ ಆಗಿ ಕೆಲಸ ಮಾಡುತ್ತಿದ್ದಾನೆ. ಮದುವೆಯಾಗಿ 15 ದಿನಗಳಲ್ಲೇ ಗಂಡನ ಮನೆಯವರು ತಮ್ಮ ವರಸೆ ಆರಂಭಿಸಿದ್ದಾರೆ. ಸೊಸೆಗೆ ಕಿರುಕುಳ ನೀಡಲು ಶುರುವಿಟ್ಟಿದ್ದಾರೆ. ಇದರಿಂದ ನೊಂದ ಸೊಸೆ ಎರಡು ತಿಂಗಳ ಕಾಲ ತವರು ಮನೆಯಲ್ಲೇ ವಾಸಿಸಿ ಮತ್ತೆ ಗಂಡನ ಮನೆಗೆ ವಾಪಾಸಾಗಿದ್ದಾಳೆ.
ಇದನ್ನೂ ಓದಿ:ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ
ಮನೆಗೆ ಮರಳಿದ ಹೆಂಡತಿಗೆ ಗಂಡ ಲೈಂಗಿಕವಾಗಿ ಕಿರುಕುಳ ನೀಡಲಾರಂಭಿಸಿದ್ದಾನೆ. ವಿಚಿತ್ರ ಸೆಕ್ಸ್ ಪೊಸಿಷನ್​ಗಳನ್ನು ಮಾಡುವಂತೆ ಗೋಳಿಟ್ಟಿದ್ದಾನೆ. ಅದಕ್ಕೆ ಆಕೆ ಒಪ್ಪದಿದ್ದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ವಿಚಾರವನ್ನು ಆಕೆ ತವರು ಮನೆಯವರಿಗೆ ತಿಳಿಸಿದ್ದಳಂತೆ. ಪೊಲೀಸ್​ ದೂರು ನೀಡುವುದಾಗಿಯೂ ತಿಳಿಸಿದ್ದಳಂತೆ. ಆದರೆ ಮರ್ಯಾದೆಗೆ ಅಂಜಿದ ಆಕೆಯ ಕುಟುಂಬ ದೂರು ನೀಡದಿರುವಂತೆ ತಡೆದಿದ್ದಾರೆ. ಸೋಮವಾರದಂದೂ ಅದೇ ವಿಚಾರಕ್ಕೆ ಪತಿ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಸಿಟ್ಟಿಗೆದ್ದ ಮಹಿಳೆ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ. (ಏಜೆನ್ಸೀಸ್​)
ಮೂಗಿನ ಸರ್ಜರಿ ಮಾಡಿಸಿ, ಎರಡೂ ಕಾಲು ಕಳೆದುಕೊಂಡ ಯುವತಿ! ಚಿಕನ್​ ತಿಂದಿದ್ದೇ ಕಾರಣ ಎಂದ ಆಸ್ಪತ್ರೆ

ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + twenty =
Remember me
