ಕೋಲ್ಕತ:ಕಷ್ಟದ ಸಮಯದಲ್ಲಿ ಸಹಾಯ ಮಾಡಿದವರ ಋಣ ಮರೆಯಬಾರದು ಎನ್ನುತ್ತಾರೆ. ಆದರೆ ಕೆಲವರಿಗೆ ಋಣ ನೆನಪಿರುವುದು ಬದಿಗಿರಲಿ, ಅವರ ನೆನಪೂ ಕೂಡ ಇರುವುದಿಲ್ಲ. ಇಲ್ಲೊಬ್ಬ ವ್ಯಕ್ತಿಗೆ ಸಹಾಯ ಮಾಡಿದ ವ್ಯಕ್ತಿಯ ಬಗ್ಗೆ ಗೌರವವಿರುವ ಬದಲು ಕಾಮ ಭಾವನೆ ಹುಟ್ಟಿದ್ದು, ಸಾಲ ಕೊಟ್ಟಾಕೆಯ ಮೇಲೇ ಅತ್ಯಾಚಾರವೆಸಗಿಬಿಟ್ಟಿದ್ದಾನೆ.
ಇದನ್ನೂ ಓದಿ:ಮಗಳ ಲಗ್ನ ಪತ್ರಿಕೆಯಲ್ಲೇ ಡೆತ್​ ನೋಟ್​ ಬರೆದಿಟ್ಟು ಸಾವಿಗೆ ಶರಣಾದ ಅಪ್ಪ; ಇಷ್ಟಕ್ಕೆಲ್ಲ ಕಾರಣವಾಗಿದ್ದು ವರನ ಮನೆಯವರೇ
ಕೋಲ್ಕತದ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿ (16)ಗೂ ಮತ್ತು ಆಬಿರ್​ ನಾಸ್ಕರ್​ ಅಲಿಯಾಸ್​ ನಾಂತುಗೆ ಕೆಲ ತಿಂಗಳ ಹಿಂದೆ ಸೋಶಿಯಲ್​ ಮೀಡಿಯಾದಲ್ಲಿ ಸ್ನೇಹ ಬೆಳೆದಿತ್ತು. ಒಂದೇ ಊರಿನವರಾದ ಹಿನ್ನೆಲೆಯಲ್ಲಿ ಇಬ್ಬರ ಸ್ನೇಹ ಹೆಚ್ಚು ಗಟ್ಟಿಯಾಗಿಯೇ ರೂಪುಗೊಂಡಿತ್ತು. ಇಬ್ಬರೂ ಫೋನ್​ ಕರೆಗಳನ್ನೂ ಮಾಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಯಾವುದೋ ಸಮಸ್ಯೆ ಇದೆ ಎಂದು ಹೇಳಿ ವಿದ್ಯಾರ್ಥಿನಿ ಬಳಿ 4 ಸಾವಿರ ರೂಪಾಯಿ ಸಾಲವನ್ನು ನಾಂತು ಪಡೆದಿದ್ದಾನೆ. ತಿಂಗಳುಗಳು ಉರುಳಿದರೂ ಸಾಲವನ್ನು ಮರುಪಾವತಿಸಿಲ್ಲ.
ಸಾಲ ತೀರಿಸು ಎಂದು ವಿದ್ಯಾರ್ಥಿನಿ ಒತ್ತಡ ಹಾಕಲಾರಂಭಿಸಿದ್ದಾಳೆ. ಕಳೆದ ಗುರುವಾರ ಸಾಲ ತೀರಿಸುವುದಾಗಿ ಹೇಳಿದ ನಾಂತು, ವಿದ್ಯಾರ್ಥಿನಿಗೆ ತನ್ನ ಮನೆಗೆ ಬರಲು ತಿಳಿಸಿದ್ದಾನೆ. ನೀನು ನನ್ನ ಮನೆಗೆ ಬಾ, ನಿನ್ನ ಹಣವನ್ನು ನಾನು ಕೊಡುತ್ತೇನೆ ಎಂದು ಹೇಳಿದ್ದಾನೆ. ನಂಬಿ ಬಂದ ವಿದ್ಯಾರ್ಥಿನಿಯ ಮೇಲೆ ಆತ ಅತ್ಯಾಚಾರ ಮಾಡಿದ್ದಾನೆ. ಇನ್ನೊಮ್ಮೆ ಸಾಲ ವಾಪಾಸು ಕೇಳಿದರೆ ಸರಿ ಇರುವುದಿಲ್ಲ ಎಂದು ಬೆದರಿಕೆ ನೀಡಿದ್ದಾನೆ.
ಇದನ್ನೂ ಓದಿ:ಟಾಯ್ಲೆಟ್​ನಲ್ಲೇ ಮಗುವಿಗೆ ಜನ್ಮವಿತ್ತ ಅಪ್ರಾಪ್ತೆ! ಗರ್ಭಿಣಿ ಎನ್ನುವ ವಿಚಾರ ಅವಳಿಗೇ ಗೊತ್ತಿರಲಿಲ್ಲ
ಮನೆಗೆ ಬಂದ ವಿದ್ಯಾರ್ಥಿನಿ ತಂದೆ ತಾಯಿ ಬಳಿ ನಡೆದ ವಿಚಾರ ತಿಳಿಸಿದ್ದಾಳೆ. ಈ ವಿಚಾರವಾಗಿ ಪೋಷಕರು ಪೊಲೀಸ್​ ದೂರು ನೀಡಿದ್ದಾರೆ. ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ. ಆತ ಈ ಹಿಂದೆ ಒಮ್ಮೆ ಪ್ರಾಣಿಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದು, ಆತನ ವಿರುದ್ಧ ದೂರು ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಚಿಕ್ಕ ವಯಸ್ಸಿಗೇ ಚೆಫ್​ ಆದ್ರು ಗೋಲ್ಡನ್​ ಸ್ಟಾರ್​ ಗಣೇಶ್​ ಮಗಳು; ಈ ಕ್ಯೂಟ್​ ವಿಡಿಯೋಗೆ ನೀವು ಫಿದಾ ಆಗೋದು ಗ್ಯಾರಂಟಿ

ಹೆಂಡತಿ ಪ್ರೀತಿಯಿಂದ ಮಾಡಿಕೊಟ್ಟ ಟೀ ಕುಡಿದ ಪತಿ ಸಾವು, ಸ್ವಲ್ಪ ಹೊತ್ತಲ್ಲೇ ಆಸ್ಪತ್ರೆ ಸೇರಿದ ಪತ್ನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
