ಪಟನಾ:ತಂದೆಯೊಬ್ಬ ತನ್ನ ನಾಲ್ವರು ಮುದ್ದಾದ ಮಕ್ಕಳನ್ನೇ ಕೊಲೆ ಮಾಡಿರುವ ಘಟನೆ ಬಿಹಾರದ ಸಿವಾನ್​ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್​ ಆತನ ಹೆಂಡತಿ ಮತ್ತು ಓರ್ವ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ:ಮಂಡ್ಯದ ಕಬ್ಬಿನ ಗದ್ದೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ; ಕತ್ತು ಕೊಯ್ದು ಬರ್ಬರ ಹತ್ಯೆ
ಅವದೇಶ್​ ಚೌಧರಿ ಕೊಲೆ ಮಾಡಿರುವ ತಂದೆ. ಇತ್ತೀಚೆಗೆ ತರಕಾರಿ ತರಲೆಂದು ಮಾರುಕಟ್ಟೆಗೆ ಹೋದ ಈತ ಹರಿತವಾದ ಚಾಕುವೊಂದನ್ನು ಕೊಂಡು ಬಂದಿದ್ದಾನೆ. ಮನೆಗೆ ಬಂದವನೆ ತನ್ನ ಮಕ್ಕಳಾದ ಅಭಿಷೇಕ್​ (14), ಮುಕೇಶ್​ ಕುಮಾರ್​ (10), ಭೋಲಾ ಕುಮಾರ್​ (12) ಮತ್ತು ಮಗಳು ಜ್ಯೋತಿ (18)ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇನ್ನೊಬ್ಬ ಮಗಳು ಮತ್ತು ಹೆಂಡತಿಯ ಮೇಲೂ ಹಲ್ಲೆ ನಡೆಸಿದ್ದಾನಾದರೂ ತಪ್ಪಿಸಿಕೊಂಡಿರುವ ಅವರಿಬ್ಬರು ಇದೀಗ ಪಾಟ್ನಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಚಾರ ತಿಳಿದ ತಕ್ಷಣ ಪೊಲೀಸರು ಅವದೇಶ್​ನನ್ನು ವಶಕ್ಕೆ ಪಡೆದಿದ್ದಾರೆ. ಈತ ಒಬ್ಬ ಮಾನಸಿಕ ಅಸ್ವಸ್ಥನಾಗಿದ್ದು, ಸರಿಯಾದ ಸಮಯಕ್ಕೆ ಮಾತ್ರೆ ತೆಗೆದುಕೊಳ್ಳದ ಹಿನ್ನೆಲೆ ಸ್ಥಿಮಿತ ಕಳೆದುಕೊಂಡಿರುವುದಾಗಿ ವಿಚಾರಣೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ:ವರ್ತೂರು ಪ್ರಕಾಶ್​ ಕಿಡ್ನಾಪ್​ ಕೇಸ್​ಗೆ 4 ದಿಕ್ಕು! ಬಯಲಾಯ್ತು ಮಾಜಿ ಸಚಿವನ ಟೀಚರ್​ ಜತೆಗಿನ ಕಾರುಬಾರು
ಮಾರುಕಟ್ಟೆಯಿಂದ ಮನೆಗೆ ವಾಪಾಸಾಗುವಾಗ ನನ್ನ ಮೇಲೆ ಯಾರೋ ಅತಿಕ್ರಮಿಸಿದ ಹಾಗಾಯಿತು. ಯಾರೋ ಕೊಲೆ ಮಾಡು ಎಂದು ನೂಕಿದಂತಾಯಿತು. ಮನೆಗೆ ಹೋಗಿ ಏನು ಮಾಡಿದೆ ಎನ್ನುವುದು ನನಗೇ ಗೊತ್ತಿಲ್ಲ ಎಂದು ಅವದೇಶ್​ ಹೇಳಿದ್ದಾನೆ. (ಏಜೆನ್ಸೀಸ್​)
ಮಗನಿಗೆ ನೋವಾಗಬಾರದೆಂದು ಕೊಂದೇ ಬಿಟ್ಟ! ಮಗನ ಶವದ ಜತೆಯೇ ರಾತ್ರಿ ಮಲಗಿದ

ಮಕ್ಕಳ ಮೊಬೈಲ್​ನಲ್ಲಿ ಅಮ್ಮನ ರಾಸಲೀಲೆ ಫೋಟೋಸ್​! ದೂರಾದ ಲವರ್​ನಿಂದ ಮಹಿಳೆಗೆ ಕಾದಿತ್ತು ಶಾಕ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − thirteen =
Remember me
