ದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ ತಡರಾತ್ರಿ(ಮಂಗಳವಾರ) ಭಯಾನಕ ಘಟನೆ ಸಂಭವಿಸಿದೆ. ಯುವಕನೊಬ್ಬ ತನ್ನ ಜನ್ಮಕೊಟ್ಟ ತಂದೆ-ತಾಯಿ, ಅಕ್ಕರೆ ತೋರುತ್ತಾ ಜತೆಯಲ್ಲೇ ಬೆಳೆದ ಸಹೋದರಿ, ಕೈ ತುತ್ತು ಕೊಟ್ಟು ಸಾಕಿದ ಅಜ್ಜಿಯನ್ನೇ ಕೊಂದಿದ್ದಾನೆ.
ನೈಋತ್ಯ ದೆಹಲಿಯ ಪಾಲಂ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. 25 ವರ್ಷದ ಕೇಶವ ಎಂಬಾತ ಕೊಲೆ ಆರೋಪಿ. ಈತನ ತಂದೆ ದಿನೇಶ್​ ಕುಮಾರ್​(42), ತಾಯಿ ದರ್ಶನ್​ ಸೈನಿ(40), ಸಹೋದರಿ ಊರ್ವಸಿ(23) ಮತ್ತು ಅಜ್ಜಿ ದೇವನೋ ದೇವಿ ಮೃತ ದುರ್ದೈವಿಗಳು. ಇಂದು ಬೆಳಗ್ಗೆ(ಬುಧವಾರ) ಆರೋಪಿ ಕೇಶವನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಾಥಮಿಕ ತನಿಖಾ ವರದಿ ಪ್ರಕಾರ, ಆರೋಪಿ ಕೇಶವ ಮದ್ಯವ್ಯಸನಿಯಾಗಿದ್ದ. ಕೆಲಸಕ್ಕೆ ಹೋಗುತ್ತಿರಲಿಲ್ಲ. ಇದೇ ವಿಚಾರಕ್ಕೆ ಮನೆಯಲ್ಲಿ ಜಗಳ ಆಗುತ್ತಿತ್ತು ಎನ್ನಲಾಗಿದೆ. ಅಪ್ಪ-ಅಮ್ಮ, ಸಹೋದರಿ, ಅಜ್ಜಿಯನ್ನು ಚಾಕುವಿನಿಂದ ಇರಿದು ಅಮಾನುಷವಾಗಿ ಕೊಲೆ ಮಾಡಿದ್ದಾನೆ.
ಗೆಳೆಯನನ್ನು ಕೊಂದು ಕಾರಿನಲ್ಲಿ ಮೃತದೇಹದೊಂದಿಗೆ ಪೊಲೀಸ್ ಠಾಣೆಗೇ ಬಂದ ಭೂಪ! ಬೆಂಗಳೂರಲ್ಲಿ ಬೆಚ್ಚಿಬೀಳಿಸೋ ಘಟನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಣಬೆ ಪದಾರ್ಥ ತಿಂದು ತಂದೆ-ಮಗ ಸಾವು!? ರಾತ್ರಿಯಿಡೀ ನರಳಾಡಿ ಮನೆಯ ಅಂಗಳದಲ್ಲೇ ದುರಂತ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − twelve =
Remember me
