ಬೆಂಗಳೂರು:ಎರಡನೇ ಮಗು ಕೂಡ ಹೆಣ್ಣು ಎಂಬ ಬೇಸರಕ್ಕೆ ಒಳಗಾದ ತಂದೆ, ತನ್ನ ಮೊದಲ ಮಗಳು, ಐದು ವರ್ಷದ ಬಾಲಕಿಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಈ ಬಗ್ಗೆ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ತೆಲಂಗಾಣದ ಪ್ರಕಾಶಂ ಜಿಲ್ಲೆಯ ವೆಂಕಟೇಶ್ವರ ರಾವ್ ಬಂಧಿತ ತಂದೆ. ಆತನ ಪತ್ನಿ ಬೆಂಗಳೂರಿನ ನಯನ ಎಂಬಾಕೆಯ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಬೆಂಗಳೂರಿನ ಎಚ್​ಎಎಲ್ ಪ್ರದೇಶದ ರೆಡ್ಡಿಪಾಳ್ಯದ ನಿವಾಸಿ ನಯನ ಹಾಗೂ ಖಾಸಗಿ ಕಂಪನಿಯ ಉದ್ಯೋಗಿ ವೆಂಕಟೇಶ್ ರಾವ್ 2016ರಲ್ಲಿ ಮದುವೆಯಾಗಿದ್ದರು. ಇವರಿಗೆ ಐದು ವರ್ಷದ ಮಗಳಿದ್ದು, ಹತ್ತು ದಿನಗಳ ಹಿಂದಷ್ಟೇ ಮತ್ತೆ ಹೆರಿಗೆಯಾಗಿದ್ದು, ಎರಡನೇ ಮಗು ಕೂಡ ಹೆಣ್ಣೇ ಹುಟ್ಟಿತ್ತು.
ಇದನ್ನೂ ಓದಿ:ಪಠ್ಯಪರಿಷ್ಕರಣೆ ವಿವಾದ ಈಗ ಕನಕದಾಸರ ತನಕ: ಮುಖ್ಯಮಂತ್ರಿಯನ್ನು ಭೇಟಿಯಾದ ಸ್ವಾಮೀಜಿ..
ಹೆಂಡತಿಯ ಮನೆಗೆ ಮಗುವನ್ನು ನೋಡಲು ಬಂದಿದ್ದ ವೆಂಕಟೇಶ್ವರ ರಾವ್, ಎರಡನೇ ಮಗು ಕೂಡ ಹೆಣ್ಣೇ ಹುಟ್ಟಿದ್ದ ಹಿನ್ನೆಲೆಯಲ್ಲಿ ಪತ್ನಿಯೊಂದಿಗೆ ಜಗಳವಾಡಿದ್ದ. ಮಾತಿಗೆ ಮಾತು ವಿಕೋಪಕ್ಕೆ ತೆರಳಿದಾಗ ಆತ ತನ್ನ ಮೊದಲನೇ ಮಗಳನ್ನು ಕುತ್ತಿಗೆ ಹಿಸುಕಿ ಸಾಯಿಸಲು ಮುಂದಾಗಿದ್ದ. ಹೀಗಾಗಿ ನಯನ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಟೆಸ್ಟ್​ ಡ್ರೈವ್ ವೇಳೆ ಮೂರನೇ ಮಹಡಿಯಿಂದ ಬಿದ್ದ ಕಾರು; ಇಬ್ಬರು ಸ್ಥಳದಲ್ಲೇ ಸಾವು..

ಕಾರಿನ ಗಾಜನ್ನು ಒರೆಸುತ್ತ ಫಾಸ್ಟ್ಯಾಗ್ ಹಣ ಕಬಳಿಸುವವರ ಹಾವಳಿ?; ಹೊರಬಿತ್ತು ಅಸಲಿಯತ್ತು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − ten =
Remember me
